ದುಬೈ[ಜು.19]: ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ) ಬಿಡುಗಡೆಗೊಳಿಸಿರುವ ಬ್ಯಾಟ್ಸ್‌ಮನ್‌ಗಳ ರ‍್ಯಾಂಕಿಂಗ್ ಪಟ್ಟಿಯಲ್ಲಿ ಭಾರತ ತಂಡದ ನಾಯಕ ಕೊಹ್ಲಿ, ಅಗ್ರ ಸ್ಥಾನವನ್ನು ಭದ್ರ ಪಡಿಸಿಕೊಂಡಿದ್ದಾರೆ. ಏಕದಿನ ಸರಣಿ ಸೋಲಿನ ನಡುವೆಯೂ ಕೊಹ್ಲಿ ಪಾಲಿಗಿದು ಸಿಹಿ ಸುದ್ದಿಯಾಗಿದೆ.

ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಕೊಹ್ಲಿ, ಒಟ್ಟು 191 ರನ್‌ಗಳನ್ನು ಗಳಿಸಿದರು. ಈ ಮೂಲಕ 2 ಅಂಕ ಗಳಿಸಿದ ಕೊಹ್ಲಿ ಖಾತೆಯಲ್ಲಿ ಸದ್ಯ911 ಅಂಕಗಳಿವೆ. ಇದು ಅವರ ವೃತ್ತಿಬದುಕಿನ ಶ್ರೇಷ್ಠ ರೇಟಿಂಗ್ ಅಂಕವಾಗಿದೆ. ಜತೆಗೆ ಸಾರ್ವಕಾಲಿಕ ಅಧಿಕ ರೇಟಿಂಗ್ ಅಂಕಗಳ ಪಟ್ಟಿಯಲ್ಲಿ ಕೊಹ್ಲಿ 6ನೇ ಸ್ಥಾನಕ್ಕೇರಿದ್ದಾರೆ. 1991ರ (ಆಸ್ಟ್ರೇಲಿಯಾದ ಡೀನ್ ಜೋನ್ಸ್ 918 ಅಂಕ) ಬಳಿಕ ಬ್ಯಾಟ್ಸ್ ಮನ್ ಒಬ್ಬ ಗಳಿಸಿರುವ ಅತ್ಯಧಿಕ ರೇಟಿಂಗ್ ಅಂಕ ಇದಾಗಿದೆ.

ಬೌಲರ್‌ಗಳ ರ‍್ಯಾಂಕಿಂಗ್ ಪಟ್ಟಿಯಲ್ಲಿ ಕುಲ್ದೀಪ್ ಯಾದವ್ 8 ಸ್ಥಾನಗಳ ಏರಿಕೆ ಕಂಡು 6ನೇ ಸ್ಥಾನ ಪಡೆದಿದ್ದಾರೆ. ಮೊದಲ ಬಾರಿಗೆ ಅವರು ಅಗ್ರ 10ರಲ್ಲಿ ಸ್ಥಾನ ಪಡೆದಿದ್ದಾರೆ. ಜಸ್‌ಪ್ರೀತ್ ಬುಮ್ರಾ ನಂ.1 ಏಕದಿನ ಬೌಲರ್ ಆಗಿ ಮುಂದುವರಿದಿದ್ದಾರೆ.

ಅಗ್ರ 5 ಬ್ಯಾಟ್ಸ್’ಮನ್’ಗಳ ರ‍್ಯಾಂಕಿಂಗ್:
1. ವಿರಾಟ್ ಕೊಹ್ಲಿ [911 ಅಂಕ]
2. ಜೋ ರೂಟ್ [818 ಅಂಕ]
3. ಬಾಬರ್ ಅಜಂ [808 ಅಂಕ]
4. ರೋಹಿತ್ ಶರ್ಮಾ [806 ಅಂಕ]
5. ಡೇವಿಡ್ ವಾರ್ನರ್ [ 803 ಅಂಕ]

ಅಗ್ರ 5 ಬೌಲರ್’ಗಳ ರ‍್ಯಾಂಕಿಂಗ್:
1. ಜಸ್’ಪ್ರೀತ್ ಬುಮ್ರಾ [775 ಅಂಕ]
2. ರಶೀದ್ ಖಾನ್ [763 ಅಂಕ]
3. ಹಸನ್ ಅಲಿ [750 ಅಂಕ]
4. ಟ್ರೆಂಟ್ ಬೌಲ್ಟ್ [699 ಅಂಕ]
5. ಜೋಸ್ ಹ್ಯಾಜಲ್’ವುಡ್ [696]