ಪ್ರಣಯ್ ಸೋಲಿನೊಂದಿಗೆ ಜಪಾನ್‌ ಮಾಸ್ಟರ್ಸ್‌ನಲ್ಲಿ ಭಾರತದ ಸವಾಲು ಅಂತ್ಯ

ಗುರುವಾರ ನಡೆದ ಪುರುಷರ ಸಿಂಗಲ್ಸ್‌ ಪಂದ್ಯದಲ್ಲಿ ವಿಶ್ವ ನಂ.8 ಪ್ರಣಯ್‌, ಚೈನೀಸ್‌ ತೈಪೆಯ ಚೊಯು ಟೀನ್‌ ಚೆನ್‌ ವಿರುದ್ಧ 21-19, 16-21, 19-21 ಅಂತರದಲ್ಲಿ ವೀರೋಚಿತ ಸೋಲನುಭವಿಸಿದರು. ಇದರೊಂದಿಗೆ ಚೆನ್‌, ಪ್ರಣಯ್‌ ವಿರುದ್ಧದ ಗೆಲುವಿನ ದಾಖಲೆಯನ್ನು 7-4ಕ್ಕೆ ಹೆಚ್ಚಿಸಿದರು. ಲಕ್ಷ್ಯ ಸೆನ್‌, ಪ್ರಿಯಾನ್ಶು ರಾಜಾವತ್‌ ಮೊದಲ ಸುತ್ತಲ್ಲೇ ಸೋತು ಹೊರಬಿದ್ದಿದ್ದರು.

HS Prannoy Loses In Japan Masters Indian Challenge Ends kvn

ಕುಮಮೊಟೊ(ನ.17): ಭಾರತದ ತಾರಾ ಶಟ್ಲರ್‌ ಎಚ್‌.ಎಸ್‌.ಪ್ರಣಯ್‌ ಇಲ್ಲಿ ನಡೆಯುತ್ತಿರುವ ಜಪಾನ್‌ ಮಾಸ್ಟರ್ಸ್ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ 2ನೇ ಸುತ್ತಿನಲ್ಲಿ ಸೋತು ಹೊರಬಿದ್ದಿದ್ದಾರೆ. ಇದರೊಂದಿಗೆ ಟೂರ್ನಿಯಲ್ಲಿ ಭಾರತದ ಸವಾಲು ಅಂತ್ಯಗೊಂಡಿದೆ.

ಗುರುವಾರ ನಡೆದ ಪುರುಷರ ಸಿಂಗಲ್ಸ್‌ ಪಂದ್ಯದಲ್ಲಿ ವಿಶ್ವ ನಂ.8 ಪ್ರಣಯ್‌, ಚೈನೀಸ್‌ ತೈಪೆಯ ಚೊಯು ಟೀನ್‌ ಚೆನ್‌ ವಿರುದ್ಧ 21-19, 16-21, 19-21 ಅಂತರದಲ್ಲಿ ವೀರೋಚಿತ ಸೋಲನುಭವಿಸಿದರು. ಇದರೊಂದಿಗೆ ಚೆನ್‌, ಪ್ರಣಯ್‌ ವಿರುದ್ಧದ ಗೆಲುವಿನ ದಾಖಲೆಯನ್ನು 7-4ಕ್ಕೆ ಹೆಚ್ಚಿಸಿದರು. ಲಕ್ಷ್ಯ ಸೆನ್‌, ಪ್ರಿಯಾನ್ಶು ರಾಜಾವತ್‌ ಮೊದಲ ಸುತ್ತಲ್ಲೇ ಸೋತು ಹೊರಬಿದ್ದಿದ್ದರು.

ಇಂದಿನಿಂದ ರಾಷ್ಟ್ರೀಯ ಪುರುಷರ ಹಾಕಿ ಟೂರ್ನಿ

ಚೆನ್ನೈ: 13ನೇ ರಾಷ್ಟ್ರೀಯ ಪುರುಷರ ಹಾಕಿ ಚಾಂಪಿಯನ್‌ಶಿಪ್‌ಗೆ ಶುಕ್ರವಾರ ಚಾಲನೆ ಸಿಗಲಿದ್ದು, ನ.28ರ ವರೆಗೂ ನಡೆಯಲಿದೆ. ಇಲ್ಲಿನ ಮೇಯರ್‌ ರಾಧಾಕೃಷ್ಣನ್‌ ಕ್ರೀಡಾಂಗಣ ಟೂರ್ನಿಗೆ ಆತಿಥ್ಯ ವಹಿಸಲಿದ್ದು, ಕರ್ನಾಟಕ ತಂಡ ‘ಸಿ’ ಗುಂಪಿನಲ್ಲಿ ಬಿಹಾರ ಹಾಗೂ ದಾದರ್‌-ನಗರ್‌ ಹವೇಲಿ ತಂಡಗಳೊಂದಿಗೆ ಸ್ಥಾನ ಪಡೆದಿದೆ.

