ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ರೋಹಿತ್ ಶರ್ಮಾ ಅವರ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಂತೆ ಬೌಲಿಂಗ್ ಮಾಡಿದ ಟೀಂ ಬೌಲಿಂಗ್ ಪಡೆ, ಸಿಂಹಳಿಯರಿಗೆ ಎರಡನೇ ಓವರ್'ನಲ್ಲೇ ಶಾಕ್ ನೀಡಿತು.
ಮುಂಬೈ(ಡಿ.24): ಲಂಕಾ ವಿರುದ್ಧದ ಟಿ20 ಸರಣಿಯನ್ನು ಕ್ಲೀನ್ ಸ್ವೀಪ್ ಮಾಡುವತ್ತ ಟೀಂ ಇಂಡಿಯಾ ದಿಟ್ಟ ಹೆಜ್ಜೆಯಿಟ್ಟಿದ್ದು, ಶ್ರೀಲಂಕಾ ತಂಡವನ್ನು ಕೇವಲ ರನ್'ಗಳಿಗೆ ನಿಯಂತ್ರಿಸಿದೆ.
ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ರೋಹಿತ್ ಶರ್ಮಾ ಅವರ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಂತೆ ಬೌಲಿಂಗ್ ಮಾಡಿದ ಟೀಂ ಬೌಲಿಂಗ್ ಪಡೆ, ಸಿಂಹಳಿಯರಿಗೆ ಎರಡನೇ ಓವರ್'ನಲ್ಲೇ ಶಾಕ್ ನೀಡಿತು. ಆರಂಭಿಕ ಬ್ಯಾಟ್ಸ್'ಮನ್ ಡಿಕ್'ವೆಲ್ಲಾರನ್ನು ಎಡಗೈ ವೇಗಿ ಉನಾದ್ಕಟ್ ತಾವೆಸೆದ ಮೊದಲ ಓವರ್'ನ 5ನೇ ಎಸೆತದಲ್ಲೇ ಪೆವಿಲಿಯನ್ ಹಾದಿ ತೋರಿಸಿದರು. ಇದಾದ ಕೆಲಹೊತ್ತಿನಲ್ಲೇ ಕಳೆದ ಪಂದ್ಯದಲ್ಲಿ ಆರ್ಭಟಿಸಿದ್ದ ಕುಸಾಲ ಪೆರೇರಾ ಅವರನ್ನು ಬಲಿ ಪಡೆಯುವ ಮೂಲಕ ವಾಷಿಂಗ್ಟನ್ ಸುಂದರ್ ಅಂತರಾಷ್ಟ್ರೀಯ ಕ್ರಿಕೆಟ್'ನಲ್ಲಿ ಚೊಚ್ಚಲ ವಿಕೆಟ್ ಪಡೆದು ಸಂಭ್ರಮಿಸಿದರು. ಮಧ್ಯಮ ಕ್ರಮಾಂಕದಲ್ಲಿ ಸದೀರಾ ಸಮರವಿಕ್ರಮ(21), ಅಸೀಲಾ ಗುಣರತ್ನೆ(36) ತಂಡಕ್ಕೆ ಚೇತರಿಕೆ ನೀಡಿದರಾದರೂ ಅವರಿಬ್ಬರನ್ನು ಪೆವಿಲಿಯನ್'ಗಟ್ಟಲು ಹಾರ್ದಿಕ್ ಪಾಂಡ್ಯ ಯಶಸ್ವಿಯಾದರು.
ಕೆಳಕ್ರಮಾಂಕದಲ್ಲಿ ಸನಕಾ ಸ್ಫೋಟಕ ಬ್ಯಾಟಿಂಗ್ ಮಾಡುವ ಮೂಲಕ ತಂಡದ ಮೊತ್ತವನ್ನು 130ರ ಗಡಿ ದಾಟಿಸಲು ನೆರವಾದರು.
ಸಂಕ್ಷಿಪ್ತ ಸ್ಕೋರ್:
ಶ್ರೀಲಂಕಾ: 135/7
ಗುಣರತ್ನೆ: 36
ಉನಾದ್ಕಟ್: 25/2
(*ವಿವರ ಅಪೂರ್ಣ)
