2ನೇ ಸುತ್ತಿನ ಪಂದ್ಯದಲ್ಲಿ ಹೆಚ್.ಎಸ್ ಪ್ರಣಯ್ ವಿಶ್ವದ 69ನೇ ಶ್ರೇಯಾಂಕಿತ ಯುನೈಟೆಡ್ ಕಿಂಗ್'ಡಂನ ಕೀರನ್ ಮರ್ಲೀಸ್ ವಿರುದ್ಧ 21-17, 16-21, 21-15 ಗೇಮ್‌'ಗಳಿಂದ ಗೆಲುವು ಪಡೆದರು.

ಕಲಾಗ್ರೇ (ಕೆನಡಾ): ಭಾರತದ ಸ್ಟಾರ್ ಶಟ್ಲರ್ ಎಚ್.ಎಸ್. ಪ್ರಣಯ್, ಕೆನಡಾ ಓಪನ್ ಗ್ರ್ಯಾನ್ ಪ್ರೀ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಪ್ರೀ ಕ್ವಾರ್ಟರ್ ಹಂತ ಪ್ರವೇಶಿಸಿದರೆ, ಮತ್ತೊಂದು ಪಂದ್ಯದಲ್ಲಿ ಪಿ. ಕಶ್ಯಪ್ ಸೋತು ಟೂರ್ನಿಯಿಂದ ಹೊರಬಿದ್ದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇಂದು ನಡೆದ 2ನೇ ಸುತ್ತಿನ ಪಂದ್ಯದಲ್ಲಿ ಹೆಚ್.ಎಸ್ ಪ್ರಣಯ್ ವಿಶ್ವದ 69ನೇ ಶ್ರೇಯಾಂಕಿತ ಯುನೈಟೆಡ್ ಕಿಂಗ್'ಡಂನ ಕೀರನ್ ಮರ್ಲೀಸ್ ವಿರುದ್ಧ 21-17, 16-21, 21-15 ಗೇಮ್‌'ಗಳಿಂದ ಗೆಲುವು ಪಡೆದರು.

ಇನ್ನೊಂದು ಸಿಂಗಲ್ಸ್ ಪಂದ್ಯದಲ್ಲಿ ಗಾಯದಿಂದ ಚೇತರಿಸಿಕೊಂಡು ಕಣಕ್ಕಿಳಿದಿರುವ ಪಿ ಕಶ್ಯಪ್ ಜಪಾನಿನ ಯುವ ಆಟಗಾರ ಜಿಯೊನ್ ಹೇಯೊಕ್ ಜಿನ್ ಎದುರು 10-21, 21-10, 15-21 ಗೇಮ್‌'ಗಳಿಂದ ಪರಾಭವ ಹೊಂದಿದರು.