ಸಂಜೀವ್ ಭಟ್ ತಮ್ಮ ಟ್ವೀಟ್'ನಲ್ಲಿ, ಪ್ರಸ್ತುತ ಟೀಂ ಇಂಡಿಯಾದಲ್ಲಿ ಯಾರಾದರೂ ಮುಸ್ಲಿಂ ಆಟಗಾರರಿದ್ದಾರೆಯೇ? ಸ್ವಾತಂತ್ರ್ಯ ನಂತರ ಇಲ್ಲಿಯವರೆಗೆ ಭಾರತ ಕ್ರಿಕೆಟ್'ನಲ್ಲಿ ಎಷ್ಟೊಂದು ಬಾರಿ ಹೀಗಾಗಿದೆ ಎಂದು ವಿವಾದಾತ್ಮಕ ಟ್ವೀಟ್ ಮಾಡಿದ್ದರು.

ಮುಂಬೈ(ಅ.24): ಅವಶ್ಯಕತೆ ಬಿದ್ದಾಗ ಟ್ವಿಟರ್'ನಲ್ಲಿ ಪ್ರತಿಕ್ರಿಯಿಸುವ ಟೀಂ ಇಂಡಿಯಾ ಅನುಭವಿ ಸ್ಪಿನ್ನರ್ ಹರ್ಭಜನ್ ಸಿಂಗ್ ಪ್ರಖರವಾದ ಮಾತುಗಳ ಮೂಲಕ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.

ಹೌದು, ಗುಜರಾತ್'ನ ಹಿರಿಯ ಮಾಜಿ ಪೊಲೀಸ್ ಅಧಿಕಾರಿ ಸಂಜೀವ್ ಭಟ್ ಭಾರತ ಕ್ರಿಕೆಟ್ ತಂಡದ ಬಗ್ಗೆ ಕೋಮು ಭಾವನೆ ಕೆರಳಿಸವಂತಹ ಟ್ವೀಟ್ ಮಾಡಿದ್ದರು, ಇದಕ್ಕೆ ಭಜ್ಜಿ ಖಡಕ್ ಆಗಿಯೇ ಉತ್ತರಿಸುವ ಮೂಲಕ ಮಾಜಿ ಪೊಲೀಸಪ್ಪನ ಬಾಯಿ ಮುಚ್ಚಿಸಿದ್ದಾರೆ.

ಸಂಜೀವ್ ಭಟ್ ತಮ್ಮ ಟ್ವೀಟ್'ನಲ್ಲಿ, ಪ್ರಸ್ತುತ ಟೀಂ ಇಂಡಿಯಾದಲ್ಲಿ ಯಾರಾದರೂ ಮುಸ್ಲಿಂ ಆಟಗಾರರಿದ್ದಾರೆಯೇ? ಸ್ವಾತಂತ್ರ್ಯ ನಂತರ ಇಲ್ಲಿಯವರೆಗೆ ಭಾರತ ಕ್ರಿಕೆಟ್'ನಲ್ಲಿ ಎಷ್ಟೊಂದು ಬಾರಿ ಹೀಗಾಗಿದೆ ಎಂದು ವಿವಾದಾತ್ಮಕ ಟ್ವೀಟ್ ಮಾಡಿದ್ದರು.

Scroll to load tweet…

ಇದಕ್ಕೆ ಖಾರವಾಗಿಯೇ ಪ್ರತಿಕ್ರಿಯಿಸಿರುವ ಟರ್ಭನೇಟರ್, ಹಿಂದೂ, ಮುಸ್ಲಿಂ, ಸಿಖ್, ಕ್ರಿಶ್ಚಿಯನ್ ಎಲ್ಲರೂ ಒಟ್ಟಿಗೆ ಇದ್ದೇವೆ. ಭಾರತ ತಂಡದಲ್ಲಿ ಆಡುವ ಪ್ರತಿಯೊಬ್ಬರೂ ಹಿಂದೂಸ್ತಾನಿಗಳೆ ಆಗಿದ್ದಾರೆ. ಇವರ ಮಧ್ಯೆ ಜಾತಿ, ಧರ್ಮಗಳನ್ನು ಎಳೆದು ತರಬೇಡಿ ಎಂದು ಟ್ವೀಟ್ ಮಾಡಿದ್ದಾರೆ.

Scroll to load tweet…

ಈ ಮೊದಲು ಟೀಂ ಇಂಡಿಯಾದಲ್ಲಿ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್, ಇರ್ಫಾನ್ ಪಠಾಣ್, ಜಹೀರ್ ಖಾನ್, ಮೊಹಮ್ಮದ್ ಕೈಫ್ ಮುಂತಾದ ಆಟಗಾರರು ಟೀಂ ಇಂಡಿಯಾವನ್ನು ಪ್ರತಿನಿಧಿಸಿದ್ದಾರೆ. ಅಲ್ಲದೇ ಹಾಲಿಯಾಗಿ ಮೊಹಮ್ಮದ್ ಶಮಿ, ಇತ್ತೀಚೆಗಷ್ಟೇ ಟೀಂ ಇಂಡಿಯಾಗೆ ಮೊಹಮ್ಮದ್ ಸಿರಾಜ್ ಕೂಡಾ ಆಯ್ಕೆ ಆಗಿರುವುದನ್ನು ಗಮನಿಸಬಹುದಾಗಿದೆ.