ಸದ್ಯ RCB ಸೇರಿದಂತೆ ಇನ್ನೂ ಹಲವು ತಂಡಗಳೂ ಈ ಬಾರಿಯ IPL ಗೆ ಹೊಸ ನಾಯಕನ ಪಟ್ಟಾಭಿಷೇಕಕ್ಕೆ ತಯಾರಿ ನಡೆಸುತ್ತಿವೆ. ಆದರೆ ಪ್ರತೀ IPL ಸೀಸನ್​​ ಆರಂಭವಾದಾಗಲೂ ಕೆಲ ತಂಡಗಳು ಹೊಸ ನಾಯಕನನ್ನು ನೇಮಿಸುವುದು ಸಾಮಾನ್ಯ​​​​​. ಹಾಗಾದರೆ ಇದುವರೆಗೂ ಯಾವ್ಯಾವ ತಂಡಗಳು ಎಷ್ಟೆಷ್ಟು ನಾಯಕನನ್ನು ಕಂಡಿದೆ ಇಲ್ಲಿದೆ ವಿವರ.

ಸದ್ಯ RCB ಸೇರಿದಂತೆ ಇನ್ನೂ ಹಲವು ತಂಡಗಳೂ ಈ ಬಾರಿಯ IPL ಗೆ ಹೊಸ ನಾಯಕನ ಪಟ್ಟಾಭಿಷೇಕಕ್ಕೆ ತಯಾರಿ ನಡೆಸುತ್ತಿವೆ. ಆದರೆ ಪ್ರತೀ IPL ಸೀಸನ್​​ ಆರಂಭವಾದಾಗಲೂ ಕೆಲ ತಂಡಗಳು ಹೊಸ ನಾಯಕನನ್ನು ನೇಮಿಸುವುದು ಸಾಮಾನ್ಯ​​​​​. ಹಾಗಾದರೆ ಇದುವರೆಗೂ ಯಾವ್ಯಾವ ತಂಡಗಳು ಎಷ್ಟೆಷ್ಟು ನಾಯಕನನ್ನು ಕಂಡಿದೆ ಇಲ್ಲಿದೆ ವಿವರ.

ಈ ಬಾರಿಯ ಐಪಿಎಲ್​​​ ಹಲವು ಹೊಸತನಗಳಿಗೆ ಸಾಕ್ಷಿಯಾಗುತ್ತಿದೆ. ಅದರಲ್ಲಿ ಒಂದು ಹೊಸ ನಾಯಕರು. ಬರೋಬ್ಬರಿ ಮೂರು ತಂಡದ ಫ್ರಾಂಚೈಸಿಗಳು ಈ ಬಾರಿ ತಮ್ಮ ತಂಡದ ಚುಕ್ಕಾಣಿ ಹಿಡಿಯಲು ಹೊಸ ಸಾರಥಿಗಳನ್ನ ನೇಮಿಸಿದ್ದಾರೆ. ಪುಣೆ ಸೂಪರ್​​​​​ ಜೈಂಟ್​​​ ತಂಡದಲ್ಲಿ ಧೋನಿ ಬದಲಿಗೆ ಆಸೀಸ್​​​ ನಾಯಕ ಸ್ಟೀವ್​​​​ ಸ್ಮಿತ್​​​​'ಗೆ ನಾಯಕನ ಜವಾಬ್ದಾರಿ ನೀಡಲಾಗಿದೆ. ಪಂಜಾಬ್​ ಕಿಂಗ್ಸ್​​​'ನಲ್ಲಿ ಪ್ರೀತಿ ಜಿಂಟಾ ವಿದೇಶಿ ವ್ಯಾಮೊಹದ ಮೇರೆಗೆ ಮುರಳಿ ವಿಜಯ್​​ ಬದಲಿಗೆ ಗ್ಲೇನ್​ ಮ್ಯಾಕ್ಸ್​​'ವೆಲ್'​​​​ಗೆ ಅವಕಾಶ ನೀಡಿದ್ದಾರೆ. ಇನ್ನೂ RCB ಯಲ್ಲಂತೂ ಕೊಹ್ಲಿ ಆಡುವುದಿಲ್ಲ. ಹೀಗಾಗಿ ಹೊಸ ನಾಯಕ ಖಚಿತ​.

