Asianet Suvarna News Asianet Suvarna News

ಇಂಡೋ-ಆಂಗ್ಲೋ ಟೆಸ್ಟ್: ಒಂದೇ ಗೆಲುವಿನಲ್ಲಿ ನಿರ್ಮಾಣವಾಯ್ತು ಹಲವು ದಾಖಲೆಗಳು

ಭಾರತ-ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್’ನಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ 203 ರನ್’ಗಳ ಭರ್ಜರಿ ಜಯ ದಾಖಲಿಸಿದೆ. ಈ ಮೂಲಕ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-1ರ ಅಂತರ ಕಾಯ್ದುಕೊಂಡಿದ್ದು, ಸರಣೀ ಗೆಲ್ಲುವ ಆಸೆ ಜೀವಂತವಾಗಿರಿಸಿಕೊಂಡಿದೆ.

Ind Vs Eng Records created by both the teams in the third Test
Author
Bengaluru, First Published Aug 22, 2018, 5:22 PM IST

ಬೆಂಗಳೂರು[ಆ.22]: ಭಾರತ-ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್’ನಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ 203 ರನ್’ಗಳ ಭರ್ಜರಿ ಜಯ ದಾಖಲಿಸಿದೆ. ಈ ಮೂಲಕ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-1ರ ಅಂತರ ಕಾಯ್ದುಕೊಂಡಿದ್ದು, ಸರಣೀ ಗೆಲ್ಲುವ ಆಸೆ ಜೀವಂತವಾಗಿರಿಸಿಕೊಂಡಿದೆ.
ಮೂರನೇ ಟೆಸ್ಟ್’ನಲ್ಲಿ ಭರ್ತಿ 200 ರನ್ ಬಾರಿಸಿದ ವಿರಾಟ್ ಕೊಹ್ಲಿ ಅರ್ಹವಾಗಿಯೇ ಪಂದ್ಯಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು. ಈ ಪಂದ್ಯ ಹಲವು ದಾಖಲೆಗಳಿಗೆ ಸಾಕ್ಷಿಯಾದವು. ಅಂತಹ ಪ್ರಮುಖ ದಾಖಲೆಗಳ ಪೈಕಿ ಕೆಲವು ನಿಮ್ಮ ಮುಂದೆ...

01: ಪದಾರ್ಪಣಾ ಪಂದ್ಯದಲ್ಲಿ ಸಿಕ್ಸರ್ ಮೂಲಕ ಖಾತೆ ತೆರೆದ ಭಾರತದ ಮೊದಲ ವಿಶ್ವದ 12ನೇ ಬ್ಯಾಟ್ಸ್’ಮನ್ ಎನ್ನುವ ಕೀರ್ತಿಗೆ ರಿಶಭ್ ಪಂತ್ ಪಾತ್ರರಾಗಿದ್ದಾರೆ.

02: ಭಾರತ ವಿರುದ್ಧ ನೂರಕ್ಕೂ ಹೆಚ್ಚು ವಿಕೆಟ್ ಪಡೆದ ಎರಡನೇ ಬೌಲರ್ ಎನ್ನುವ ಕೀರ್ತಿಗೆ ಜೇಮ್ಸ್ ಆ್ಯಂಡರ್’ಸನ್ ಪಾತ್ರರಾಗಿದ್ದಾರೆ. ಮೊದಲ ಸ್ಥಾನದಲ್ಲಿ ಶ್ರೀಲಂಕಾದ ಮಾಂತ್ರಿಕ ಸ್ಪಿನ್ನರ್ ಮುತ್ತಯ್ಯ ಮುರುಳೀಧರನ್ ಇದ್ದಾರೆ. 

09: ಮೂರು ಸಾವಿರ ರನ್ ಹಾಗೂ 300 ವಿಕೆಟ್ ಪೂರೈಸಿದ 9ನೇ ಆಲ್ರೌಂಡರ್ ಎನ್ನುವ ಕೀರ್ತಿಗೆ ಸ್ಟುವರ್ಟ್ ಬ್ರಾಡ್ ಪಾತ್ರರಾಗಿದ್ದಾರೆ.

22 ಜಯ: ನಾಯಕ ವಿರಾಟ್ ಕೊಹ್ಲಿ ಮಾರ್ಗದರ್ಶನದಲ್ಲಿ ಟೀಂ ಇಂಡಿಯಾ ಟೆಸ್ಟ್’ನಲ್ಲಿ 22ನೇ ಜಯ ದಾಖಲಿಸಿದೆ. ಈ ಮೂಲಕ ಸೌರವ್ ಗಂಗೂಲಿ[21] ದಾಖಲೆಯನ್ನು ಅಳಿಸಿ ಹಾಕಿದ್ದಾರೆ. ಟೀಂ ಇಂಡಿಯಾ ಪರ ಎಂ.ಎಸ್. ಧೋನಿ 27 ಬಾರಿ ಟೆಸ್ಟ್’ನಲ್ಲಿ ತಂಡವನ್ನು ಗೆಲುವಿನ ದಡ ಸೇರಿಸಿದ್ದಾರೆ.

6 ಕ್ಯಾಚ್: ಒಂದೇ ಪಂದ್ಯದಲ್ಲಿ ಒಂದೇ ತಂಡದ ಇಬ್ಬರು ಆಟಗಾರರು ಅತಿ ಹೆಚ್ಚು ಕ್ಯಾಚ್ ಪಡೆದ ದಾಖಲೆ ಬರೆದಿದ್ದಾರೆ. ರಿಶಭ್ ಪಂತ್ ಹಾಗೂ ಕೆ.ಎಲ್ ರಾಹುಲ್ ತಲಾ 6 ಕ್ಯಾಚ್ ಹಿಡಿದ ಸಾಧನೆ ಮಾಡಿದ್ದಾರೆ.

ಡಬಲ್ ಡಿಜಿಟ್: ಇದೇ ಮೊದಲ ಬಾರಿಗೆ ಟೆಸ್ಟ್ ಇತಿಹಾಸದಲ್ಲಿ ಉಭಯ ತಂಡದ ಟಾಪ್ 5 ಆಟಗಾರರು ನಾಲ್ಕು ಇನ್ನಿಂಗ್ಸ್’ಗಳಲ್ಲೂ ಎರಡಂಕಿ ಮೊತ್ತ ಮುಟ್ಟಿದ ದಾಖಲೆ ನಿರ್ಮಿಸಿದ್ದಾರೆ.

19 ವಿಕೆಟ್: ಈ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾದ ವೇಗಿಗಳು 19 ವಿಕೆಟ್ ಕಬಳಿಸಿದ ಸಾಧನೆ ಮಾಡಿದ್ದಾರೆ. ಇದು ಟೀಂ ಇಂಡಿಯಾ ವೇಗಿಗಳ ಎರಡನೇ ಗರಿಷ್ಠ ವೈಯುಕ್ತಿಕ ಸಾಧನೆ. ಈ ಮೊದಲು 2018ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಜೊಹಾನ್ಸ್’ಬರ್ಗ್ ಟೆಸ್ಟ್’ನಲ್ಲಿ ಟೀಂ ಇಂಡಿಯಾ ವೇಗಿಗಳು ಎಲ್ಲಾ 20 ವಿಕೆಟ್ ಕಬಳಿಸಿದ್ದರು.

Follow Us:
Download App:
  • android
  • ios