ದುಬೈ: ಫುಟ್ಬಾಲ್‌ ಸೇರಿದಂತೆ ಇನ್ನಿತರ ಜನಪ್ರಿಯ ಕ್ರೀಡೆಗಳ ರೀತಿ ಟಿ20 ಕ್ರಿಕೆಟ್‌ನಲ್ಲಿ ಜಾಗತಿಕ ಮಟ್ಟದಲ್ಲಿ ರ‍್ಯಾಂಕಿಂಗ್ ನೀಡುವುದಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ) ಘೋಷಿಸಿತ್ತು. ಜ.1ರಿಂದ ತನ್ನ ಎಲ್ಲಾ 105 ಸದಸ್ಯ ರಾಷ್ಟ್ರಗಳಿಗೆ ರ‍್ಯಾಂಕಿಂಗ್ ನೀಡುವುದಾಗಿ ಹೇಳಿದ್ದ ಐಸಿಸಿ, ಮೊದಲ ಬಾರಿ ವಿಸ್ತರಿತ ಪಟ್ಟಿ ಪ್ರಕಟ ಮಾಡಿದೆ. 

ಟೆಸ್ಟ್‌ ರ‍್ಯಾಂಕಿಂಗ್: ಅಗ್ರ ಸ್ಥಾನ ಉಳಿಸಿಕೊಂಡ ಭಾರತ

3 ಸ್ಥಾನಗಳ ಕುಸಿತ ಕಂಡಿರುವ ಭಾರತ, 260 ರೇಟಿಂಗ್‌ ಅಂಕಗಳೊಂದಿಗೆ ನೂತನ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ಭಾರತದ ಸ್ಥಾನವನ್ನು ದಕ್ಷಿಣ ಆಫ್ರಿಕಾ(262) ಪಡೆದುಕೊಂಡಿದೆ. ಪಾಕಿಸ್ತಾನ (286) ಅಗ್ರಸ್ಥಾನ ಕಾಯ್ದುಕೊಂಡಿದ್ದು, 3ನೇ ಸ್ಥಾನದಲ್ಲಿ ಇಂಗ್ಲೆಂಡ್‌(261), 4ನೇ ಸ್ಥಾನದಲ್ಲಿ ಆಸ್ಪ್ರೇಲಿಯಾ(261) ಇದೆ.

ಆಫ್ಘಾನಿಸ್ತಾನ ಹಾಗೂ ಶ್ರೀಲಂಕಾ ಒಂದೊಂದು ಸ್ಥಾನ ಏರಿಕೆ ಕಂಡು ಕ್ರಮವಾಗಿ 7 ಹಾಗೂ 8ನೇ ಸ್ಥಾನದಲ್ಲಿವೆ. ವೆಸ್ಟ್‌ಇಂಡೀಸ್‌ 9ನೇ ಸ್ಥಾನಕ್ಕೆ ಕುಸಿದಿದೆ. ನೇಪಾಳ 14ರಿಂದ 11ನೇ ಸ್ಥಾನಕ್ಕೆ ಜಿಗಿದಿದೆ. ರಾರ‍ಯಂಕಿಂಗ್‌ ಪಟ್ಟಿಯಲ್ಲಿ ಸ್ಥಾನ ಪಡೆಯಲು ಮೇ 2016ರಿಂದ ಈಚೆಗೆ ಕನಿಷ್ಠ 6 ಪಂದ್ಯಗಳನ್ನು ಆಡಬೇಕಿದ್ದು, ಆಸ್ಟ್ರಿಯಾ, ಬೊಸ್ಟವಾನಾ, ಲುಕ್ಸೆಂಬರ್ಗ್‌ ಮೊದಲ ಬಾರಿಗೆ ಸ್ಥಾನ ಪಡೆದಿವೆ. ಸದ್ಯಕ್ಕೆ 6 ಪಂದ್ಯಗಳ ಮಾನದಂಡವನ್ನು ಪೂರ್ಣಗೊಳಿಸಿರುವ 80 ತಂಡಗಳನ್ನು ರ‍್ಯಾಂಕಿಂಗ್ ಪಟ್ಟಿಯಲ್ಲಿ ಸೇರಿಸಲಾಗಿದೆ. ಆಫ್ರಿಕನ್‌ ರಾಷ್ಟ್ರ ಲೆಸೊಥೊ ಕೊನೆ ಸ್ಥಾನದಲ್ಲಿದೆ.