ನಾನು ಟೆನಿಸ್‌ಗೆ ನಿವೃತ್ತಿ ಘೋಷಿಸಿಲ್ಲ: ಸೆರೆನಾ ವಿಲಿಯಮ್ಸ್‌ ಯೂ-ಟರ್ನ್‌!

ನಿವೃತ್ತಿ ಕುರಿತಂತೆ ಉಲ್ಟಾ ಹೊಡೆದ ಟೆನಿಸ್ ದಿಗ್ಗಜೆ ಸೆರೆನಾ ವಿಲಿಯಮ್ಸ್‌
ನಾನಿನ್ನು ಟೆನಿಸ್‌ಗೆ ಗುಡ್‌ ಬೈ ಹೇಳಿಲ್ಲ ಎಂದ ಸೆರೆನಾ
23 ಟೆನಿಸ್ ಗ್ರ್ಯಾನ್‌ ಸ್ಲಾಂ ಜಯಿಸಿರುವ ಅಮೆರಿಕದ ಟೆನಿಸ್ ದಂತಕಥೆ

I am not retired from tennis Says legend Serena Williams kvn

ನ್ಯೂಯಾರ್ಕ್(ಅ.27): ಇತ್ತೀಚೆಗಷ್ಟೇ ಯುಎಸ್‌ ಓಪನ್‌ ಬಳಿಕ ಟೆನಿಸ್‌ಗೆ ವಿದಾಯ ಘೋಷಿಸಿದ್ದ ದಾಖಲೆಯ 23 ಗ್ರ್ಯಾನ್‌ಸ್ಲಾಂ ಪ್ರಶಸ್ತಿ ವಿಜೇತೆ, ಅಮೆರಿಕದ ಸೆರೆನಾ ವಿಲಿಯಮ್ಸ್‌ ಯೂ ಟರ್ನ್‌ ಹೊಡೆದಿದ್ದು, ಟೆನಿಸ್‌ಗೆ ನಿವೃತ್ತಿ ಘೋಷಿಸಿಲ್ಲ ಎಂದು ಹೇಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ‘ನಾನಿನ್ನೂ ನಿವೃತ್ತಿಯಾಗಿಲ್ಲ. ಟೆನಿಸ್‌ಗೆ ಮರಳುವ ಸಾಧ್ಯತೆ ಹೆಚ್ಚಿದೆ. ನಿವೃತ್ತಿ ಎಂಬ ಪದ ನನಗೆ ಇಷ್ಟವಿಲ್ಲ. ಅದು ಹೊಸ ಪದ ಎಂದು ನನಗನ್ನಿಸುತ್ತಿಲ್ಲ’ ಎಂದಿದ್ದಾರೆ. 40 ವರ್ಷದ ಸೆರೆನಾ, ಕಳೆದ ಆಗಸ್ಟ್‌ನಲ್ಲಿ ಯುಎಸ್‌ ಓಪನ್‌ ಬಳಿಕ ಟೆನಿಸ್‌ನಿಂದ ದೂರ ಉಳಿಯುವ ಬಗ್ಗೆ ಹೇಳಿಕೊಂಡಿದ್ದರು. ಆದರೆ ನಿವೃತ್ತಿ ಎಂಬ ಪದ ಬಳಸದೆ, ಟೆನಿಸ್‌ನಿಂದ ವಿಕಸನಗೊಳ್ಳುತ್ತಿದ್ದೇನೆ ಎಂದಷ್ಟೇ ಹೇಳಿದ್ದರು.

