ಒಂದು ಹಂತದಲ್ಲಿ 181 ರನ್’ಗಳಿಗೆ 5 ವಿಕೆಟ್ ಕಳೆದುಕೊಂಡು ಮುನ್ನುಗ್ಗುತ್ತಿದ್ದ ಭಾರತ ತಂಡಕ್ಕೆ ಮೊಯಿನ್ ಅಲಿ ಶಾಕ್ ನೀಡಿದ್ದಾರೆ. ಪಂತ್, ಪಾಂಡ್ಯ, ಅಶ್ವಿನ್ ಹಾಗೂ ಶಮಿ ಬಲಿ ಪಡೆಯುವ ಮೂಲಕ ಟೀಂ ಇಂಡಿಯಾಗೆ ಆಘಾತ ನೀಡಿದ್ದಾರೆ.

ಸೌತಾಂಪ್ಟನ್[ಆ.31]: ಮೊಯಿನ್ ಅಲಿ ಸ್ಪಿನ್ ದಾಳಿಗೆ ತತ್ತರಿಸಿರುವ ಟೀಂ ಇಂಡಿಯಾ ದಿಢೀರ್ ಕುಸಿತ ಕಂಡಿದ್ದು, ಭಾರತ 8 ವಿಕೆಟ್ ನಷ್ಟಕ್ಕೆ 195 ಬಾರಿಸಿದೆ. ಈ ಮೂಲಕ ಇನ್ನೂ 51 ರನ್’ಗಳ ಹಿನ್ನಡೆ ಅನುಭವಿಸಿದೆ.

ಒಂದು ಹಂತದಲ್ಲಿ 181 ರನ್’ಗಳಿಗೆ 5 ವಿಕೆಟ್ ಕಳೆದುಕೊಂಡು ಮುನ್ನುಗ್ಗುತ್ತಿದ್ದ ಭಾರತ ತಂಡಕ್ಕೆ ಮೊಯಿನ್ ಅಲಿ ಶಾಕ್ ನೀಡಿದ್ದಾರೆ. ಪಂತ್, ಪಾಂಡ್ಯ, ಅಶ್ವಿನ್ ಹಾಗೂ ಶಮಿ ಬಲಿ ಪಡೆಯುವ ಮೂಲಕ ಟೀಂ ಇಂಡಿಯಾಗೆ ಆಘಾತ ನೀಡಿದ್ದಾರೆ.

ಒಂದು ಕಡೆ ನಿರಂತರ ವಿಕೆಟ್ ಬೀಳುತ್ತಿದ್ದರೂ ನೆಲಕಚ್ಚಿ ಆಡುತ್ತಿರುವ ಚೇತೇಶ್ವರ್ ಪೂಜಾರ 78 ರನ್ ಬಾರಿಸಿ ಅಜೇಯರಾಗುಳಿದ್ದಿದ್ದಾರೆ.