ಸೌತ್ ಆಫ್ರಿಕಾ ವಿರುದ್ದ ತಿಣುಕಾಡಿ ಗೆದ್ದ ಆಸ್ಟ್ರೇಲಿಯಾ, ಫೈನಲ್‌ನಲ್ಲಿ ಇಂಡೋ-ಆಸಿಸ್ ಕದನ!

ಒಟ್ಟು 29 ತಂಡಗಳನ್ನು 8 ಗುಂಪುಗಳನ್ನಾಡಿ ವಿಂಗಡಿಸಲಾಗಿದ್ದು, 3 ಗುಂಪುಗಳಲ್ಲಿ ತಲಾ 3, 5 ಗುಂಪುಗಳಲ್ಲಿ ತಲಾ 4 ತಂಡಗಳಿವೆ. ಗುಂಪಿನಲ್ಲಿ ಅಗ್ರಸ್ಥಾನ ಪಡೆಯುವ ತಂಡಗಳು ಕ್ವಾರ್ಟರ್‌ ಫೈನಲ್‌ ಪ್ರವೇಶಿಸಲಿವೆ.

ಕರ್ನಾಟಕ ನ.19ರಂದು ತನ್ನ ಮೊದಲ ಪಂದ್ಯವನ್ನು ದಾದರ್‌-ನಗರ್‌ ಹವೇಲಿ ತಂಡದ ವಿರುದ್ಧ ಆಡಲಿದ್ದು, ನ.20ರಂದು ಬಿಹಾರವನ್ನು ಎದುರಿಸಲಿದೆ. ನ.25ರಂದು ಕ್ವಾರ್ಟರ್‌ ಫೈನಲ್ಸ್‌, ನ.27ರಂದು ಸೆಮಿಫೈನಲ್ಸ್‌ ಹಾಗೂ ನ.28ರಂದು ಫೈನಲ್‌ ಹಾಗೂ 3ನೇ ಸ್ಥಾನದ ಪಂದ್ಯಗಳು ನಡೆಯಲಿವೆ.

ಸೆಮೀಸ್‌ನಲ್ಲಿ ಶಮಿಗೆ 7 ವಿಕೆಟ್..! ವಿಶ್ವಕಪ್ ಪಂದ್ಯಕ್ಕೂ ಒಂದು ದಿನ ಮೊದಲೇ ಕನಸು ಕಂಡ ನೆಟ್ಟಿಗ..!

ಕಳೆದ ವರ್ಷ ಹರ್ಯಾಣ ಚಾಂಪಿಯನ್‌, ತಮಿಳುನಾಡು ರನ್ನರ್‌-ಅಪ್‌ ಆಗಿದ್ದವು. ಸೆಮಿಫೈನಲ್‌ನಲ್ಲಿ ತಮಿಳುನಾಡು ವಿರುದ್ಧ ಸೋತಿದ್ದ ಕರ್ನಾಟಕ, ಬಳಿಕ ಮಹಾರಾಷ್ಟ್ರವನ್ನು ಸೋಲಿಸಿ 3ನೇ ಸ್ಥಾನಕ್ಕೆ ತೃಪ್ತಿಪಟ್ಟಿತ್ತು.

ವಿಶ್ವಕಪ್‌ ಫೈನಲ್‌ಗೆ ಮುನ್ನ ವಾಯುಪಡೆಯ ಏರ್‌ಶೋ

ಅಹಮದಾಬಾದ್‌: ಇಲ್ಲಿ ಭಾನುವಾರ ನಡೆಯಲಿರುವ ಏಕದಿನ ವಿಶ್ವಕಪ್‌ ಫೈನಲ್‌ಗೂ ಮುನ್ನ ಭಾರತೀಯ ವಾಯು ಸೇನೆಯಿಂದ ಏರ್‌ಶೋ ನಡೆಯಲಿದೆ. ಸೂರ್ಯ ಕಿರಣ್‌ ಏರೋಬ್ಯಾಟಿಕ್‌ ತಂಡ ಪಂದ್ಯ ಆರಂಭಗೊಳ್ಳುವ ಮುನ್ನ ಸುಮಾರು 10 ನಿಮಿಷಗಳ ಕಾಲ ಸಾಹಸಮಯ ಏರ್‌ಶೋ ನೀಡಲಿದೆ. ಇದರ ಭಾಗವಾಗಿ ಶುಕ್ರವಾರ ಹಾಗೂ ಶನಿವಾರ ಏರ್‌ಶೋ ರಿಹರ್ಸಲ್‌ ಮಾಡಲಿದೆ. ಇನ್ನು ಪಂದ್ಯಕ್ಕೂ ಮುನ್ನ ಹಲವು ಮನರಂಜನಾ ಕಾರ್ಯಕ್ರಮವನ್ನೂ ಬಿಸಿಸಿಐ ಆಯೋಜಿಸುತ್ತಿದೆ ಎಂದು ತಿಳಿದುಬಂದಿದೆ. ಬಾಲಿವುಡ್‌ ತಾರೆಯರು ಪ್ರದರ್ಶನ ನೀಡಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ.

Latest Videos
Follow Us:
Download App:
  • android
  • ios