ನನ್ನ ಪ್ರಕಾರ ಬ್ಯಾಟಿಂಗ್‌ ಕೋಚ್‌ ಬಾಂಗರ್‌ ಹಾಗೂ ಫೀಲ್ಡಿಂಗ್‌ ಕೋಚ್‌ ಶ್ರೀಧರ್‌ ಅವರ ಸೇವೆಯೂ ಅಗತ್ಯವಿಲ್ಲ' ಎಂದು ಪ್ರಸನ್ನ ಕಿಡಿಕಾರಿದ್ದಾರೆ.

ಬೆಂಗಳೂರು(ಜೂ.24): ಕೊಹ್ಲಿ ವಿರುದ್ಧ ಟೀಕೆಗಳು ಮುಂದುವರಿದಿದ್ದು, ಇದೀಗ ಭಾರತ ತಂಡದ ಮಾಜಿ ಸ್ಪಿನ್ನರ್‌, ಕರ್ನಾಟಕದ ಇಎಎಸ್‌ ಪ್ರಸನ್ನ ಸಹ ಕೊಹ್ಲಿ ನಡೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

‘ನಾಯಕನೇ ಬಾಸ್‌ ಆದರೆ, ಕೋಚ್‌'ನ ಅವಶ್ಯಕತೆ​ಯಾದರೂ ಏಕೆ? ಎಂದು ಪ್ರಶ್ನಿಸಿದ್ದಾರೆ.

ನನ್ನ ಪ್ರಕಾರ ಬ್ಯಾಟಿಂಗ್‌ ಕೋಚ್‌ ಬಾಂಗರ್‌ ಹಾಗೂ ಫೀಲ್ಡಿಂಗ್‌ ಕೋಚ್‌ ಶ್ರೀಧರ್‌ ಅವರ ಸೇವೆಯೂ ಅಗತ್ಯವಿಲ್ಲ' ಎಂದು ಪ್ರಸನ್ನ ಕಿಡಿಕಾರಿದ್ದಾರೆ. ಕೋಚ್ ನೇಮಕ ಮಾಡುವ ಬದಲು ಒಬ್ಬ ದೈಹಿಕ ತರಬೇತುದಾರ ನೇಮಕ ಮಾಡಿಕೊಂಡರೆ ಸಾಕು ಎಂದಿದ್ದಾರೆ.

‘ಕೊಹ್ಲಿ ಉತ್ತಮ ಆಟಗಾರ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ಅವರು ಉತ್ತಮ ನಾಯಕ ಹೌದೋ, ಅಲ್ಲವೋ ಎಂಬುದು ತಿಳಿದಿಲ್ಲ' ಎಂದು ಪ್ರಸನ್ನ ಹೇಳಿದ್ದಾರೆ.