Asianet Suvarna News Asianet Suvarna News

ನಾಲ್ಕನೇ ಟೆಸ್ಟ್’ನ ಮೂರನೇ ದಿನ ನಿರ್ಮಾಣವಾದ ದಾಖಲೆಗಳಿವು

ಇಂಗ್ಲೆಂಡ್ ಪರ ಬಟ್ಲರ್ 69 ರನ್ ಸಿಡಿಸಿದರೆ, ರೂಟ್ 48 ಹಾಗೂ ಸ್ಯಾಮ್ ಕುರ್ರಾನ್ 37 ರನ್ ಬಾರಿಸಿ ಅಜೇಯರಾಗುಳಿದಿದ್ದಾರೆ. ಶಮಿ ನಾಲ್ಕು ವಿಕೆಟ್ ಪಡೆದರೆ, ಇಶಾಂತ್ ಶರ್ಮಾ 2 ಮತ್ತು ಬುಮ್ರಾ ಹಾಗೂ ಅಶ್ವಿನ್ ತಲಾ ಒಂದೊಂದು ವಿಕೆಟ್ ಪಡೆದಿದ್ದಾರೆ. 

Ind Vs Eng Team India Create a Fresh Unwanted Record
Author
Southampton, First Published Sep 2, 2018, 3:47 PM IST

ಸೌತಾಂಪ್ಟನ್[ಸೆ.02]: ಭಾರತ-ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ರೋಚಕ ಘಟ್ಟ ತಲುಪಿದ್ದು, ಮೂರನೇ ದಿನದಂತ್ಯಕ್ಕೆ ಇಂಗ್ಲೆಂಡ್ 8 ವಿಕೆಟ್ ಕಳೆದುಕೊಂಡು 260 ರನ್ ಬಾರಿಸಿದ್ದು, ನಾಲ್ಕನೇ ದಿನದಾಟದ ಮೊದಲ ಎಸೆತದಲ್ಲೇ ಮತ್ತೊಂದು ವಿಕೆಟ್ ಕಳೆದುಕೊಂಡಿದೆ.

ಎರಡನೇ ಇನ್ನಿಂಗ್ಸ್’ನಲ್ಲಿ 233 ರನ್’ಗಳ ಮುನ್ನಡೆ ಸಾಧಿಸಿದೆ. ಇಂಗ್ಲೆಂಡ್ ಪರ ಬಟ್ಲರ್ 69 ರನ್ ಸಿಡಿಸಿದರೆ, ರೂಟ್ 48 ಹಾಗೂ ಸ್ಯಾಮ್ ಕುರ್ರಾನ್ 37 ರನ್ ಬಾರಿಸಿ ಅಜೇಯರಾಗುಳಿದಿದ್ದಾರೆ. ಶಮಿ ಮೂರು ವಿಕೆಟ್ ಪಡೆದರೆ, ಇಶಾಂತ್ ಶರ್ಮಾ 2 ಮತ್ತು ಬುಮ್ರಾ ಹಾಗೂ ಅಶ್ವಿನ್ ತಲಾ ಒಂದೊಂದು ವಿಕೆಟ್ ಪಡೆದಿದ್ದಾರೆ. 

ಮೂರನೇ ದಿನ ನಿರ್ಮಾಣವಾದ ಕೆಲವು ಇಂಟ್ರೆಸ್ಟಿಂಗ್ ಅಂಕಿ-ಅಂಶಗಳು ನಿಮ್ಮ ಮುಂದೆ...

30 ರನ್ ಬೈಸ್’ನಲ್ಲಿ: ಟೀಂ ಇಂಡಿಯಾ ಈ ಟೆಸ್ಟ್’ನಲ್ಲಿ 30 ರನ್ ಬಿಟ್ಟುಕೊಟ್ಟಿದೆ. ಈ ಮೊದಲು 2007ರಲ್ಲಿ ಪಾಕಿಸ್ತಾನ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ 47 ರನ್ ಬೈಸ್’ನಲ್ಲಿ ಬಿಟ್ಟುಕೊಟ್ಟಿದ್ದರು.

44ರ ಸರಾಸರಿ: ಕಳಪೆ ಫಾರ್ಮ್’ನಲ್ಲಿರುವ ಕುಕ್ ಇದೇ ಮೊದಲ ಬಾರಿಗೆ 8 ವರ್ಷಗಳ ಬಳಿಕ 44ರ ಸರಾಸರಿಗೆ ಕುಸಿದದ್ದಾರೆ. ಆಡಿದ 7 ಇನ್ನಿಂಗ್ಸ್’ನಲ್ಲಿ 15ರ ಸರಾಸರಿಯಲ್ಲಿ 109 ರನ್ ಬಾರಿಸಿದ್ದಾರೆ.

242 ರನ್: ಇಂಗ್ಲೆಂಡ್ ಪರ ಟೆಸ್ಟ್ ಸರನಿಯೊಂದರಲ್ಲಿ 8ನೇ ಕ್ರಮಾಂಕದಲ್ಲಿ ಬ್ಯಾಟಿಂಗ್’ಗಿಳಿದು ಗರಿಷ್ಠ ರನ್ ಸಿಡಿಸಿದ ಬ್ಯಾಟ್ಸ್’ಮನ್ ಎನ್ನುವ ಶ್ರೇಯಕ್ಕೆ 20 ವರರ್ಷದ ಕುರ್ರಾನ್ ಪಾತ್ರರಾಗಿದ್ದಾರೆ. ಈ ಮೊದಲು ಮೊಯಿನ್ ಅಲಿ 2015ರ ಆ್ಯಷಸ್ ಸರಣಿಯಲ್ಲಿ 220 ರನ್ ಸಿಡಿಸಿದ್ದೇ ಇದುವರೆಗಿನ ಸಾಧನೆಯಾಗಿತ್ತು.

2ನೇ ನಾಯಕ: 2010ರ ಬಳಿಕ ಒಂದೇ ಟೆಸ್ಟ್’ನಲ್ಲಿ ಎರಡೆರಡು ಬಾರಿ ರನೌಟ್ ಆದ ಎರಡನೇ ನಾಯಕ ಎನ್ನುವ ಅಪಖ್ಯಾತಿಗೆ ಜೋ ರೂಟ್ ಪಾತ್ರರಾಗಿದ್ದಾರೆ. 2010ರಲ್ಲಿ ಅಸ್ಟ್ರೇಲಿಯಾ ನಾಯಕರಾಗಿದ್ದ ರಿಕಿ ಪಾಂಟಿಂಗ್ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ 2 ಬಾರಿ ರನೌಟ್ ಆಗಿದ್ದರು.
       
 

Follow Us:
Download App:
  • android
  • ios