ವಿಕೆಟ್ ಕೀಪರ್ ಮತ್ತು ಬ್ಯಾಟ್ಸ್‌ಮನ್ ಆಗಿದ್ದ ಇಮ್ತಿಯಾಜ್ ಪಾಕ್ ಪರ 41 ಪಂದ್ಯಗಳನ್ನಾಡಿದ್ದು, 2079ರನ್‌'ಗಳಿಸಿದ್ದಾರೆ.

ಲಾಹೋರ್(ಡಿ.31): ಪಾಕಿಸ್ತಾನ ರಾಷ್ಟ್ರೀಯ ಕ್ರಿಕೆಟ್ ತಂಡದ ಮೊದಲ ಟೆಸ್ಟ್ ಪಂದ್ಯವನ್ನಾಡಿದ್ದ ಇಮ್ತಿಯಾಜ್ ಅಹಮದ್ ಅನಾರೋಗ್ಯದ ಕಾರಣದಿಂದಾಗಿ ನಿಧನ ಹೊಂದಿದ್ದಾರೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.

ಮೃತರಿಗೆ 88 ವರ್ಷ ವಯಸ್ಸಾಗಿತ್ತು. 1952ರ ವೇಳೆ ದೆಹಲಿಯಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ತಂಡ ಮೊದಲ ಟೆಸ್ಟ್ ಪಂದ್ಯವನ್ನಾಡಿತ್ತು. ವಿಕೆಟ್ ಕೀಪರ್ ಮತ್ತು ಬ್ಯಾಟ್ಸ್‌ಮನ್ ಆಗಿದ್ದ ಇಮ್ತಿಯಾಜ್ ಪಾಕ್ ಪರ 41 ಪಂದ್ಯಗಳನ್ನಾಡಿದ್ದು, 2079ರನ್‌'ಗಳಿಸಿದ್ದಾರೆ.

ಅಲ್ಲದೇ ನ್ಯೂಜಿಲೆಂಡ್ ವಿರುದ್ಧ 209ರನ್ ಗಳಿಸಿರುವುದು ವೈಯಕ್ತಿಕ ಗರಿಷ್ಠವಾಗಿದೆ.

ಇಮ್ತಿಯಾಜ್, ದೀರ್ಘವಾಧಿ ಕಾಲದಿಂದಲೂ ಎದೆ ನೋವಿನಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಗ್ಗೆ ಮೃತಪಟ್ಟಿದ್ದಾರೆ.