ವಿಕೆಟ್ ಪತನದ ಬೆನ್ನಲ್ಲೇ ಟೀಂ ಇಂಡಿಯಾಗೆ ಅಡ್ಡಿಯಾಯ್ತು ಮಳೆ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 10, Aug 2018, 4:22 PM IST
Ind Vs Eng Test Lords test play stopped due to rain
Highlights

ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ಕಮ್‌ಬ್ಯಾಕ್ ಮಾಡಲು ತುದಿಗಾಲಲ್ಲಿ ನಿಂತಿದ್ದ ಟೀಂ ಇಂಡಿಯಾಗೆ ಆರಂಭದಲ್ಲೇ ಹಿನ್ನಡೆಯಾಗಿದೆ. 2 ವಿಕೆಟ್ ಕಳೆದುಕೊಂಡು ಆತಂಕದ ಪರಿಸ್ಥಿತಿ ಎದುರಿಸಿದ್ದ ವಿರಾಟ್ ಕೊಹ್ಲಿ ಸೈನ್ಯಕ್ಕೆ ಇದೀಗ ಮಳೆ ಕೂಡ ಅಡ್ಡಿಯಾಗಿದೆ.

ಲಾರ್ಡ್ಸ್(ಆ.10): ಭಾರತ ಹಾಗೂ ಇಂಗ್ಲೆಂಡ್ ನಡುವಿನ ಲಾರ್ಡ್ಸ್ ಟೆಸ್ಟ್ ಪಂದ್ಯಕ್ಕೆ ಮತ್ತೆ ಮಳೆ ಅಡ್ಡಿಯಾಗಿದೆ. ಮೊದಲ ದಿನ ಸಂಪೂರ್ಣವಾಗಿ ಮಳೆಯಿಂದಾಗಿ ರದ್ದಾಗಿತ್ತು. ಹೀಗಾಗಿ 2ನೇ ದಿನ ಟಾಸ್ ಗೆದ್ದ ಇಂಗ್ಲೆಂಡ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡು ಅತ್ಯುತ್ತಮ ದಾಳಿ ಸಂಘಟಿಸಿತ್ತು.

ರನ್ ಖಾತೆ ಆರಂಭಿಸೋ ಮೊದಲೇ ಭಾರತ ಮರುಳಿ ವಿಜಯ್ ವಿಕೆಟ್ ಪತನಗೊಂಡಿತ್ತು. ಇನ್ನು ಕೆಎಲ್ ರಾಹುಲ್  ಅಬ್ಬರ ಕೇವಲ 2 ಬೌಂಡರಿಗೆ ಸೀಮಿತವಾದರು. 6.3 ಓವರ್‌ಗಳಲ್ಲಿ ಭಾರತ 2 ವಿಕೆಟ್ ನಷ್ಟಕ್ಕೆ 11 ರನ್ ಸಿಡಿಸಿತ್ತು. ಅಷ್ಟರಲ್ಲೇ ಸುರಿದ ಮಳೆಯಿಂದಾಗಿ ಪಂದ್ಯವನ್ನ ತಾತ್ಕಾಲಿಕ ಸ್ಥಗಿತಗೊಳಿಸಲಾಗಿದೆ.

 

 

5 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್ ಈಗಾಗಲೇ 1-0 ಮುನ್ನಡೆ ಸಾಧಿಸಿದೆ. ಹೀಗಾಗಿ 2ನೇ ಟೆಸ್ಟ್ ಪಂದ್ಯದಲ್ಲಿ ಕಮ್‌ಬ್ಯಾಕ್ ಮಾಡೋ ವಿಶ್ವಾಸದಲ್ಲಿದ್ದ ಟೀಂ ಇಂಡಿಯಾಗೆ ಇಂಗ್ಲೆಂಡ್ ಜೊತೆಗೆ ಮಳೆರಾಯ ಕೂಡ ಅಡ್ಡಿಯಾಗಿದ್ದಾನೆ.

loader