ದುಬೈ[ಡಿ.11]: ಭಾರತ-ಆಸ್ಟ್ರೇಲಿಯಾ ನಡುವಿನ ಅಡಿಲೇಡ್ ಟೆಸ್ಟ್ ಮುಕ್ತಾಯವಾದ ಬೆನ್ನಲ್ಲೇ ಐಸಿಸಿ ಟೆಸ್ಟ್ ರ‍್ಯಾಂಕಿಂಗ್ ಪ್ರಕಟಗೊಂಡಿದ್ದು, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನಂ.1 ಸ್ಥಾನ ಉಳಿಸಿಕೊಂಡಿದ್ದಾರೆ. ಇನ್ನು ಪಾಕಿಸ್ತಾನ ವಿರುದ್ಧದ ಸರಣಿಯಲ್ಲಿ ಅದ್ಭುತ ಪ್ರದರ್ಶನ ತೋರಿದ್ದ ಕೇನ್ ವಿಲಿಯಮ್ಸನ್ 913 ರೇಟಿಂಗ್ ಅಂಕಗಳೊಂದಿಗೆ ವೃತ್ತಿಜೀವನದ ಶ್ರೇಷ್ಠ ಸಾಧನೆಯೊಂದಿಗೆ 2ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. 

ವಿರಾಟ್ ಕೊಹ್ಲಿ 920 ರೇಟಿಂಗ್ ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೂ, ಕೇನ್ ವಿಲಿಯಮ್ಸನ್ ಕೇವಲ 7 ಅಂಕಗಳಿಂದ ಕೊಹ್ಲಿಗಿಂತ ಹಿಂದಿದ್ದಾರೆ. ಅಡಿಲೇಡ್ ಟೆಸ್ಟ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಚೇತೇಶ್ವರ್ ಪೂಜಾರ 2 ಸ್ಥಾನ ಏರಿಕೆ ಕಂಡು 4ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. ಸ್ಟೀವ್ ಸ್ಮಿತ್ ಹಾಗೂ ಜೋ ರೂಟ್ ತಲಾ ಒಂದು ಸ್ಥಾನ ಕುಸಿದು ಕ್ರಮವಾಗಿ 3 ಮತ್ತು 5ನೇ ಸ್ಥಾನಕ್ಕಿಳಿದಿದ್ದಾರೆ.  

ಇನ್ನು ಬೌಲರ್’ಗಳ ಶ್ರೇಯಾಂಕದಲ್ಲಿ ಕಗಿಸೋ ರಬಾಡ ಮತ್ತು ಜೇಮ್ಸ್ ಆ್ಯಂಡರ್’ಸನ್ ಮೊದಲೆರಡು ಸ್ಥಾನಗಳನ್ನು ಉಳಿಸಿಕೊಂಡಿದ್ದು, ವೆರ್ನಾನ್ ಫಿಲಾಂಡರ್ ಒಂದು ಸ್ಥಾನ ಏರಿಕೆ ಕಂಡು ಮೂರನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. ಪಾಕಿಸ್ತಾನ ಮೊಹಮ್ಮದ್ ಅಬ್ಬಾಸ್ ಒಂದು ಸ್ಥಾನ ಕುಸಿತದೊಂದಿಗೆ 4ನೇ ಸ್ಥಾನದಲ್ಲಿದ್ದರೆ, ರವೀಂದ್ರ ಜಡೇಜಾ 5ನೇ ಸ್ಥಾನ ಉಳಿಸಿಕೊಂಡಿದ್ದಾರೆ. ಇನ್ನು ಅಶ್ವಿನ್ ಆರನೇ ಸ್ಥಾನಕ್ಕೇರುವಲ್ಲಿ ಸಫಲವಾಗಿದ್ದಾರೆ.

ಟಾಪ್ 10 ಬ್ಯಾಟ್ಸ್’ಮನ್’ಗಳ ಶ್ರೇಯಾಂಕ ಪಟ್ಟಿ:

ಸ್ಥಾನ ಬ್ಯಾಟ್ಸ್’ಮನ್ ದೇಶ
1 ವಿರಾಟ್ ಕೊಹ್ಲಿ IND
2 ಕೇನ್ ವಿಲಿಯಮ್ಸನ್ NZ
3 ಸ್ಟೀವ್ ಸ್ಮಿತ್ AUS
4 ಚೇತೇಶ್ವರ್ ಪೂಜಾರ IND
5 ಜೋ ರೂಟ್ ENG
6 ಡೇವಿಡ್ ವಾರ್ನರ್ AUS
7 ದೀಮೂತ್ ಕರುಣರತ್ನೆ SL
8 ಡೀನ್ ಏಲ್ಗರ್ SA
9 ಹೆನ್ರಿ ನಿಕೋಲಸ್ NZ
10 ಅಜರ್ ಅಲಿ PAK

ಟಾಪ್ 10 ಬೌಲರ್’ಗಳ ಶ್ರೇಯಾಂಕಪಟ್ಟಿ

ಸ್ಥಾನ ಬೌಲರ್’ಗಳು ದೇಶ
1 ಕಗಿಸೋ ರಬಾಡ SA
2 ಜೇಮ್ಸ್ ಆ್ಯಂಡರ್’ಸನ್ ENG
3 ವೆರ್ನಾನ್ ಫಿಲಾಂಡರ್ SA
4 ಮೊಹಮ್ಮದ್ ಅಬ್ಬಾಸ್ PAK
5 ರವೀಂದ್ರ ಜಡೇಜಾ IND
6 ರವಿಚಂದ್ರನ್ ಅಶ್ವಿನ್ IND
7 ಪ್ಯಾಟ್ ಕಮ್ಮಿನ್ಸ್ AUS
8 ಟ್ರೆಂಟ್ ಬೌಲ್ಟ್ NZ
9 ಯಾಸಿರ್ ಶಾ PAK
10 ಜೇಸನ್ ಹೋಲ್ಡರ್ WI