‘‘ಸುದ್ದಿ ಮಾರಾಟ ಮಾಡಲು ಅಲ್ಲಿನ ಮಾಧ್ಯಮಗಳು ನನ್ನ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿವೆ. ಅವರಿಗೆ ಒಳ್ಳೆಯದ್ದಾಗಲಿ ಎಂದು ಬಯಸುತ್ತೇನೆ’’

ನವದೆಹಲಿ(ಮಾ.24): ತಮ್ಮನ್ನು ಗುರಿಯಾಗಿಸಿಕೊಂಡು ಅತಿರೇಕದ ಸುದ್ದಿಗಳನ್ನು ಪ್ರಕಟ ಮಾಡುತ್ತಿರುವ ಆಸ್ಟ್ರೇಲಿಯಾದ ಮಾಧ್ಯಮಗಳಿಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಿರುಗೇಟು ನೀಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

‘‘ಸುದ್ದಿ ಮಾರಾಟ ಮಾಡಲು ಅಲ್ಲಿನ ಮಾಧ್ಯಮಗಳು ನನ್ನ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿವೆ. ಅವರಿಗೆ ಒಳ್ಳೆಯದ್ದಾಗಲಿ ಎಂದು ಬಯಸುತ್ತೇನೆ’’ ಎಂದಿದ್ದಾರೆ.

ತಮ್ಮ ಹೇಳಿಕೆಗಳನ್ನು ಸಮರ್ಥಿಸಿಕೊಂಡಿರುವ ಕೊಹ್ಲಿ, ‘‘ಯಾವಾಗಲೂ ನನಗೆ ಸರಿ ಅನಿಸಿದ್ದನ್ನು ಹೇಳಲು ನಾನು ಹಿಂಜರಿಯುವುದಿಲ್ಲ. ಹಾಗೇ ನನಗೆ ಸರಿ ಅನಿಸಿದ್ದನ್ನೇ ನಾನು ಮಾಡುತ್ತೇನೆ. ನಾನೇದ್ದರೂ ನನ್ನ ಆಟದ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳುವತ್ತ, ತಂಡದ ಏಳಿಗೆಗೆ ಶ್ರಮಿಸುವತ್ತ ಮಾತ್ರ ಗಮನ ಹರಿಸುತ್ತೇನೆ’’ ಎಂದು ಕೊಹ್ಲಿ ಹೇಳಿದ್ದಾರೆ.