Asianet Suvarna News Asianet Suvarna News

ಸತತ ವೈಫಲ್ಯ, ಮುಂದಿನ ಕ್ರಿಕೆಟ್ ಭವಿಷ್ಯ: ಯುವರಾಜ್ ಸಿಂಗ್ ಭಾವನಾತ್ಮಕ ಮಾತು

ನನ್ನ ಭವಿಷ್ಯ, ನನ್ನ ನಿರ್ದಾರವನ್ನು ನಾನೆ ನಿರ್ಧರಿಸಿಕೊಳ್ಳಬೇಕು. ನಾನು ವೈಫಲ್ಯದ ಬಗ್ಗೆ ಭೀತಿಗೊಂಡಿಲ್ಲ. ನಾನು ಸೋಲು, ಗೆಲುವುಗಳ ಏರಿಳಿತಗಳಲ್ಲಿ ನಂಬಿಕೆಯಿಟ್ಟುಕೊಂಡವನು.ನನ್ನ ಜೀವನದಲ್ಲಿ ಸೋಲುಗಳನ್ನು ಕಂಡಿದ್ದೇನೆ. ಅದನ್ನೆ ಮೆಟ್ಟಿಲಾಗಿಸಿಕೊಂಡು ಯಶಸ್ಸು ಸಾಧಿಸಿದ್ದಾನೆ.

I do fail admits Yuvraj but wont give up at least till 2019

ಕೊಲೊಂಬೊ(ಡಿ.04): ಸ್ಟಾರ್ ಆಟಗಾರ, ಒಂದೇ ಓವರ್'ನಲ್ಲಿ 6 ಸಿಕ್ಸ್'ರ್'ಗಳನ್ನು ಸಿಡಿಸಿದ ಸ್ಫೋಟಕ ಬ್ಯಾಟ್ಸ್'ಮೆನ್ ಹಾಗೂ 2011ರ ಏಕದಿನ ವಿಶ್ವಕಪ್ ಹೀರೋ 26 ವರ್ಷದ ಯುವರಾಜ್ ಸಿಂಗ್ ಅವರು ಇತ್ತೀಚಿನ ದಿನಗಳಲ್ಲಿ ವೈಫಲ್ಯ ಕಾಣುತ್ತಿರುವುದಕ್ಕೆ ಹಾಗೂ ತಮ್ಮ ಕ್ರಿಕೆಟ್ ಭವಿಷ್ಯದ ಬಗ್ಗೆ ಭಾವನಾತ್ಮಕ ಮಾತುಗಳನ್ನಾಡಿದ್ದಾರೆ.

ನಾನು ನನ್ನ ವೈಫಲ್ಯದ ಬಗ್ಗೆ ಹೇಳಲೇಬೇಕಾಗಿದೆ. ನಾನು ವೈಫಲ್ಯನಾಗುತ್ತಿದ್ದೇನೆ. ಕಳೆದ 3 ಟೆಸ್ಟ್'ಗಳ ಫಿಟ್'ನೆಸ್'ನಲ್ಲೂ ವೈಫಲ್ಯನಾಗಿದ್ದೇನೆ. ಆದರೆ ನಿನ್ನೆಯ ಪರೀಕ್ಷೆಯಲ್ಲಿ ನಾನು ಉತ್ತೀರ್ಣನಾದೆ. 17 ವರ್ಷಗಳ ನಂತರ ನಾನು ವೈಫಲ್ಯನಾಗುತ್ತಿದ್ದೇನೆ.

ಯುನಿಸೆಫ್'ನವರು ಆಯೋಜಿಸಿದ್ದ 'ಹದಿಹರೆಯದವರ ಭವಿಷ್ಯವನ್ನು ರೂಪಿಸಲು ಕ್ರೀಡೆಗಳ ಶಕ್ತಿ' ಎಂಬ ಸಮಾರಂಭದಲ್ಲಿ ಮಾತನಾಡಿದರು. ನನ್ನ ಭವಿಷ್ಯ, ನನ್ನ ನಿರ್ದಾರವನ್ನು ನಾನೆ ನಿರ್ಧರಿಸಿಕೊಳ್ಳಬೇಕು. ನಾನು ವೈಫಲ್ಯದ ಬಗ್ಗೆ ಭೀತಿಗೊಂಡಿಲ್ಲ. ನಾನು ಸೋಲು, ಗೆಲುವುಗಳ ಏರಿಳಿತಗಳಲ್ಲಿ ನಂಬಿಕೆಯಿಟ್ಟುಕೊಂಡವನು.ನನ್ನ ಜೀವನದಲ್ಲಿ ಸೋಲುಗಳನ್ನು ಕಂಡಿದ್ದೇನೆ. ಅದನ್ನೆ ಮೆಟ್ಟಿಲಾಗಿಸಿಕೊಂಡು ಯಶಸ್ಸು ಸಾಧಿಸಿದ್ದಾನೆ.

ಸೋಲುವ ವ್ಯಕ್ತಿ ಮಾತ್ರ ಯಶಸ್ಸು ಸಾಧಿಸುತ್ತಾನೆ

ನಿಮ್ಮ ಜೀವನದಲ್ಲಿ ಒಬ್ಬ ಯಶಸ್ವಿ ವ್ಯಕ್ತಿಯಾಗಬೇಕಾದರೆ ನಿಮಗೆ ಸೋಲು ಅಗತ್ಯವಾಗಿರುತ್ತದೆ. ಆ ನಂತರವೇ ಮುಂದಿನ ಹಂತದಲ್ಲಿ  ಒಬ್ಬ ಪ್ರಬಲ ವ್ಯಕ್ತಿಯಾಗಿ ಬೆಳೆಯುತ್ತೀರಿ. ನನ್ನ ಮುಂದಿನ ಗುರಿ,ನಿರ್ಧಾರ ಹಾಗೂ ಭವಿಷ್ಯಗಳ ಬಗ್ಗೆ ನಾನು ನನ್ನ ಮೇಲೆ ನಂಬಿಕೆಯಿಟ್ಟುಕೊಂಡಿದ್ದಾನೆ ವಿನಃ ಬೇರೆಯವರು ನನ್ನ ಬಗ್ಗೆ ಎಷ್ಟು ನಂಬಿಕೆಯಿಟ್ಟಿದ್ದಾರೋ ನನಗೆ ಗೊತ್ತಿಲ್ಲ. ಮುಂದಿನ ದಿನಗಳಲ್ಲಿ ಯಾವ ಹಂತದ ಕ್ರಿಕೆಟ್'ನಲ್ಲಿ ಆಡುತ್ತೇನೆ ಎಂದು. ಆದರೆ ನಾನು ಆಡುತ್ತಿರುತ್ತೇನೆ. 2019ರವರೆಗೂ ನಾನು ಆಡುತ್ತಿರುತ್ತೇನೆ. ಮುಂದಿನ ದಿನಗಳಲ್ಲಿ ಅವಕಾಶ ಸಿಗುವ ಬಗ್ಗೆ ನನಗೆ ನಂಬಿಕೆಯಿದೆ' ಎಂದು ತಿಳಿಸಿದರು.ಎಡಗೈ ವೇಗದ ಯುವರಾಜ್ ತಮ್ಮ 17 ವರ್ಷಗಳ ಕ್ರಿಕೆಟ್ ಜೀವನದಲ್ಲಿ 40 ಟೆಸ್ಟ್(1900), 304(8701) ಏಕದಿನ ಹಾಗೂ 58(1117) ಟಿ20 ಆಡಿದ್ದಾರೆ.   

Follow Us:
Download App:
  • android
  • ios