ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಮೂರನೇ ಓವರ್’ನ ಮೊದಲ ಎಸೆತದಲ್ಲೇ ಜನ್ನಿಂಗ್ಸ್ ವಿಕೆಟ್ ಕಳೆದುಕೊಂಡಿತ್ತು. ಇದೀಗ ಇಶಾಂತ್ ಶರ್ಮಾ ಬೌಲಿಂಗ್’ನಲ್ಲಿ ಜೋ ರೋಟ್ ಎಲ್’ಬಿ ಬಲೆಗೆ ಬೀಳುವುದರೊಂದಿಗೆ ಪೆವಿಲಿಯನ್ ಸೇರಿದ್ದಾರೆ.
ಸೌತಾಂಪ್ಟನ್[ಆ.30]: ಟೀಂ ಇಂಡಿಯಾ ಮಾರಕ ದಾಳಿಗೆ ತತ್ತರಿಸಿರುವ ಇಂಗ್ಲೆಂಡ್ ಎರಡನೇ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಈ ವಿಕೆಟ್ ಕಬಳಿಸುವುದರೊಂದಿಗೆ ಇಶಾಂತ್ ಶರ್ಮಾ ಹೊಸ ದಾಖಲೆ ಬರೆದಿದ್ದಾರೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಮೂರನೇ ಓವರ್’ನ ಮೊದಲ ಎಸೆತದಲ್ಲೇ ಜನ್ನಿಂಗ್ಸ್ ವಿಕೆಟ್ ಕಳೆದುಕೊಂಡಿತ್ತು. ಇದೀಗ ಇಶಾಂತ್ ಶರ್ಮಾ ಬೌಲಿಂಗ್’ನಲ್ಲಿ ಜೋ ರೋಟ್ ಎಲ್’ಬಿ ಬಲೆಗೆ ಬೀಳುವುದರೊಂದಿಗೆ ಪೆವಿಲಿಯನ್ ಸೇರಿದ್ದಾರೆ. ಇಂಗ್ಲೆಂಡ್ ತಂಡದ ಮೊತ್ತ 15 ರನ್’ಗಳಿಗೆ 2 ವಿಕೆಟ್ ಕಳೆದುಕೊಂಡಿದ್ದು, ಆರಂಭಿಕ ಆಲಿಸ್ಟರ್ ಕುಕ್ 9 ಹಾಗೂ ಜಾನಿ ಬೈರ್’ಸ್ಟೋ 1 ಬ್ಯಾಟಿಂಗ್ ನಡೆಸುತ್ತಿದ್ದಾರೆ.
250 ವಿಕೆಟ್ ಪೂರೈಸಿದ ಇಶಾಂತ್: ಟೀಂ ಇಂಡಿಯಾದ ವೇಗದ ಬೌಲರ್ ಇಶಾಂತ್ ಶರ್ಮಾ ಇಂಗ್ಲೆಂಡ್ ನಾಯಕ ಜೋ ರೂಟ್ ವಿಕೆಟ್ ಕಬಳಿಸುವುದರೊಂದಿಗೆ ಟೆಸ್ಟ್ ಕ್ರಿಕೆಟ್’ನಲ್ಲಿ 250 ವಿಕೆಟ್ ಪೂರೈಸಿದ ಬೌಲರ್ ಎನ್ನುವ ದಾಖಲೆ ಬರೆದಿದ್ದಾರೆ. ಜತೆಗೆ ಇಂಗ್ಲೆಂಡ್ ವಿರುದ್ಧವೇ 50 ವಿಕೆಟ್ ಕಬಳಿಸಿದ ಬೌಲರ್ ಎನ್ನುವ ಮೈಲಿಗಲ್ಲು ಸ್ಥಾಪಿಸಿದರು.
