ಸ್ಫೋಟಕ ಆಟವಾಡಿದ ದೀಪ್ತಿ 110 ಎಸತಗಳಲ್ಲಿ 10 ಭರ್ಜರಿ ಬೌಂಡರಿಗಳೊಂದಿಗೆ 78 ರನ್ ಗಳಿಸಿ ಔಟಾದರು. ನಂತರ ಒಂದೇ ಓವರ್'ನಲ್ಲಿ ಮಿಥಾಲಿ ರಾಜ್ 78 ಎಸತಗಳಲ್ಲಿ 4 ಬೌಂಡರಿಗಳೊಂದಿಗೆ 53 ರನ್'ಗೆ ಪೆವಿಲಿಯನ್'ಗೆ ತೆರಳಿದರೆ ಆಲ್'ರೌಂಡರ್ ಗೋಸ್ವಾಮಿ ಕೂಡ ಬೇಗ ನಿರ್ಗಮಿಸಿದರು.
ಡರ್ಬಿ(ಜು.05): ಭಾರತದ ವನಿತೆಯರಿಗೆ ಈ ಬಾರಿಯ ವಿಶ್ವಕಪ್ ಟ್ರೋಫಿ ಒಲಿದು ಬರುವ ಸಾಧ್ಯತೆ ಹೆಚ್ಚಾಗಿದೆ. ಇಂದು ಡರ್ಬಿಯ ಕೌಂಟಿ ಕ್ರೀಡಾಂಗಣದಲ್ಲಿ ನಡೆದ ಶ್ರೀಲಂಕಾ ತಂಡದ ವಿರುದ್ಧ 16 ರನ್'ಗಳ ಜಯ ಸಾಧಿಸುವ ಮೂಲಕ ಸತತ 4ನೇ ಗೆಲುವನ್ನು ಸಾಧಿಸಿದ್ದಾರೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ಮಿಥಾಲಿ ರಾಜ್ ನೇತೃತ್ವದ ಪಡೆ 10 ಓವರ್'ಗಳಾಗುವಷ್ಟರಲ್ಲಿ 38 ರನ್'ಗಳಿಗೆ 2 ವಿಕೇಟ್ ಕಳೆದುಕೊಂಡರೂ ಅನಂತರ ಜೊತೆಯಾದ ದೀಪ್ತಿ ಶರ್ಮಾ ಹಾಗೂ ನಾಯಕಿ ಮಿಥಲಿ ಶರ್ಮಾ ರಕ್ಷಣಾತ್ಮಕ ಆಟದ ಮೂಲಕ 3ನೇ ವಿಕೇಟ್ ನಷ್ಟಕ್ಕೆ 36.5 ಓವರ್'ಗಳಲ್ಲಿ 156 ರನ್ ಗಳಿಸಿತು.
ಸ್ಫೋಟಕ ಆಟವಾಡಿದ ದೀಪ್ತಿ 110 ಎಸತಗಳಲ್ಲಿ 10 ಭರ್ಜರಿ ಬೌಂಡರಿಗಳೊಂದಿಗೆ 78 ರನ್ ಗಳಿಸಿ ಔಟಾದರು. ನಂತರ ಒಂದೇ ಓವರ್'ನಲ್ಲಿ ಮಿಥಾಲಿ ರಾಜ್ 78 ಎಸತಗಳಲ್ಲಿ 4 ಬೌಂಡರಿಗಳೊಂದಿಗೆ 53 ರನ್'ಗೆ ಪೆವಿಲಿಯನ್'ಗೆ ತೆರಳಿದರೆ ಆಲ್'ರೌಂಡರ್ ಗೋಸ್ವಾಮಿ ಕೂಡ ಬೇಗ ನಿರ್ಗಮಿಸಿದರು. ಅನಂತರ ಆಗಮಿಸಿದ ಹರಂಪ್ರೀತ್ ಕೌರ್(20: 22 ಎಸೆತ, 1 ಬೌಂಡರಿ) ಹಾಗೂ ವೇದಾ ಕೃಷ್ಣ'ಮೂರ್ತಿ(29: 33 ಎಸೆತ, 4 ಬೌಂಡರಿ) 20ರ ಗಡಿ ದಾಟುವ ಮೂಲಕ ತಂಡದ ಮೊತ್ತ 50 ಓವರ್'ಗಳಲ್ಲಿ 232/8 ಗಳಿಸಲು ನೆರವಾದರು.ಶ್ರೀಲಂಕಾ ಪರ ವೀರಕ್ಕೋಡಿ 3/28 ಹಾಗೂ ರಣವೀರಾ 2/55 ವಿಕೇಟ್ ಪಡೆಯುವ ಮೂಲಕ ಉತ್ತಮ ಬೌಲರ್ ಎನಿಸಿದರು.
ಗೋಸ್ವಾಮಿ, ಪೂನಂ ದಾಳಿಗೆ ತತ್ತರಿಸಿದ ಸಿಂಹಿಣಿಗಳು
233 ರನ್'ಗಳ ಗುರಿಯನ್ನು ಬೆನ್ನಟ್ಟಿದ ಶ್ರೀಲಂಕಾ ಪಡೆ ಸುರಂಗಿಕಾ(61: 75 ಎಸೆತ, 6 ಬೌಂಡರಿ), ಸಿರಿವರ್ಧನೆ(37:63 ಎಸೆತ,5 ಬೌಂಡರಿ), ಹನ್ಸಿಕಾ(29) ಹಾಗೂ ಜಯಂಗಣಿ(25) ರನ್'ಗಳನ್ನು ಗಳಿಸುವ ಮೂಲಕ ಜಯದ ಆಶಾಭಾವನೆ ಮೂಡಿಸಿದರೂ ವೇಗಿ ಗೋಸ್ವಾಮಿ 2/26 ಹಾಗೂ ಲೆಗ್ ಸ್ಪಿನ್ನರ್ ಪೂನಂ 23/2 ದಾಳಿಗೆ ತತ್ತರಿಸಿ 50 ಓವರ್ ಆಗುವಷ್ಟರಲ್ಲಿ 216/7 ರನ್'ಗಳಿಸಲಷ್ಟೆ ಶಕ್ತವಾಯಿತು. 78 ರನ್ ಗಳಿಸಿದ ದೀಪ್ತಿ ಶರ್ಮಾ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಸ್ಕೋರ್
ಭಾರತ 50 ಓವರ್'ಗಳಲ್ಲಿ 8 ವಿಕೇಟ್ ನಷ್ಟಕ್ಕೆ 232
(ದೀಪ್ತಿ ಶರ್ಮಾ:78, ಮಿಥಾಲಿ ರಾಜ್: 53)
ಶ್ರೀಲಂಕಾ 50 ಓವರ್'ಗಳಲ್ಲಿ 7 ವಿಕೇಟ್ 216
(ಸುರಂಗಿಕಾ:61,ಸಿರಿವರ್ಧನೆ:37)
ಭಾರತಕ್ಕೆ 7 ವಿಕೇಟ್ ಜಯ
ಪಂದ್ಯ ಶ್ರೇಷ್ಠೆ: ದೀಪ್ತಿ ಶರ್ಮಾ