9 ಋತುವಿನಲ್ಲಿ 8 ನಾಯಕರು

ಸದ್ಯ ಈಗ ಹೊಸ ನಾಯಕರನ್ನು ಮೂರು ತಂಡಗಳು ಹೆಸರಿಸಿವೆ. ಆದರೆ ಈ ಮೂರು ತಂಡಗಳನ್ನು ಮೀರಿಸಿರುವುದು ಡೆಲ್ಲಿ ಡೇರ್​​​ ಡೆವಿಲ್ಸ್​ ತಂಡ​​. ಈ ತಂಡ ಇದುವರೆಗೂ ಒಟ್ಟು 9 ಸೀಸನ್'​ಗಳಲ್ಲಿ 8 ನಾಯಕರನ್ನು ಈ ತಂಡ ಬದಲಿಸಿದೆ. ಮೊದಲ ಸೀಸನ್​​​​​'ನಲ್ಲಿ ವಿರೇಂದ್ರ ಸೆಹ್ವಾಗ್'​​ ನಿಂದ ಹಿಡಿದು ಈಗ ನಾಯಕನ್ನಾಗಿರುವ ಜಹಿರ್​​ ಖಾನ್​​'ವರೆಗೆ 8 ಆಟಗಾರರು ಡೆಲ್ಲಿ ತಂಡವನ್ನ ಮುನ್ನಡೆಸಿದ್ದಾರೆ. ಇಷ್ಟು ಬದಲಾವಣೆಗಳನ್ನು ಕಂಡರೂ ಸಹ ಇದುವರೆಗೂ ಟ್ರೋಫಿಯನ್ನು ಎತ್ತಿಹಿಡಿಯಲಿಲ್ಲ.

ಪಂಜಾಬ್​​ ಕಿಂಗ್ಸ್​​​ - 8 ಸಾರಥಿಗಳು

ಡೆಲ್ಲಿ ಡೇರ್​​ಡೆವಿಲ್ಸ್​​ ನಂತೆ ಪಂಜಾಬ್​ ಕಿಂಗ್ಸ್​​​ ತಂಡವೂ ಕೂಡ ಅತೀ ಹೆಚ್ಚು ನಾಯಕರನ್ನ ಕಂಡಿದೆ. ಪಂಜಾಬ್​ ಕಿಂಗ್ಸ್​​​ ಮಾಲಕಿ ಪ್ರೀತಿ ಜಿಂಟಗಂತೂ ನಾಯಕರನ್ನ ಬದಲಿಸುವುದೇ ಕೆಲಸವಾಗಿಬಿಟ್ಟಿದೆ ಆದರೆ ಅದಕ್ಕೆ ಕಾರಣ ತಂಡದಿಲ್ಲಿಲ್ಲದ ಸ್ಥಿರತೆ. 2014 ರಲ್ಲಿ ಆಸ್ಟ್ರೇಲಿಯಾದ ಜಾರ್ಜ್ ಬೇಲಿ ನಾಯಕತ್ವದಲ್ಲಿ ಫೈನಲ್ಸ್​​ ತಲುಪಿದ್ದು ಹೊರತು ಪಡಿಸಿದ್ರೆ ಪಂಜಾಬ್​ರ IPL ಸಾಧನೆ ಶೂನ್ಯ. ಹೀಗಾಗಿ ಪ್ರೀತಿ ಪದೆ ಪದೆ ನಾಯಕನನ್ನ ಬದಲಾಯಿಸಬೇಕಾಯಿತು.

