ಜೂನ್ 24ರಂದು ನಡೆಯುವ ಉದ್ಘಾಟನಾ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ಹಾಗೂ ಶ್ರೀಲಂಕಾ ತಂಡಗಳು ಮುಖಾಮುಖಿಯಾಗಲಿವೆ.

ಲಂಡನ್(ಜೂ.19): ಮಹಿಳಾ ಏಕದಿನ ವಿಶ್ವಕಪ್'ನ ಪ್ರಶಸ್ತಿ ಮೊತ್ತವನ್ನು ಐಸಿಸಿ ಪ್ರಕಟಮಾಡಿದ್ದು, ಚಾಂಪಿಯನ್ ಆಗುವ ತಂಡಕ್ಕೆ ರೂ. 4.25 ಕೋಟಿ ಬಹುಮಾನ ಸಿಗಲಿದೆ.

ಇಂಗ್ಲೆಂಡ್'ನಲ್ಲಿ ಜೂನ್ 24ರಿಂದ ಜುಲೈ 23ರವರೆಗೂ ಪಂದ್ಯಾವಳಿ ನಡೆಯಲಿದೆ.

ರನ್ನರ್-ಅಪ್ ಸ್ಥಾನ ಪಡೆಯುವ ತಂಡವು ರೂ.2.12 ಕೋಟಿ ಪ್ರಶಸ್ತಿ ಮೊತ್ತವನ್ನು ತನ್ನದಾಗಿಸಿಕೊಳ್ಳಲಿದೆ. ಪಂದ್ಯಾವಳಿಯ ಮೊತ್ತ 2013ರಲ್ಲಿದ್ದ ಪ್ರಶಸ್ತಿ ಮೊತ್ತಕ್ಕಿಂತ 10 ಪಟ್ಟು ಹೆಚ್ಚಿದೆ ಎಂದು ಐಸಿಸಿ ತಿಳಿಸಿದೆ. ಸೆಮಿಫೈನಲ್'ನಲ್ಲಿ ಸೋಲುವ ತಂಡಗಳು ತಲಾ 1.06 ಕೋಟಿ ಬಹುಮಾನ ಸಿಗಲಿದೆ.

ಪ್ರಸಕ್ತ ಟೂರ್ನಿಯಲ್ಲಿ ಆಸ್ಟ್ರೇಲಿಯಾ ತಂಡವು ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವೆನಿಸಿಕೊಂಡಿದೆ. ಜೂನ್ 24ರಂದು ನಡೆಯುವ ಉದ್ಘಾಟನಾ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ಹಾಗೂ ಶ್ರೀಲಂಕಾ ತಂಡಗಳು ಮುಖಾಮುಖಿಯಾಗಲಿವೆ. ಇನ್ನು ಮಿಥಾಲಿ ರಾಜ್ ನೇತೃತ್ವದ ಭಾರತ ತಂಡವು ಜೂನ್ 29ರಿಂದ ವೆಸ್ಟ್'ಇಂಡಿಸ್ ಎದುರು ತನ್ನ ಮೊದಲ ಅಭಿಯಾನವನ್ನು ಆರಂಭಿಸಲಿದೆ.