ನವ​ದೆ​ಹ​ಲಿ(ಆ.29): ಕ್ರಿಕೆಟ್‌ ದೇವರು ಎಂದೇ ಕರೆ​ಸಿ​ಕೊ​ಳ್ಳುವ ಸಚಿನ್‌ ತೆಂಡು​ಲ್ಕರ್‌ ಕಾಲೆ​ಳೆದ ಅಂತಾ​ರಾ​ಷ್ಟ್ರೀಯ ಕ್ರಿಕೆಟ್‌ ಸಮಿತಿ (ಐ​ಸಿ​ಸಿ) ಭಾರೀ ಟೀಕೆಗೆ ಗುರಿ​ಯಾ​ಗಿದೆ. 

ಆ್ಯಷಸ್ ಕದನ: ಸ್ಟೋಕ್ಸ್ ಕೆಚ್ಚೆದೆಯ ಶತಕಕ್ಕೆ ಒಲಿದ ವಿಜಯಲಕ್ಷ್ಮಿ

"

ಐಸಿಸಿ ಏಕ​ದಿನ ವಿಶ್ವ​ಕಪ್‌ನಲ್ಲಿ ಇಂಗ್ಲೆಂಡ್‌ ಚಾಂಪಿ​ಯನ್‌ ಆದ ಬಳಿ​ಕ, ಇಂಗ್ಲೆಂಡ್‌ನ ಬೆನ್‌ ಸ್ಟೋಕ್ಸ್‌ ಹಾಗೂ ಸಚಿನ್‌ ಜತೆ​ಗಿ​ರುವ ಫೋಟೋ​ವನ್ನು ಟ್ವೀಟ್‌ ಮಾಡಿದ್ದ ಐಸಿಸಿ, ‘ವಿ​ಶ್ವದ ಸಾರ್ವ​ಕಾ​ಲಿಕ ಶ್ರೇಷ್ಠ ಕ್ರಿಕೆಟಿಗನ ಜತೆ ಸಚಿನ್‌ ತೆಂಡು​ಲ್ಕರ್‌’ ಎಂದು ಶೀರ್ಷಿಕೆ ಬರೆ​ದಿತ್ತು. ಆ ಸಂದ​ರ್ಭ​ದಲ್ಲೇ ಅಭಿ​ಮಾ​ನಿ​ಗಳು ಆಕ್ರೋಶ ವ್ಯಕ್ತ​ಪ​ಡಿ​ಸಿ​ದ್ದರು. 

ಜೀವನದುದ್ದಕ್ಕೂ ವಿಲಿಯಮ್ಸನ್ ಬಳಿ ಕ್ಷಮೆ ಯಾಚಿಸುತ್ತೇನೆಂದ ಸ್ಟೋಕ್ಸ್!

ಇದೀಗ ಸ್ಟೋಕ್ಸ್‌, ಆ್ಯಷಸ್‌ 3ನೇ ಟೆಸ್ಟ್‌ನಲ್ಲಿ ಇಂಗ್ಲೆಂಡ್‌ಗೆ ರೋಚಕ ಗೆಲುವು ತಂದುಕೊಟ್ಟಬಳಿಕ ಹಳೆ ಟ್ವೀಟನ್ನು ರೀಟ್ವೀಟ್‌ ಮಾಡಿ​ರುವ ಐಸಿಸಿ, ‘ನಾವು ಹೇಳಿ​ರಿ​ರ​ಲಿ​ಲ್ಲವೇ’ ಎಂದು ಬರೆ​ದಿದೆ. ಸಚಿನ್‌ ಹಾಗೂ ಸ್ಟೋಕ್ಸ್‌ ನಡುವೆ ಹೋಲಿಕೆ ಮಾಡಿ​ದ್ದನ್ನು ಸಹಿ​ಸದ ಅಭಿ​ಮಾ​ನಿ​ಗಳು, ಐಸಿಸಿ ವಿರುದ್ಧ ಕೆಂಡಾ​ಮಂಡ​ಲ​ಗೊಂಡಿ​ದ್ದಾರೆ.