ಎಂಬತ್ತು ಹಾಗೂ ತೊಂಬತ್ತರ ದಶಕಗಳಲ್ಲಿ ಆಸ್ಟ್ರೇಲಿಯಾದ ಪತ್ರಿಕೆಗಳಲ್ಲಿ ಹೆಡ್'ಲೈನ್ ಆಗುತ್ತಿದ್ದ ಸ್ಟೀವ್ ವಾ ಪರಿಚಯ ಕ್ರಿಕೆಟ್ ಪ್ರೇಮಿಗಳಿಗೆ ಗೊತ್ತೇ ಇದೆ. ಆದರೆ ಅವರ ಪುತ್ರ ಆಸ್ಟೀನ್ ವಾ ಈಗ ಸಾಕಷ್ಟು ಸುದ್ದಿ ಮಾಡುತ್ತಿದ್ದಾರೆ.

Add Asianetnews Kannada as a Preferred SourcegooglePreferred

ಅಂಡರ್ 17 ನ್ಯಾಶನಲ್ ಚಾಂಪಿಯನ್'ಷಿಪ್ ಫೈನಲ್ ಪಂದ್ಯದಲ್ಲಿ ನ್ಯೂ ಸೌಥ್ ವೇಲ್ಸ್ ಮೆಟ್ರೋ ಪರ ಆಡಿದ ಆಸ್ಟೀನ್ ವಾ ಭರ್ಜರಿ ಶತಕ ಸಿಡಿಸಿ ತಂಡಕ್ಕೆ ನೆರವಾದ ರೀತಿಯನ್ನು ಆಸೀಸ್ ಪತ್ರಿಕೆಗಳು ಕೊಂಡಾಡಿವೆ.

ಒಂದು ಹಂತದಲ್ಲಿ ನ್ಯೂ ಸೌಥ್ ವೇಲ್ಸ್ ಮೆಟ್ರೋ ತಂಡವು 56 ರನ್'ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆಗ ಕ್ರೀಸ್'ಗಿಳಿದ ಆಸ್ಟೀನ್ ವಾ 122(136 ಎಸೆತ)ಗಳಿಸಿದರು. ಅವರ ಈ ಸೊಗಸಾದ ಇನ್ನಿಂಗ್ಸ್'ನಲ್ಲಿ ತಲಾ ನಾಲ್ಕು ಬೌಂಡರಿ ಹಾಗೂ ನಾಲ್ಕು ಸಿಕ್ಸರ್'ಗಳು ಸೇರಿದ್ದವು.

ನ್ಯೂ ಸೌಥ್ ವೇಲ್ಸ್ ಮೆಟ್ರೋ ತಂಡವು 50 ಓವರ್'ಗಳಲ್ಲಿ 6 ವಿಕೆಟ್ ನಷ್ಟಕ್ಕೆ 274 ರನ್ ಕಲೆಹಾಕಿತು. ಬೃಹತ್ ರನ್'ಗಳನ್ನು ಬೆನ್ನುಹತ್ತಿದ ಕ್ವೀನ್ಸ್'ಲ್ಯಾಂಡ್ ತಂಡವು ಕೇವಲ 122 ರನ್'ಗಳಿಗೆ ಸರ್ವಪತನ ಕಂಡಿತು

ಆಸ್ಟೀನ್ ವಾ ಈ ಟೂರ್ನಿಯಲ್ಲಿ ಆಡಿದ ಎಂಟು ಇನ್ನಿಂಗ್ಸ್'ನಲ್ಲಿ 74.4ರ ಸರಾಸರಿಯಲ್ಲಿ 372 ರನ್ ಕಲೆಹಾಕಿದ್ದಾರೆ. ಅವರ ಬ್ಯಾಟಿಂಗ್ ಶೈಲಿಯನ್ನು ಗಮನಿಸಿದರೆ ಆಸ್ಟ್ರೇಲಿಯಾಕ್ಕೆ ಮತ್ತೊಬ್ಬ ಸ್ಟೀವ್ ವಾ ಸಿಕ್ಕಿದ್ದಾರೆ ಎಂಬ ಮಾತುಗಳನ್ನು ಕ್ರಿಕೆಟ್ ವಿಶ್ಲೇಷಕರು ಆಡುತ್ತಿದ್ದಾರೆ.