ಪ್ರಸಕ್ತ ಸರಣಿಯಲ್ಲಿ ಇಶಾಂತ್ (18) ವಿಕೆಟ್ ಪಡೆದಿದ್ದಾರೆ. ಒಟ್ಟಾರೆ ಇಂಗ್ಲೆಂಡ್ ವಿರುದ್ಧ 12 ಪಂದ್ಯಗಳಲ್ಲಿ 43 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಕಪಿಲ್, ಇಂಗ್ಲೆಂಡ್ ವಿರುದ್ಧ 13 ಪಂದ್ಯಗಳಲ್ಲಿ 43 ವಿಕೆಟ್ ಪಡೆದಿದ್ದರು. 2ನೇ ಇನ್ನಿಂಗ್ಸ್’ನಲ್ಲಿ ಇಶಾಂತ್ ವಿಕೆಟ್ ಪಡೆದರೆ ಕಪಿಲ್ ದಾಖಲೆಯನ್ನು ಮುರಿಯಲಿದ್ದಾರೆ.

ಲಂಡನ್[ಸೆ.10]: ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರುತ್ತಿರುವ ವೇಗಿ ಇಶಾಂತ್ ಶರ್ಮಾ, ಭಾರತದ ಮಾಜಿ ನಾಯಕ ಕಪಿಲ್ ದೇವ್ ಹೆಸರಲ್ಲಿದ್ದ ದಾಖಲೆಯೊಂದನ್ನು ಸರಿಗಟ್ಟಿದ್ದಾರೆ. 

ಪ್ರಸಕ್ತ ಸರಣಿಯಲ್ಲಿ ಇಶಾಂತ್ (18) ವಿಕೆಟ್ ಪಡೆದಿದ್ದಾರೆ. ಒಟ್ಟಾರೆ ಇಂಗ್ಲೆಂಡ್ ವಿರುದ್ಧ 12 ಪಂದ್ಯಗಳಲ್ಲಿ 43 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಕಪಿಲ್, ಇಂಗ್ಲೆಂಡ್ ವಿರುದ್ಧ 13 ಪಂದ್ಯಗಳಲ್ಲಿ 43 ವಿಕೆಟ್ ಪಡೆದಿದ್ದರು. 2ನೇ ಇನ್ನಿಂಗ್ಸ್’ನಲ್ಲಿ ಇಶಾಂತ್ ವಿಕೆಟ್ ಪಡೆದರೆ ಕಪಿಲ್ ದಾಖಲೆಯನ್ನು ಮುರಿಯಲಿದ್ದಾರೆ. ಅನಿಲ್ ಕುಂಬ್ಳೆ 10 ಪಂದ್ಯಗಳಿಂದ 36 ವಿಕೆಟ್ ಪಡೆದು 3ನೇ ಸ್ಥಾನದಲ್ಲಿದ್ದಾರೆ.

ಇದನ್ನು ಓದಿ:ನಾಲ್ಕನೇ ಟೆಸ್ಟ್’ನ ಮೂರನೇ ದಿನ ನಿರ್ಮಾಣವಾದ ದಾಖಲೆಗಳಿವು

ಈ ಬಾರಿಯ ಇಂಗ್ಲೆಂಡ್ ಪ್ರವಾಸದಲ್ಲಿ ಭಾರತೀಯ ವೇಗಿಗಳ ದರ್ಬಾರ್ ಮುಂದುವರೆದಿದ್ದು ಇದುವರೆಗೆ ಟೀಂ ಇಂಡಿಯಾ 60 ವಿಕೆಟ್ ಕಬಳಿಸಿದ್ದು ಹೊಸ ಇತಿಹಾಸ ಬರೆದಿದೆ. ಈವರೆಗೆ ಸರಣಿಯೊಂದರಲ್ಲಿ ಟೀಂ ಇಂಡಿಯಾ ವೇಗಿಗಳು 58 ವಿಕೆಟ್ ಕಬಳಿಸಿದ್ದೇ ಗರಿಷ್ಠ ಸಾಧನೆಯಾಗಿತ್ತು. 1979-20ರಲ್ಲಿ ಪಾಕಿಸ್ತಾನ ವಿರುದ್ಧ ಕಪಿಲ್ ದೇವ್ ನೇತೃತ್ವದ ವೇಗಿಗಳ ಪಡೆ 58 ವಿಕೆಟ್ ಕಬಳಿಸಿ ದಾಖಲೆ ಬರೆದಿತ್ತು.

ಇದನ್ನು ಓದಿ:ಇಂಡೋ-ಆಂಗ್ಲೋ ಟೆಸ್ಟ್: ಒಂದೇ ಗೆಲುವಿನಲ್ಲಿ ನಿರ್ಮಾಣವಾಯ್ತು ಹಲವು ದಾಖಲೆಗಳು