ಯುಎಸ್‌ ಓಪನ್‌ ಗ್ರ್ಯಾನ್‌ ಸ್ಲಾಂ ಟೂರ್ನಿಯ ಮಹಿಳಾ ಸಿಂಗಲ್ಸ್‌ 3ನೇ ಸುತ್ತಿನಲ್ಲಿ ಆಸ್ಪ್ರೇಲಿಯಾದ ಆಲಾ ಟಾಮ್ಲಾನೊವಿಚ್‌ ವಿರುದ್ಧ 5-7, 7-6, 1-6 ಸೆಟ್‌ಗಳಲ್ಲಿ ಸೋಲು ಅನುಭವಿಸುವ ಮೂಲಕ ತಮ್ಮ ಓಟವನ್ನು ಕೊನೆಗೊಳಿಸಿದರು. ಮುಂದಿನ ತಿಂಗಳು 41 ವಸಂತಗಳನ್ನು ಪೂರೈಸಲಿರುವ ಸೆರೆನಾ, ಯುಎಸ್‌ ಓಪನ್‌ ಬಳಿಕ ಸ್ಪರ್ಧಾತ್ಮಕ ಟೆನಿಸ್‌ಗೆ ವಿದಾಯ ಹೇಳುವುದಾಗಿ ಘೋಷಿಸಿದ್ದರು.

ಸೋಲಿನ ಬಳಿಕ ಮಾತನಾಡಿದ್ದ ಸೆರೆನಾ ವಿಲಿಯಮ್ಸ್ ಕಣ್ಣೀರಿಡುತ್ತಾ ತಮ್ಮನ್ನು ಬೆಂಬಲಿಸಿದ ಪ್ರತಿಯೊಬ್ಬರಿಗೂ ಧನ್ಯವಾದ ಹೇಳಿದರು. ವಿಶೇಷವಾಗಿ ತಮ್ಮ ಪೋಷಕರು, ಸಹೋದರಿ ವೀನಸ್‌ ವಿಲಿಯಮ್ಸ್‌ ಬಗ್ಗೆ ಅವರು ಮಾತನಾಡಿದರು. ‘ವೀನಸ್‌ ಇಲ್ಲದಿದ್ದರೆ ಸೆರೆನಾ ಇಷ್ಟುದೊಡ್ಡ ಮಟ್ಟಕ್ಕೇರಲು ಸಾಧ್ಯವಾಗುತ್ತಿರಲಿಲ್ಲ’ ಎಂದ ಸೆರೆನಾ, ‘ನಿವೃತ್ತಿ ನಿರ್ಧಾರವನ್ನು ಹಿಂಪಡೆಯುವ ಬಗ್ಗೆ ಮರು ಆಲೋಚನೆ ಮಾಡುವುದಿಲ್ಲ. ಆದರೆ ಗೊತ್ತಿಲ್ಲ, ಏನು ಬೇಕಾದರೂ ಆಗಬಹುದು’ ಎಂದು ಕುತೂಹಲ ಮೂಡಿಸುವಂತಹ ಹೇಳಿಕೆ ನೀಡಿದ್ದರು.

ರ‍್ಯಾಂಕಿಂಗ್‌‌: 3 ವರ್ಷ ಬಳಿಕ ಟಾಪ್‌-5ಗೆ ಮರಳಿದ ಸಿಂಧು

ನವದೆಹಲಿ: ಮಾಜಿ ವಿಶ್ವ ಚಾಂಪಿಯನ್‌ ಪಿ.ವಿ.ಸಿಂಧು ಹಾಗೂ ಥಾಮಸ್‌ ಕಪ್‌ ವಿಜೇತ ಭಾರತ ತಂಡದಲ್ಲಿದ್ದ ಎಚ್‌.ಎಸ್‌.ಪ್ರಣಯ್‌ ಬ್ಯಾಡ್ಮಿಂಟನ್‌ ವಿಶ್ವ ರ‍್ಯಾಂಕಿಂಗ್‌‌ನಲ್ಲಿ ಪ್ರಗತಿ ಸಾಧಿಸಿದ್ದಾರೆ. ಮಂಗಳವಾರ ಪ್ರಕಟಗೊಂಡ ನೂತನ ರ‍್ಯಾಂಕಿಂಗ್‌‌ನಲ್ಲಿ ಸಿಂಧು ಮಹಿಳಾ ಸಿಂಗಲ್ಸ್‌ನಲ್ಲಿ 87,218 ಅಂಕಗಳೊಂದಿಗೆ 5ನೇ ಸ್ಥಾನ ಪಡೆದರು. 

