ಇನ್ಮುಂದೆ ಬಾಲ್ ಟ್ಯಾಂಪರಿಂಗ್ ಮಾಡಿದ್ರೆ ಇನ್ನೂ ಕಠಿಣ ಶಿಕ್ಷೆ!

ICC Warns Harsh Punishment For  Ball Tampering
Highlights

  • ಸದ್ಯ 1 ಟೆಸ್ಟ್ ಇಲ್ಲವೇ 2 ಏಕದಿನಕ್ಕೆ ಮಾತ್ರ ನಿಷೇಧ ಇದೆ
  • ಕ್ರಿಕೆಟಿಗರು ವರ್ಷದಲ್ಲಿ ಇಂತಿಷ್ಟೇ ಟಿ20 ಲೀಗ್‌ಗಳಲ್ಲಿ ಆಡಬೇಕು!

ಡಬ್ಲಿನ್: ಚೆಂಡು ವಿರೂಪಗೊಳಿಸುವ ಆಟಗಾರರಿಗೆ 6 ಟೆಸ್ಟ್ ಇಲ್ಲವೇ 12 ಏಕದಿನ ಪಂದ್ಯಗಳಿಗೆ ನಿಷೇಧ ಗೊಳಿಸಲು ಐಸಿಸಿ ನಿರ್ಧರಿಸಿದೆ. 

ಇಲ್ಲಿ ನಡೆದ ವಾರ್ಷಿಕ ಸಭೆಯಲ್ಲಿ ಐಸಿಸಿ ಈ ವಿಷಯವನ್ನು ಪ್ರಕಟಿಸಿದೆ. 

ಸದ್ಯ 1 ಟೆಸ್ಟ್ ಇಲ್ಲವೇ 2 ಏಕದಿನಕ್ಕೆ ಮಾತ್ರ ನಿಷೇಧ ಹೇರಲಾಗುತ್ತಿದ್ದು, ಇನ್ಮುಂದೆ ಕಠಿಣ ಶಿಕ್ಷೆ ವಿಧಿಸುವುದಾಗಿ ಎಚ್ಚರಿಸಿದೆ. 

ಇದೇ ವೇಳೆ ಕ್ರಿಕೆಟಿಗರು ವರ್ಷದಲ್ಲಿ ಇಂತಿಷ್ಟೇ ಟಿ20 ಲೀಗ್‌ಗಳಲ್ಲಿ ಆಡಬೇಕು ಎನ್ನುವ ನಿಯಮವನ್ನೂ ಜಾರಿಗೆ ತರಲು ನಿರ್ಧರಿಸಲಾಗಿದೆ. 

loader