ಸೌತ್ ಆಫ್ರಿಕಾ ವಿರುದ್ದ ತಿಣುಕಾಡಿ ಗೆದ್ದ ಆಸ್ಟ್ರೇಲಿಯಾ, ಫೈನಲ್‌ನಲ್ಲಿ ಇಂಡೋ-ಆಸಿಸ್ ಕದನ!

ಸೌತ್ ಆಫ್ರಿಕಾ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಗುರಿ ಸುಲಭವಾಗಿದ್ದರೂ ಆಸ್ಟ್ರೇಲಿಯಾ ತಿಣುಕಾಡಿ ಗೆಲುವಿನ ದಡ ಸೇರಿದೆ. ದಿಟ್ಟ ಹೋರಾಟ ನೀಡಿದ ಸೌತ್ ಆಫ್ರಿಕಾಗೆ ವಿಶ್ವಕಪ್ ಟೂರ್ನಿಯಲ್ಲಿ ಮತ್ತೆ ನಿರಾಸೆಯಾಗಿದೆ. ಈ ಗೆಲುವಿನಿಂದ ಇದೀಗ ಐಸಿಸಿ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ಪ್ರಶ್ತಿಗೆ ಹೋರಾಟ ನಡೆಸಲಿದೆ.  

ICC World Cup 2023 Australia beat South Africa by 3 wickets and enter final ckm

ಕೋಲ್ಕತಾ(ನ.16) ಐಸಿಸಿ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ಹೋರಾಟ ನಡೆಸಲಿದೆ. ಇಂದು ನಡೆದ 2ನೇ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ 3 ವಿಕೆಟ್‌ಗಳಿಂದ ಸೌತ್ ಆಫ್ರಿಕಾ ತಂಡ ಸೋಲಿಸಿದೆ. ಸುಲಭ ಗುರಿಯನ್ನು ಸುಲಭವಾಗಿ ಚೇಸ್ ಮಾಡುವ ಆಸ್ಟ್ರೇಲಿಯಾ ಲೆಕ್ಕಾಚಾರ ಫಲಿಸಲಿಲ್ಲ. ಸತತ ವಿಕೆಟ್ ಪತನದಿಂದ ಆಸಿಸ್ ಕಂಗಾಲಾಗಿತ್ತು. ಒಂದೊಂದು ರನ್ ಆಸಿಸ್ ತಂಡಕ್ಕೆ ಸವಲಾಗಿತ್ತು.  ಸೌತ್ ಆಫ್ರಿಕಾ ನೀಡಿದ 213 ರನ್ ಸುಲಭ ಟಾರ್ಗೆಟನ್ನು ಆಸ್ಟ್ರೇಲಿಯಾ 47.2  ಓವರ್‌ಗಳಲ್ಲಿ ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಇದರೊಂದಿಗೆ ನವೆಂಬರ್ 19 ರಂದು ಅಹಮ್ಮದಾಬಾದ್‌ನಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಪ್ರಶಸ್ತಿಗಾಗಿ ಭಾರತ ಹಾಗೂ ಆಸ್ಟೇಲಿಯಾ ಹೋರಾಟ ನಡೆಸಲಿದೆ.

ಅದ್ಬುತ ಬೌಲಿಂಗ್ ದಾಳಿ ಮೂಲಕ ಸೌತ್ ಆಫ್ರಿಕಾ ತಂಡವನ್ನು 212 ರನ್‌ಗೆ ಕಟ್ಟಿಹಾಕಲಾಗಿತ್ತು. ಹೀಗಾಗಿ ಆಸ್ಟ್ರೇಲಿಯಾ ಸುಲಭ ಗುರಿ ಪಡೆಯಿತು. ಇದಕ್ಕೆ ತಕ್ಕಂತೆ ಉತ್ತಮ ಆರಂಭವನ್ನೂ ಪಡೆಯಿತು. ಟ್ರಾವಿಸ್ ಹೆಡ್ ಹಾಗೂ ಡೇವಿಡ್ ವಾರ್ನರ್ ಜೊತೆಯಾಟದಿಂದ ಮೊದಲ ವಿಕೆಟ್‌ಗೆ 60 ರನ್ ಕಲೆಹಾಕಿತು. ಆದರೆ ಡೇವಿಡ್ ವಾರ್ನರ್ 29 ರನ್ ಸಿಡಿಸಿ ಔಟಾದರು. ಇದರ ಬೆನ್ನಲ್ಲೇ ಮಿಚೆಲ್ ಮಾರ್ಶ್ ಡಕೌಟ್ ಆದರು.