ಆನ್‌ಲೈನ್‌ನಲ್ಲೇ ಜಾವೆಲಿನ್ ಕಲಿತು ಪದಕ ಗೆದ್ದ ಕರಿಶ್ಮಾ..!

2007ರಲ್ಲಿ ಜೀವನಶ್ರೇಷ್ಠ 2ನೇ ಸ್ಥಾನಕ್ಕೇರಿದ್ದ ಸಿಂಧು 3 ವರ್ಷಗಳ ಬಳಿಕ ಅಗ್ರ 5ಕ್ಕೆ ಮರಳಿದ್ದಾರೆ. ಸೈನಾ ನೆಹ್ವಾಲ್‌ 33ನೇ ಸ್ಥಾನಕ್ಕೆ ಕುಸಿದಿದ್ದಾರೆ. ಇದೇ ವೇಳೆ ಪ್ರಣಯ್‌ ಪುರುಷರ ಸಿಂಗಲ್ಸ್‌ನಲ್ಲಿ 12ನೇ ಸ್ಥಾನಕ್ಕೇರಿದ್ದು, ಲಕ್ಷ್ಯ ಸೇನ್‌ ಹಾಗೂ ಮಾಜಿ ವಿಶ್ವ ನಂ.1 ಕಿದಂಬಿ ಶ್ರೀಕಾಂತ್‌ ಕ್ರಮವಾಗಿ 8 ಮತ್ತು 11ನೇ ಸ್ಥಾನ ಕಾಯ್ದುಕೊಂಡಿದ್ದಾರೆ.

ರಾಷ್ಟ್ರೀಯ ಕಾರ್ಟಿಂಗ್‌: ಬೆಂಗ್ಳೂರಿಗರಿಗೆ ಪ್ರಶಸ್ತಿ

ಬೆಂಗಳೂರು: 2022ರ ಮೀಕೋ-ಎಫ್‌ಎಂಎಸ್‌ಸಿಐ ರಾಷ್ಟ್ರೀಯ ಕಾರ್ಟಿಂಗ್‌ ಚಾಂಪಿಯನ್‌ಶಿಪ್‌(ರೋಟಾಕ್ಸ್‌ ಮ್ಯಾಕ್ಸ್‌ ವಿಭಾಗಗಳು)ನಲ್ಲಿ ಬೆಂಗಳೂರಿನ ರೋಹನ್‌ ಮಾದೇಶ್‌(ಸೀನಿಯರ್‌ ಮ್ಯಾಕ್ಸ್‌), ಅಭಯ್‌ ಎಂ(ಜೂನಿಯರ್‌ ಮ್ಯಾಕ್ಸ್‌) ಹಾಗೂ ನಿಖಿಲೇಶ್‌ ರಾಜು ಡಿ (ಮೈಕ್ರೋ ಮ್ಯಾಕ್ಸ್‌) ಚಾಂಪಿಯನ್ನರಾಗಿ ಹೊರಹೊಮ್ಮಿದ್ದಾರೆ.

ಈ ಮೂವರು ನವೆಂಬರ್‌ 19ರಿಂದ 26ರ ವರೆಗೂ ಪೋರ್ಚುಗಲ್‌ನಲ್ಲಿ ನಡೆಯಲಿರುವ ರೋಟಾಕ್ಸ್‌ ಮ್ಯಾಕ್ಸ್‌ ಚಾಲೆಂಜ್‌ ಗ್ರ್ಯಾಂಡ್‌ ಫೈನಲ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. 2 ತಿಂಗಳ ಕಾಲ ಒಟ್ಟು 8 ಸುತ್ತುಗಳ ಸ್ಪರ್ಧೆಯಲ್ಲಿ ಈ ಮೂವರು ಅತ್ಯುತ್ತಮ ಪ್ರದರ್ಶನ ತೋರಿದರು.

Latest Videos
Follow Us:
Download App:
  • android
  • ios