ಧೋನಿ ನಾನು ಕಲಿಯುತ್ತಿರುವ ಕಾಲೇಜಿನ ಟಾಪರ್

First Published 21, Mar 2018, 5:17 PM IST
Im studying in the university in which MS Dhoni is topper Karthik
Highlights

ಶ್ರೀಲಂಕಾದಿಂದ ಹಿಂದಿರುಗಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವೇಳೆ ಮಾತನಾಡಿದ ಕಾರ್ತಿಕ್ ‘ಧೋನಿಯಿಂದ ಸಾಕಷ್ಟು ಕಲಿತಿದ್ದೇನೆ. ಅವರೊಂದಿಗೆ ನನ್ನನ್ನು ಹೋಲಿಕೆ ಮಾಡುವುದು ಸರಿಯಲ್ಲ’ ಎಂದಿದ್ದಾರೆ. ಕುತೂಹಲಕಾರಿ ಸಂಗತಿಯೆಂದರೆ ಧೋನಿಗಿಂತ 3 ತಿಂಗಳು ಮೊದಲೇ ಕಾರ್ತಿಕ್, ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದರು.

ಚೆನ್ನೈ(ಮಾ.21): ಕೊನೆ ಎಸೆತದಲ್ಲಿ ಸಿಕ್ಸರ್ ಸಿಡಿಸಿ ಭಾರತಕ್ಕೆ ತ್ರಿಕೋನ ಟಿ20 ಸರಣಿ ಗೆಲ್ಲಿಸಿಕೊಟ್ಟ ದಿನೇಶ್ ಕಾರ್ತಿಕ್, ಅತ್ಯುತ್ತಮ ಫಿನಿಶರ್ ಎನ್ನುವ ವಿಚಾರ ಬಂದಾಗ 'ತಾವು ಇನ್ನು ವಿದ್ಯಾರ್ಥಿಯಾಗಿರುವ ಕಾಲೇಜಿನಲ್ಲಿ ಧೋನಿ ಅಗ್ರ ಶ್ರೇಯಾಂಕಿತ (ಟಾಪರ್)’ ಎಂದಿದ್ದಾರೆ.

ಶ್ರೀಲಂಕಾದಿಂದ ಹಿಂದಿರುಗಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವೇಳೆ ಮಾತನಾಡಿದ ಕಾರ್ತಿಕ್ ‘ಧೋನಿಯಿಂದ ಸಾಕಷ್ಟು ಕಲಿತಿದ್ದೇನೆ. ಅವರೊಂದಿಗೆ ನನ್ನನ್ನು ಹೋಲಿಕೆ ಮಾಡುವುದು ಸರಿಯಲ್ಲ’ ಎಂದಿದ್ದಾರೆ. ಕುತೂಹಲಕಾರಿ ಸಂಗತಿಯೆಂದರೆ ಧೋನಿಗಿಂತ 3 ತಿಂಗಳು ಮೊದಲೇ ಕಾರ್ತಿಕ್, ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದರು.

‘ಧೋನಿ ಕ್ರಿಕೆಟ್ ಪ್ರಯಾಣಕ್ಕೆ ಹೋಲಿಸಿದರೆ, ನನ್ನ ಪ್ರಯಾಣ ಸಂಪೂರ್ಣವಾಗಿ ವಿಭಿನ್ನವಾದ್ದದ್ದು. ಸದ್ಯ ನನಗೆ ಸಿಕ್ಕಿರುವ ಸ್ಥಾನಕ್ಕೆ ಖುಷಿ ಇದೆ’ ಎಂದಿರುವ ಕಾರ್ತಿಕ್, ‘ಎಲ್ಲರ ಗಮನ ನನ್ನತ್ತ ಕೇಂದ್ರೀಕೃತವಾಗಿರುವುದು ಖುಷಿ ನೀಡುತ್ತದೆ. ಇಷ್ಟು ದಿನ ನಾನು ಮಾಡಿದ ಉತ್ತಮ ಕಾರ್ಯಗಳ ಫಲವಾಗಿ ನಾನು ಕೊನೆ ಎಸೆತದಲ್ಲಿ ಸಿಕ್ಸರ್ ಬಾರಿಸಲು ಸಾಧ್ಯವಾಯಿತು’ ಎಂದು ಹೇಳಿದ್ದಾರೆ.

loader