ಸತತ 2 ವಿಕೆಟ್ ಕಳೆದುಕೊಂಡು ಆಸ್ಟ್ರೇಲಿಯಾ ಒತ್ತಡಕ್ಕೆ ಸಿಲುಕಿತು. ಟ್ರಾವಿಸ್ ಹೆಡ್ ಹಾಗೂ ಸ್ಟೀವ್ ಸ್ಮಿತ್ ಜೊತೆಯಾಟದಿಂದ ಆಸೀಸ್ ಚೇತರಿಸಿಕೊಂಡಿತು. ಹೆಡ್ 62 ರನ್ ಸಿಡಿಸಿ ನಿರ್ಗಮಿಸಿದರು. ಮಾರ್ನಸ್ ಲಬುಶಾನೆ 18 ರನ್ ಸಿಡಿಸಿ ಔಟಾದರು. ಸುಲಭವಾಗಿ ಗುರಿ ಚೇಸ್ ಮಾಡುವ ಲೆಕ್ಕಾಚಾರದಲ್ಲಿ ಆಸ್ಟ್ರೇಲಿಯಾದಲ್ಲಿ ಆತಂಕ ಹೆಚ್ಚಾಯಿತು. ಏಕಾಂಗಿಯಾಗಿ ಪಂದ್ಯ ಗೆಲ್ಲಿಸಿಕೊಡಬಲ್ಲ ಗ್ಲೆನ್ ಮ್ಯಾಕ್ಸ್‌ವೆಲ್ ಕೇವಲ 1 ರನ್ ಸಿಡಿಸಿ ನಿರ್ಗಮಿಸಿದರು.

ಸ್ಟೀವ್ ಸ್ಮಿತಿ 30 ರನ್ ಸಿಡಿಸಿ ಔಟಾಗುತ್ತಿದ್ದಂತೆ ಆಸ್ಟ್ರೇಲಿಯಾ ತಂಡದ ಒತ್ತಡ ಹೆಚ್ಚಾಯಿತು. ಜೋಶ್ ಇಂಗ್ಲಿಸ್ 28 ರನ್ ಸಿಡಿಸಿ ಔಟಾದರು. ಆಸ್ಟ್ರೇಲಿಯಾ 7 ವಿಕೆಟ್ ಕಳೆದುಕೊಂಡಿತು. ಅಂತಿಮ 60 ಎಸೆತದಲ್ಲಿ ಆಸೀಸ್ ಗೆಲುವಿಗೆ 20 ರನ್ ಅವಶ್ಯಕತೆ ಇತ್ತು. ಮಿಚೆಲ್ ಸ್ಟಾರ್ಕ್ ಹಾಗೂ ಪ್ಯಾಟ್ ಕಮಿನ್ಸ್ ಹೋರಾಟ ಆಸೀಸ್ ತಂಡದ ಕೈಹಿಡಿಯಿತು. ಸೋಲಿನ ದವಡೆಯಿಂದ ಪಾರು ಮಾಡಿತು. 47.2 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು ಗುರಿ ತಲಿಪಿತು. ಸ್ಟಾರ್ಕ್ ಅಜೇಯ 16 ರನ್ ಹಾಗೂ ಕಮಿನ್ಸ್ ಅಜೇಯ 14 ರನ್ ಸಿಡಿಸಿದರು. 

ಸೌತ್ ಆಪ್ರಿಕಾ ಇನ್ನಿಂಗ್ಸ್
ಮಹತ್ವದ ಸೆಮಿಫೈನಲ್ ಪಂದ್ಯದಲ್ಲಿ ಸೌತ್ ಆಫ್ರಿಕಾದ ಟಾಪ್ ಆರ್ಡರ್ ಬ್ಯಾಟ್ಸ್‌ಮನ್ ಅಬ್ಬರಿಸಲಿಲ್ಲ. ಡೇವಿಡ್ ಮಿಲ್ಲರ್ ಹಾಗೂ ಹೆನ್ರಿಚ್ ಕ್ಲಾಸೆನ್ ಹೋರಾಟ ಹೊರತುಪಡಿಸಿದರೆ ಇತರರಿಂದ ರನ್ ಹರಿದು ಬರಲಿಲ್ಲ. ಸಂಪೂರ್ಣವಾಗಿ ಕುಸಿದ ತಂಡಕ್ಕೆ ಡೇವಿಡ್ ಮಿಲ್ಲರ್ ಶತಕ ಸಿಡಿಸಿ ನೆರವಾದರು. ಇತ್ತ ಹೆನ್ರಿಚ್ 47 ರನ್ ಕಾಣಿಕೆ ನೀಡಿದರು. ಮಿಲ್ಲರ್ 101 ರನ್ ಸಿಡಿಸಿದ್ದು. ಇದರ ಪರಿಣಾಮ ಸೌತ್ ಆಪ್ರಿಕಾ 49.4 ಓವರ್‌ಗಳಲ್ಲಿ 212 ರನ್ ಸಿಡಿಸಿ ಆಲೌಟ್ ಆಗಿತ್ತು.

Latest Videos
Follow Us:
Download App:
  • android
  • ios