ಬೆಂಗಳೂರು[ಮೇ.22]: ವಿಶ್ವಕಪ್ ಗೆದ್ದು ತರುವ ಹುಮ್ಮಸ್ಸಿನಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಇಂಗ್ಲೆಂಡ್ ಫ್ಲೈಟ್ ಹತ್ತಿದೆ. ಬಿಸಿಸಿಐ ತನ್ನ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ಆಟಗಾರರ ಭಾವಚಿತ್ರಗಳ ಜತೆ ’ಜೆಟ್ ಸೆಟ್ ಟು ಗೋ’ ಅಡಿಬರಹ ಹಾಕಿ ಶೇರ್ ಮಾಡಿಕೊಂಡಿತ್ತು.

ವಿಶ್ವಕಪ್ ಬೇಟೆಯಾಡಲು ಇಂಗ್ಲೆಂಡ್ ಫ್ಲೈಟ್ ಏರಿದ ಭಾರತದ ಹುಲಿಗಳು

ಆದರೆ ಹದ್ದಿನ ಕಣ್ಣಿನ ಕ್ರಿಕೆಟ್ ಅಭಿಮಾನಿಗಳು ಯಜುವೇಂದ್ರ ಚಹಲ್, ವೇಗಿ ಮೊಹಮ್ಮದ್ ಶಮಿ ಪಬ್’ಜಿ ಗೇಮ್ ಆಡುತ್ತಿರುವುದನ್ನು ಪತ್ತೆಹಚ್ಚಿದ್ದಾರೆ. ಧೋನಿ-ಚಹಲ್ ಎದುರುಬದುರಾಗಿ ಕುಳಿತು ಆನ್’ಲೈನ್ ಗೇಮ್ ಆಡಿದ್ದಾರೆ. ಈ ಚಿತ್ರಗಳೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಕೆಲವರು ಬಿಸಿಸಿಐಗೆ ಟ್ಯಾಗ್ ಮಾಡಿ, ಒಂದು ಕಡೆ ವಿಶ್ವಕಪ್, ಮತ್ತೊಂದು ಕಡೆ ಪಬ್’ಜಿ ಗೇಮ್ ಎಂದು ತಮಾಶೆ ಮಾಡಿದ್ದಾರೆ. ಈ ಹಿಂದೆ ಯಜುವೇಂದ್ರ ಚಹಲ್ ತಾವು ಬಿಡುವಿದ್ದಾಗ ಪಬ್’ಜಿ ಗೇಮ್ ಆಡುವುದಾಗಿ ಖಾಸಗಿ ಚಾನಲ್’ವೊಂದರ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. 

2019ನೇ ಸಾಲಿನ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯು ಮೇ.30ರಿಂದ ಆರಂಭಗೊಳ್ಳಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗಲಿವೆ. ಇನ್ನು ಭಾರತ ತಂಡವು ಜೂನ್ 05ರಂದು ದಕ್ಷಿಣ ಆಫ್ರಿಕಾ ವಿರುದ್ಧ ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ.