ಇಂಗ್ಲೆಂಡ್ ವಿರುದ್ಧದ  ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಪ್ರದರ್ಶನ ಹೇಗಿದೆ. ಒಂದೆಡೆ ಮಳೆ, ಮತ್ತೊಂದೆಡೆ ಇಂಗ್ಲೆಂಡ್ ವೇಗಿಗಳ ಆರ್ಭಟ, ವಿರಾಟ್ ಕೊಹ್ಲಿ ಸೈನ್ಯಕ್ಕೆ ತಲೆನೋವು ತಂದಿದೆ.  ಇಲ್ಲಿದೆ ಲಾರ್ಡ್ಸ್ ಟೆಸ್ಟ್ ಪಂದ್ಯದ ಅಪ್‌ಡೇಟ್ಸ್.

ಲಾರ್ಡ್ಸ್(ಆ.10): ಸತತ ಮಳೆಯಿಂದಾಗಿ ತಾತ್ಕಾಲಿಕ ಸ್ಧಗಿತಗೊಂಡಿದ್ದ ಭಾರತ ಹಾಗೂ ಇಂಗ್ಲೆಂಡ್ ನಡುವಿನ 2ನೇ ಟೆಸ್ಟ್ ಪಂದ್ಯ ಮತ್ತೆ ಆರಂಭಗೊಂಡಿದೆ. ಆದರೆ ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ಭಾರತ ಆರಂಭದಲ್ಲೇ ಸಂಕಷ್ಟಕ್ಕೆ ಸಿಲುಕಿದೆ. ಪಂದ್ಯ ಆರಂಭಗೊಂಡ ಕೆಲ ಕ್ಷಣಗಳಲ್ಲೇ ಟೀಂ ಇಂಡಿಯಾ 2 ವಿಕೆಟ್ ಕಳೆದುಕೊಂಡು ಹಿನ್ನಡೆ ಅನುಭವಿಸಿತ್ತು. 15 ರನ್‌ಗಳಿಸುವಷ್ಟರಲ್ಲೇ ಮತ್ತೊಂದು ವಿಕೆಟ್ ಪತನವಾಗೋ ಮೂಲಕ 3 ವಿಕೆಟ್ ಕಳೆದುಕೊಂಡಿತು. 

ನಿರಂತರವಾಗಿ ಸುರಿದ ಮಳೆಯಿಂದಾಗಿ ಪಂದ್ಯವನ್ನ ಕೆಲಕಾಲ ಸ್ಥಗಿತಗೊಳಿಸಲಾಗಿತ್ತು. ಇದೀಗ ಮತ್ತೆ ಪಂದ್ಯ ಆರಂಭಗೊಂಡಿದೆ. ಸದ್ಯ ಕ್ರೀಸ್‌ನಲ್ಲಿರೋ ನಾಯಕ ವಿರಾಟ್ ಕೊಹ್ಲಿ ಹಾಗೂ ಉಪನಾಯಕ ಅಜಿಂಕ್ಯ ರಹಾನೆ ಟೀಂ ಇಂಡಿಯಾವನ್ನ ಕಾಪಾಡಬೇಕಿದೆ. 

Scroll to load tweet…

ಟಾಸ್ ಸೋತು ಬ್ಯಾಟಿಂಗ್ ಇಳಿದ ಟೀಂ ಇಂಡಿಯಾ ರನ್ ಖಾತೆ ಆರಂಭಿಸೋ ಮೊದಲೇ ಮುರಳಿ ವಿಜಯ್ ವಿಕೆಟ್ ಕಳೆದುಕೊಂಡಿತು. ಕೆಎಲ್ ರಾಹುಲ್ 8 ರನ್ ಸಿಡಿಸಿ ಔಟಾದರು. ಇದೀಗ ಪೂಜಾರ ಕೂಡ ಪೆವಿಲಿಯನ್ ಸೇರಿರೋದು ಭಾರತದ ತಲೆನೋವು ಹೆಚ್ಚಿಸಿದೆ.