ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಹಿನ್ನಡೆ ಅನುಭವಿಸುತ್ತಿದ್ದಂತೆ, ಇದೀಗ ರ‍್ಯಾಂಕಿಂಗ್ ಪಟ್ಟಿ ಬಿಡುಗಡೆಗೊಂಡಿದೆ. ಈ ಬಾರಿ ಐಸಿಸಿ ಏಕದಿನ ರ‍್ಯಾಂಕಿಂಗ್ ಪಟ್ಟಿ ಬಿಡುಗಡೆ ಮಾಡಿದೆ. ಹಾಗಾದರೆ ನೂತನ ರ‍್ಯಾಂಕಿಂಗ್ ಪಟ್ಟಿಯಲ್ಲಿ ಭಾರತ ಯಾವ ಸ್ಥಾನ ಪಡೆದಿದೆ? ಇಲ್ಲಿದೆ.
ದುಬೈ(ಆ.13): ಸೌತ್ಆಫ್ರಿಕಾ ಹಾಗೂ ಶ್ರೀಲಂಕಾ ವಿರುದ್ಧದ ಏಕದಿನ ಸರಣಿ ಬಳಿಕ ಇದೀಗ ಐಸಿಸಿ ನೂತನ ರ‍್ಯಾಂಕಿಂಗ್ ಪಟ್ಟಿ ಪ್ರಕಟಿಸಿದೆ. ಲಂಕಾ ತಂಡವನ್ನ ಮಣಿಸಿ ಸರಣಿ ಗದ್ದ ಸೌತ್ಆಫ್ರಿಕಾ ಏಕದಿನ ರ‍್ಯಾಂಕಿಂಗ್‌ನಲ್ಲಿ 4ನೇ ಸ್ಥಾನಕ್ಕೆ ಏರಿಕೆ ಕಂಡಿದೆ.
ಭಾರತ ವಿರುದ್ಧದ ಏಕದಿನ ಸರಣಿ ಗೆಲುವು ಸಾಧಿಸಿದ ಇಂಗ್ಲೆಂಡ್ ರ‍್ಯಾಂಕಿಂಗ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಇನ್ನು ಟೀ ಇಂಡಿಯಾ 121 ರೇಟಿಂಗ್ ಪಾಯಿಂಟ್‌ಗಳೊಂದಿಗೆ 2ನೇ ಸ್ಥಾನ ಅಲಂಕರಿಸಿದೆ.
ಅದ್ಬುತ ಪ್ರದರ್ಶನ ನೀಡುತ್ತಿರುವ ಪಾಕಿಸ್ತಾನ 5ನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. ಮುಂಬರುವ ಏಷ್ಯಾ ಕಪ್ ಟೂರ್ನಿ ಗೆಲವಿನ ವಿಶ್ವಾಸದಲ್ಲಿರುವ ಪಾಕಿಸ್ತಾನ ಅಗ್ರಸ್ಥಾನಕ್ಕೆ ಎಂಟ್ರಿಕೊಡಲು ತಯಾರಿ ಆರಂಭಿಸಿದೆ. ಆದರೆ ಹಾಲಿ ವಿಶ್ವಕಪ್ ಚಾಂಪಿಯನ್ ಆಸ್ಟ್ರೇಲಿಯಾ 6ನೇ ಸ್ಥಾನದಲ್ಲಿದೆ.
ಐಸಿಸಿ ಏಕದಿನ ರ‍್ಯಾಂಕಿಂಗ್ ಪಟ್ಟಿ:
| ರ‍್ಯಾಂಕ್ | ತಂಡ | ರೇಟಿಂಗ್ |
| 1 | ಇಂಗ್ಲೆಂಡ್ | 127 |
| 2 | ಟೀಂ ಇಂಡಿಯಾ | 121 |
| 3 | ನ್ಯೂಜಿಲೆಂಡ್ | 112 |
| 4 | ಸೌತ್ಆಫ್ರಿಕಾ | 110 |
| 5 | ಪಾಕಿಸ್ತಾನ | 104 |
| 6 | ಆಸ್ಟ್ರೇಲಿಯಾ | 100 |
| 7 | ಬಾಂಗ್ಲಾದೇಶ | 92 |
| 8 | ಶ್ರೀಲಂಕಾ | 80 |
| 9 | ವೆಸ್ಟ್ಇಂಡೀಸ್ | 69 |
| 10 | ಆಫ್ಘಾನಿಸ್ತಾನ | 63 |
