ಭ್ರಷ್ಟಾಚಾರ ನಡೆಸಿದ ಆರೋಪದ ಮೇಲೆ ಶ್ರೀಲಂಕಾದ ಮಾಜಿ ಕ್ರಿಕೆಟಿಗರಾದ ನುವಾನ್‌ ಜೋಯ್ಸಾ ಹಾಗೂ ಆವಿಷ್ಕ ಗುಣವರ್ಧನೆಯನ್ನು ಐಸಿಸಿ ತಾತ್ಕಾಲಿಕ ಅಮಾನತುಗೊಳಿಸಿದೆ. 

ದುಬೈ[ಮೇ.11]: ಯುಎಇನಲ್ಲಿ ನಡೆದ ಟಿ10 ಲೀಗ್‌ ಟೂರ್ನಿಯಲ್ಲಿ ಭ್ರಷ್ಟಾಚಾರ ನಡೆಸಿದ ಆರೋಪದ ಮೇಲೆ ಶ್ರೀಲಂಕಾದ ಮಾಜಿ ಕ್ರಿಕೆಟಿಗರಾದ ನುವಾನ್‌ ಜೋಯ್ಸಾ ಹಾಗೂ ಆವಿಷ್ಕ ಗುಣವರ್ಧನೆಯನ್ನು ಐಸಿಸಿ ತಾತ್ಕಾಲಿಕ ಅಮಾನತುಗೊಳಿಸಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಶ್ರೀಲಂಕಾ ಕ್ರಿಕೆಟ್ ತಂಡ ಅತ್ಯಂತ ಭ್ರಷ್ಟ: ಐಸಿಸಿ

ಈ ಪೈಕಿ ಜೋಯ್ಸಾ ಹಿಂದಿನ ಭ್ರಷ್ಟಾಚಾರ ಆರೋಪದಡಿ ಈಗಾಗಲೇ ಅಮಾನತು ಎದುರಿಸುತ್ತಿದ್ದಾರೆ. ಎಮಿರೇಟ್ಸ್‌ ಕ್ರಿಕೆಟ್‌ ಮಂಡಳಿ (ಇಸಿಬಿ) ಪರವಾಗಿ ಐಸಿಸಿ, ಜೋಯ್ಸಾ ಮೇಲೆ 4 ಹಾಗೂ ಗುಣವರ್ಧನೆಯನ್ನು 2 ಆರೋಪಗಳಡಿ ಅಮಾನತುಗೊಳಿಸಿದೆ. ತಮ್ಮ ಮೇಲೆ ಸಲ್ಲಿಸಿರುವ ಆರೋಪಗಳಿಗೆ ಉತ್ತರಿಸಲು ಇಬ್ಬರಿಗೂ 14 ದಿನಗಳ ಕಾಲಾವಕಾಶ ನೀಡಲಾಗಿದೆ.

40 ವರ್ಷದ ನುವಾನ್‌ ಜೋಯ್ಸಾ ಶ್ರೀಲಂಕಾ ಪರ 30 ಟೆಸ್ಟ್ ಹಾಗೂ 95 ಏಕದಿನ ಪಂದ್ಯಳನ್ನಾಡಿದ್ದರೆ, ಗುಣವರ್ಧನೆ ದ್ವೀಪರಾಷ್ಟ್ರದ ಪರ 6 ಟೆಸ್ಟ್ ಹಾಗೂ 61 ಏಕದಿನ ಪಂದ್ಯಗಳನ್ನಾಡಿದ್ದಾರೆ.