ಮೊಹಾಲಿ[ಮಾ.10]: ಶಿಖರ್ ಧವನ್ ಸಿಡಿಲಬ್ಬರದ ಶತಕಕ್ಕೆ ಬ್ರೇಕ್ ಹಾಕುವಲ್ಲಿ ಆಸಿಸ್ ವೇಗಿ ಪ್ಯಾಟ್ ಕಮ್ಮಿನ್ಸ್ ಯಶಸ್ವಿಯಾಗಿದ್ದಾರೆ. ವೃತ್ತಿಜೀವನದಲ್ಲಿ ಗರಿಷ್ಠ ವೈಯುಕ್ತಿಕ ಮೊತ್ತ[143] ಸಿಡಿಸಿದ ಬೆನ್ನಲ್ಲೇ ಧವನ್ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿದ್ದಾರೆ.

ಕಳೆದ 18 ಇನ್ನಿಂಗ್ಸ್’ಗಳಲ್ಲಿ ಮೂರಂಕಿ ಮೊತ್ತ ತಲುಪಲು ವಿಫಲವಾಗಿದ್ದ ಧವನ್ ಕೊನೆಗೂ ಫಾರ್ಮ್’ಗೆ ಮರಳುವಲ್ಲಿ ಯಶಸ್ವಿಯಾಗಿದ್ದಾರೆ. ಕೇವಲ 115 ಎಸೆತಗಳಲ್ಲಿ 18 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ ಧವನ್ 143 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಈ ಮೂಲಕ ಏಕದಿನ ಕ್ರಿಕೆಟ್’ನಲ್ಲಿ ವೈಯುಕ್ತಿಕ ಗರಿಷ್ಠ ಮೊತ್ತ ದಾಖಲಿಸಿದರು. ಈ ಮೊದಲು 2015ರಲ್ಲಿ ಧವನ್ ದಕ್ಷಿಣ ಆಫ್ರಿಕಾ ವಿರುದ್ಧ 137 ರನ್ ಸಿಡಿಸಿದ್ದರು. 

ಧವನ್ ಪೆವಿಲಿಯನ್ ಸೇರಿದ ಬೆನ್ನಲ್ಲೇ ನಾಯಕ ವಿರಾಟ್ ಕೊಹ್ಲಿ ಕೂಡಾ ವಿಕೆಟ್ ಒಪ್ಪಿಸಿದ್ದಾರೆ. ಕಳೆದೆರಡು ಪಂದ್ಯಗಳಲ್ಲಿ ಶತಕ ಸಿಡಿಸಿದ್ದ ಕೊಹ್ಲಿ 7 ರನ್ ಬಾರಿಸಿ ಜೆ ರಿಚರ್ಡ್’ಸನ್’ಗೆ ವಿಕೆಟ್ ಒಪ್ಪಿಸಿದರು.