ಬಂಡಾಯ ಕಬಡ್ಡಿ ಲೀಗ್: ಬೆಂಗಳೂರು ರೈನೋಸ್‌ ಜಯಭೇರಿ

ಇಂಡೋ ಇಂಟರ್‌ ನ್ಯಾಷನಲ್‌ ಪ್ರೀಮಿಯರ್‌ ಕಬಡ್ಡಿ ಲೀಗ್‌ನಲ್ಲಿ ಬೆಂಗಳೂರು ಶುಭಾರಂಭ ಮಾಡಿದೆ. ಪಾಂಡಿಚೇರಿ ವಿರುದ್ದ ಹೋರಾಟ  ನಡಿಸಿದ ಬೆಂಗಳೂರಿನ ಗೆಲುವಿನ ನಗೆ ಬೀರಿದೆ. ಇಲ್ಲಿದೆ ಪಂದ್ಯದ ಹೈಲೈಟ್ಸ್ ಇಲ್ಲಿದೆ.

IIPKL kabaddi Bengaluru Rhinos beat Pondicherry Predators

ಪುಣೆ(ಮೇ.15):  ಬಾಲೆವಾಡಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಇಂಡೋ ಇಂಟರ್‌ ನ್ಯಾಷನಲ್‌ ಪ್ರೀಮಿಯರ್‌ ಕಬಡ್ಡಿ ಲೀಗ್‌ನಲ್ಲಿ ಬೆಂಗಳೂರು ರೈನೋಸ್‌ ತಂಡ ಶುಭಾರಂಭ ಮಾಡಿದೆ. ಮಂಗಳವಾರ ನಡೆದ ಮೊದಲ ಪಂದ್ಯದಲ್ಲಿ ಬೆಂಗಗಳೂರು ತಂಡ, ಪಾಂಡಿಚೇರಿ ಪ್ರೇಡಟರ್ಸ್‌ ವಿರುದ್ಧ 39-32 ಅಂಕಗಳಿಂದ ಜಯ ಸಾಧಿಸಿತು. 

ಇದನ್ನೂ ಓದಿ: ಬಂಡಾಯ ಕಬಡ್ಡಿ ಲೀಗ್- ಹರ್ಯಾಣ ವಿರುದ್ಧ ಪುಣೆಗೆ ಜಯ!

ಮೊದಲ ಕ್ವಾರ್ಟರ್‌ನಲ್ಲಿ ಉತ್ತಮ ಪ್ರದರ್ಶನದೊಂದಿಗೆ 13-5 ರಿಂದ ಬೆಂಗಳೂರು ಮುನ್ನಡೆ ಪಡೆಯಿತು. 2ನೇ ಕ್ವಾರ್ಟರ್‌ ಮುಕ್ತಾಯಕ್ಕೆ 20-17ರಿಂದ ಮುಂದಿದ್ದ ಬೆಂಗಳೂರು, ಕೊನೆ 2 ಕ್ವಾರ್ಟರ್‌ಗಳಲ್ಲೂ ಉತ್ತಮ ಆಟ ಪ್ರದರ್ಶಿಸಿ ಗೆಲುವು ಸಾಧಿಸಿತು.

ಉದ್ಘಾಟನಾ ಪಂದ್ಯದಲ್ಲಿ ಪುಣೆ ತಂಡ, ಎದುರಾಳಿ ಹರ್ಯಾಣ ವಿರುದ್ಧ 43-34 ಅಂಕಗಳ ಅಂತರದಲ್ಲಿ ಜಯ ಸಾಧಿಸಿತು. ಶೇಕ್‌ ಅಬ್ದುಲ್ಲಾ ಅದ್ಭುತ ಆಟದ ನೆರವಿನಿಂದ ಪುಣೆ ತಂಡ ಜಯಭೇರಿ ಬಾರಿಸಿತು. ಅಬ್ದುಲ್ಲಾ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಪ್ರೊ ಕಬಡ್ಡಿಯಲ್ಲಿ 20 ನಿಮಿಷಗಳಂತೆ 2 ಅವಧಿಗೆ ಪಂದ್ಯ ನಡೆಸಿದರೆ ಇಲ್ಲಿ ತಲಾ 10 ನಿಮಿಷಗಳ 4 ಕ್ವಾರ್ಟರ್‌ಗಳಲ್ಲಿ ಪಂದ್ಯ ನಡೆದಿದ್ದು ಭಿನ್ನವಾಗಿತ್ತು.

Latest Videos
Follow Us:
Download App:
  • android
  • ios