ಮುಂಬೈ ಇಂಡಿಯನ್ಸ್​​​ - 6 ನಾಯಕರು ಬದಲು

ಎರಡು ಬಾರಿ ಚಾಂಪಿಯನ್ಸ್​​ ಪಟ್ಟ ಅಲಂಕರಿಸಿದ್ದ ಮುಂಬೈ ಇಂಡಿಯನ್ಸ್​​ ಕೂಡ ಇದುವರೆಗೂ 6 ನಾಯಕರುಗಳನ್ನ ಕಂಡಿದೆ. ಕ್ರಿಕೆಟ್​​ ದೇವರು ಸಚಿನ್​​ರಿಂದ ಹಿಡಿದು ಸದ್ಯ ತಂಡದ ಚುಕ್ಕಾಣಿ ಹಿಡಿದಿರುವ ರೊಹಿತ್​​ ಶರ್ಮವರೆಗೆ 6 ನಾಯಕರು ಬದಲಾಗಿದ್ದಾರೆ. ಇದರೊಂದಿಗೆ ಹೆಚ್ಚು ನಾಯಕರನ್ನ ಕಂಡ ಲಿಸ್ಟ್​​ನಲ್ಲಿ 2ನೇ ಸ್ಥಾನದಲ್ಲಿದೆ.

5 ನಾಯಕರನ್ನ ಕಂಡ ಬೆಂಗಳೂರು

ಇನ್ನೂ ನಮ್ಮ ಬೆಂಗಳೂರು ರಾಯಲ್​​ ಚಾಲೆಂಜರ್ಸ್​​ ತಂಡವನ್ನೂ ಕೂಡ 5 ನಾಯಕರುಗಳು ಆಳಿದ್ದಾರೆ. 2008ರಲ್ಲಿ ದ್ರಾವಿಡ್​​ RCB ನಾಯಕನ್ನಾದ್ರೆ ತದನಂತರ ಕೆವಿನ್​​​ ಪೀಟರ್ಸ್​​ನ್​​​, ಅನೀಲ್​​ ಕುಂಬ್ಳೆ , ಡೇನಿಯಲ್​​ ವಿಟೋರಿ ಕೊನೆಗೆ ವಿರಾಟ್​​ ಕೊಹ್ಲಿ ಟೀಂ RCBಯನ್ನ ಮುನ್ನಡೆಸಿದ್ದಾರೆ. ಸದ್ಯ ಈಗ 6ನೇ ಸಾರಥಿಯ ಹುಡುಕಾಟದಲ್ಲಿ ಟೀಂ ಮ್ಯಾನೇಜ್​ಮೆಂಟ್​​ ಇದೆ.

ಒಟ್ಟಿನಲ್ಲಿ ಕೆಲ ತಂಡಗಳು ನಾಯಕನ್ನನ್ನ ಬದಲಾಯಿಸೋದೆ ಕಾಯಕವನ್ನಾಗಿಸಿಕೊಂಡಿರೋದು ಇಲ್ಲಿ ಸ್ಪಷ್ಟವಾಗುತ್ತಿದೆ. ಆದ್ರೆ ಕೆಲ ತಂಡಗಳು ಬದಲಾವಣೆಯ ಪರ್ವದಲ್ಲಿ ಯಶಸ್ಸುಗಳಿಸಿದ್ರೆ ಇನ್ನೂ ಕೆಲ ತಂಡಗಳು ಕೊಚ್ಚಿ ಹೋಗಿವೆ. ಸದ್ಯ 3 ತಂಡಗಳು ಹೊಸ ನಾಯಕರೊಂದಿಗೆ ಕಣಕಿಳಿಯುತ್ತಿವೆ. ಈ ಮೂವರಲ್ಲಿ ಯಾರು ಬೆಸ್ಟ್​​ ಅನ್ನೋದು ಸದ್ಯದಲ್ಲೇ ಗೊತ್ತಾಗಲಿದೆ.