Asianet Suvarna News Asianet Suvarna News

ಐಸಿಸಿ ಕ್ರಿಕೆಟ್ ರ‍್ಯಾಂಕಿಂಗ್ ಪ್ರಕಟ - ಸ್ಮೃತಿ ಮಂದನಾಗೆ ಅಗ್ರಸ್ಥಾನ!

ಐಸಿಸಿ ಮಹಿಳಾ ಏಕದಿನ ರ‍್ಯಾಂಕಿಂಗ್ ಪ್ರಕಟಗೊಂಡಿದೆ. ನೂತನ ರ‍್ಯಾಂಕಿಂಗ್ ಟಾಪ್ 5 ಪಟ್ಟಿಯಲ್ಲಿ ಭಾರತದ ಇಬ್ಬರು ಆಟಗಾರ್ತಿಯರು ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಸ್ಮೃತಿ ಮಂದನಾ ಮೊದಲ ಸ್ಥಾನ ಅಲಂಕರಿಸಿದ್ದಾರೆ. 

ICC women cricket ranking release Smriti Mandhana bags number one rank
Author
Bengaluru, First Published Feb 2, 2019, 7:24 PM IST

ದುಬೈ(ಫೆ.02): ಐಸಿಸಿ ಕ್ರಿಕೆಟ್ ಮಹಿಳಾ ಏಕದಿನ ರ‍್ಯಾಂಕಿಂಗ್ ಪಟ್ಟಿ ಬಿಡುಗಡೆಯಾಗಿದೆ. ನ್ಯೂಜಿಲೆಂಡ್ ಪ್ರವಾಸದಲ್ಲಿ ಅದ್ಬುತ ಬ್ಯಾಟಿಂಗ್ ಪ್ರದರ್ಶನ ನೀಡಿದ ಭಾರತದ ಸ್ಮೃತಿ ಮಂದನಾ ಮೊದಲ ಸ್ಥಾನ ಅಲಂಕರಿಸಿದ್ದಾರೆ. 3 ಪಂದ್ಯಗಳ ಏಕದಿನ ಸರಣಿಯಲ್ಲಿ 196 ರನ್ ಸಿಡಿಸಿರುವ ಮಂದನಾ 98ರ ಸರಾಸರಿಯಲ್ಲಿ ಬ್ಯಾಟ್ ಬೀಸಿದ್ದಾರೆ. ಈ ಮೂಲಕ ಭಾರತ 2-1 ಅಂತರದಲ್ಲಿ ಸರಣಿ ವಶಪಡಿಸಿಕೊಂಡಿತ್ತು.

ಇದನ್ನೂ ಓದಿ: ವಿಶ್ವಕಪ್ 2019: ಸೆಮಿಫೈನಲ್‌ ಪ್ರವೇಶಿಸಬಲ್ಲ ಬಲಿಷ್ಠ 4 ತಂಡಗಳು ಯಾವುವು?

ಸ್ಮೃತಿ ಮಂದನಾ 751 ರೇಟಿಂಗ್ ಪಾಯಿಂಟ್‌ನೊಂದಿಗೆ ಮೊದಲ ಸ್ಥಾನಕ್ಕೇರಿದ್ದಾರೆ. ಇನ್ನು ಆಸ್ಟ್ರೇಲಿಯಾದ ಎಲ್ಲಿಸ್ ಪೆರಿ ಹಾಗೂ ಮೆಗ್ ಲ್ಯಾನಿಂಗ್ 2 ಮತ್ತು 3ನೇ ಸ್ಥಾನದಲ್ಲಿದ್ದಾರೆ.  2018ರಲ್ಲಿ ಮಂದನಾ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಈ ಮೂಲಕ ಐಸಿಸಿ ವರ್ಷದ ಮಹಿಳಾ ಕ್ರಿಕೆಟ್ ಆಟಗಾರ್ತಿ ಹಾಗೂ ವರ್ಷದ ಏಕದಿನ ಮಹಿಳಾ ಆಟಗಾರ್ತಿ ಪ್ರಶಸ್ತಿ ಪಡೆದುಕೊಂಡಿದ್ದರು. ಇನ್ನು ಟಾಪ್ ರ‍್ಯಾಂಕಿಂಗ್ ಪಟ್ಟಿಯಲ್ಲಿ ಮಿಥಾಲಿ ರಾಜ್ ಕೂಡ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: ವಿಶ್ವಕಪ್ 2019: ಟೀಂ ಇಂಡಿಯಾ ಮುಂದಿರುವ 3 ಚಾಲೆಂಜ್!

ಐಸಿಸಿ ಮಹಿಳಾ ರ‍್ಯಾಂಕಿಂಗ್

ರ‍್ಯಾಂಕ್ ಆಟಗಾರ್ತಿ ರೇಟಿಂಗ್
1 ಸ್ಮೃತಿ ಮಂದನಾ 751
2 ಎಲ್ಲಿಸ್ ಪೆರಿ 681
3 ಮೆಗ್ ಲ್ಯಾನಿಂಗ್ 675
4 ಅ್ಯಮಿ ಸ್ಯಾಟರ್‌ವೈಟ್ 669
5 ಮಿಥಾಲಿ ರಾಜ್ 669

 

Follow Us:
Download App:
  • android
  • ios