ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ಅವಕಾಶ ಪಡದೆ ಚೇತೇಶ್ವರ್ ಪೂಜಾರ ರನೌಟ್‌ಗೆ ಬಲಿಯಾಗಿದ್ದಾರೆ. ಇಲ್ಲದ ರನ್ ಕದಿಯಲು ಹೋಗಿ ಭಾರತ 3ನೇ ವಿಕೆಟ್ ಕಳೆದುಕೊಂಡಿದೆ. ಆದರೆ ಪೂಜಾರ ರನೌಟ್‌ಗೆ ಕಾರಣ ಯಾರು? ಇಲ್ಲಿದೆ ವಿವರ.

ಲಾರ್ಡ್ಸ್(ಆ.10): ಇಂಗ್ಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಭಾರತ ಆರಂಭದಲ್ಲೇ ಹಿನ್ನಡೆ ಅನುಭವಿಸಿದೆ. ಮಳೆಯಿಂದಾಗಿ ಸ್ಥಗಿತಗೊಂಡಿರುವ ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ಭಾರತ 3 ವಿಕೆಟ್ ನಷ್ಟಕ್ಕೆ 15 ರನ್ ಗಳಿಸಿ ಸಂಕಷ್ಟದಲ್ಲಿದೆ.

2ನೇ ಟೆಸ್ಟ್ ಪಂದ್ಯದಲ್ಲಿ ಅವಕಾಶ ಪಡೆದ ಚೇತೇಶ್ವರ್ ಪೂಜಾರ ಭಾರತಕ್ಕೆ ಆಧಾರವಾಗಿದ್ದರು. ಆದರೆ ನಾಯಕ ವಿರಾಟ್ ಕೊಹ್ಲಿ ರನ್‌ಗಾಗಿ ಕರೆ ನೀಡಿ, ಅರ್ಧದಲ್ಲಿ ಕೈಕೊಟ್ಟಿದ್ದಾರೆ. ಹೀಗಾಗಿ ಚೇತೇಶ್ವರ್ ಪೂಜಾರ ರನೌಟ್ ಆಗಿದ್ದಾರೆ ಅನ್ನೋ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಕೇಳಿಬಂದಿದೆ.

Scroll to load tweet…

ಜೇಮ್ಸ್ ಆಂಡರ್ಸನ್ ಎಸೆತವನ್ನ ಡಿಫೆನ್ಸ್ ಮಾಡಿದ ಪೂಜಾರ ರನ್‌ಗಾಗಿ ಒಂದೆರಡು ಹೆಜ್ಜೆ ಇಟ್ಟಿದ್ದಾರೆ. ಅಷ್ಟರಲ್ಲೇ ನಾನ್ ಸ್ಟ್ರೈಕರ್‌ನಲ್ಲಿದ್ದ ವಿರಾಟ್ ಕೊಹ್ಲಿ ನೇರವಾಗಿ ರನ್ ಕದಿಯಲು ಸೂಚನೆ ನೀಡಿ ಮುನ್ನಗ್ಗಿದ್ದಾರೆ. ಅಷ್ಟರಲ್ಲೇ ರನೌಟ್ ಸೂಚನೆ ಅರಿತ ಕೊಹ್ಲಿ ಅರ್ಧದಿಂದ ವಾಪಾಸ್ ತೆರಳಿದ್ದಾರೆ. ಆದರೆ ಇದ್ಯಾವುದನ್ನ ಗಮಿಸಿದ ಪೂಜಾರ ರನೌಟ್‌ಗೆ ಬಲಿಯಾಗಿದ್ದಾರೆ.

ಪೂಜಾರ ಕ್ರೀಸ್‌ನಲ್ಲಿದ್ದರೆ ಸಾಕು ಭಾರತ ವಿಕೆಟ್ ಪತನಕ್ಕೆ ಪೂರ್ಣವಿರಾಮ ಬೀಳುತ್ತಿತ್ತು. ಕಾರಣ ಪೂಜಾರರ 24 ಎಸೆತ ಎದುರಿಸಿದ್ದರು. ಆದರೆ ಟೆಸ್ಟ್ ಕ್ರಿಕೆಟ್‌ನಲ್ಲಿ ರನೌಟ್‌ಗೆ ಬಲಿಯಾಗೋ ಮೂಲಕ ನಿರಾಸೆ ಅನುಭವಿಸಿದ್ದಾರೆ.