Asianet Suvarna News Asianet Suvarna News

ಗೇಲ್ ಹುಟ್ಟುಹಬ್ಬಕ್ಕೆ ವಿನೂತನವಾಗಿ ಶುಭಕೋರಿದ ಐಸಿಸಿ

ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಎದುರಾಳಿ ತಂಡದ ಬೌಲರ್’ಗಳ ಎದೆಯಲ್ಲಿ ನಡುಕು ಹುಟ್ಟಿಸುವ ಕ್ಷಮತೆ ಉಳಿಸಿಕೊಂಡಿರುವ ಗೇಲ್ ಹಲವು ಅಪರೂಪದ ದಾಖಲೆಗಳನ್ನು ನಿರ್ಮಿಸಿದ್ದಾರೆ. 

ICC Sents Birthday Greetings to Chris Gayle
Author
Bengaluru, First Published Sep 21, 2018, 6:23 PM IST
  • Facebook
  • Twitter
  • Whatsapp

ಬೆಂಗಳೂರು[ಸೆ.21]: ವಿಶ್ವಕ್ರಿಕೆಟ್ ಕಂಡ ಸ್ಫೋಟಕ ಬ್ಯಾಟ್ಸ್’ಮನ್, ಕೆರಿಬಿಯನ್ ತಂಡದ ದೈತ್ಯ ಪ್ರತಿಭೆ, ಯೂನಿವರ್ಸೆಲ್ ಬಾಸ್ ಖ್ಯಾತಿಯ ಕ್ರಿಸ್ಟೋಪರ್ ಹೆನ್ರಿ ಗೇಲ್[ಕ್ರಿಸ್ ಗೇಲ್]ಗಿಂದು 39ನೇ ಹುಟ್ಟುಹಬ್ಬದ ಸಂಭ್ರಮ.

ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಎದುರಾಳಿ ತಂಡದ ಬೌಲರ್’ಗಳ ಎದೆಯಲ್ಲಿ ನಡುಕು ಹುಟ್ಟಿಸುವ ಕ್ಷಮತೆ ಉಳಿಸಿಕೊಂಡಿರುವ ಗೇಲ್ ಹಲವು ಅಪರೂಪದ ದಾಖಲೆಗಳನ್ನು ನಿರ್ಮಿಸಿದ್ದಾರೆ. ಟೆಸ್ಟ್ ಕ್ರಿಕೆಟ್’ನಲ್ಲಿ ಎರಡು ತ್ರಿಶತಕ ಸಿಡಿಸಿರುವ ಹಾಲಿ ಕ್ರಿಕೆಟಿಗ, ಅಂತರಾಷ್ಟ್ರೀಯ ಟಿ20 ಕ್ರಿಕೆಟ್’ನಲ್ಲಿ ಶತಕ ಸಿಡಿಸಿದ ಮೊದಲ ಬ್ಯಾಟ್ಸ್’ಮನ್ ಕೂಡಾ ಹೌದು. ಇದಷ್ಟೇ ಅಲ್ಲದೇ ಐಸಿಸಿ ಏಕದಿನ ವಿಶ್ವಕಪ್’ನಲ್ಲಿ ದ್ವಿಶತಕ ಸಿಡಿಸಿದ ಮೊದಲ ಬ್ಯಾಟ್ಸ್’ಮನ್, ಟೆಸ್ಟ್ ಕ್ರಿಕೆಟ್’ನಲ್ಲಿ ಮೊದಲ ಎಸೆತದಲ್ಲೇ ಸಿಕ್ಸರ್ ಸಿಡಿಸಿ ಮೊದಲ ಆರಂಭಿಕ ಬ್ಯಾಟ್ಸ್’ಮನ್, ಹೀಗೆ ಹತ್ತು ಹಲವು ದಾಖಲೆಗಳು ಗೇಲ್ ಹೆಸರಿನಲ್ಲಿವೆ. 

ಇನ್ನು ಐಪಿಎಲ್’ನಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಗೇಲ್ 3,994 ರನ್ ಸಿಡಿಸಿದ್ದಾರೆ. ಐಪಿಎಲ್’ನಲ್ಲೂ ಅತಿಹೆಚ್ಚು ಶತಕ[6] ಸಿಡಿಸಿದ ಆಟಗಾರ ಎನ್ನುವ ದಾಖಲೆ ಕೂಡಾ ಗೇಲ್ ಹೆಸರಿನಲ್ಲಿದೆ. ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸುವ ಮೂಲಕ ಆರ್’ಸಿಬಿ ಅಭಿಮಾನಿಗಳ ಮನಗೆದ್ದಿದ್ದ ಗೇಲ್ ಇದೀಗ ಕಿಂಗ್ಸ್ ಇಲೆವನ್ ಪಂಜಾಬ್ ತಂಡ ಕೂಡಿಕೊಂಡಿದ್ದಾರೆ.
ಗೇಲ್ ಹುಟ್ಟುಹಬ್ಬಕ್ಕೆ ಐಸಿಸಿ, ವಿರೇಂದ್ರ ಸೆಹ್ವಾಗ್ ಸೇರಿದಂತೆ ಹಲವರು ವಿನೂತನವಾಗಿ ಶುಭಕೋರಿದ್ದು ಹೀಗೆ...
  

Follow Us:
Download App:
  • android
  • ios