ಪುರುಷರ ಹಾಕಿ ವಿಶ್ವಕಪ್ ಟೂರ್ನಿಗೆ ಕ್ಷಣಗಣನೆ ಆರಂಭವಾಗಿದೆ. ನವೆಂಬರ್ 28 ರಿಂದ ಆರಂಭವಾಗಲಿರುವ ಹಾಕಿ ಟೂರ್ನಿ ಅದ್ಧೂರಿಯಾಗಿ ಉದ್ಘಾಟನೆಗೊಳ್ಳಲಿದೆ. ನವೆಂಬರ್ 27 ರ ಉದ್ಘಟನಾ ಸಮಾರಂಭಕ್ಕೆ  ಬಾಲಿವುಡ್ ನಟ ಶಾರೂಖ್ ಖಾನ್ ಹಾಗೂ ಸಂಗೀತ ನಿರ್ದೇಶಕ ಎ.ಆರ್‌.ರೆಹಮಾನ್‌ ಸೆಂಟರ್ ಆಫ್ ಅಟ್ರಾಕ್ಷನ್ ಆಗಿದ್ದಾರೆ.

ಭುವನೇಶ್ವರ್‌(ನ.21): ಪುರುಷರ ಹಾಕಿ ವಿಶ್ವಕಪ್‌ಗೆ ದಿನಗಣನೆ ಆರಂಭವಾಗಿದೆ. ಖ್ಯಾತ ಸಂಗೀತ ನಿರ್ದೇಶಕ ಎ.ಆರ್‌.ರೆಹಮಾನ್‌ ಮತ್ತು ಬಾಲಿವುಡ್‌ ನಟ ಶಾರೂಖ್‌ ಖಾನ್‌ ಉದ್ಘಾಟನಾ ಕಾರ್ಯಕ್ರಮಕ್ಕೆ ಮೆರುಗು ತುಂಬಲಿದ್ದಾರೆ. ಉದ್ಘಾಟನಾ ಕಾರ್ಯಕ್ರಮ ನ.27ರಂದು ಭುವನೇಶ್ವರ ಮತ್ತು 28ರಂದು ಕಟಕ್‌ನಲ್ಲಿ ನಡೆಯಲಿದೆ. 

ಎರಡರಲ್ಲೂ ಈ ಇಬ್ಬರೂ ತಾರೆಯರು ಕಾರ್ಯಕ್ರಮದ ಆಕರ್ಷಣೆಯಾಗಲಿದ್ದಾರೆ. ಈಗಾಗಲೇ ಉದ್ಘಾಟನೆ ಕಾರ್ಯಕ್ರಮಕ್ಕೆ ಟಿಕೆಟ್‌ ಮಾರಾಟ ಆರಂಭವಾಗಿದ್ದು, ಮಂಗಳವಾರದಿಂದ ಆನ್‌ಲೈನ್‌ನಲ್ಲಿಯೂ ಮಾರಾಟ ಆರಂಭವಾಗಿದೆ. ನ.27ರ ಉದ್ಘಾಟನೆ ಕಾರ್ಯಕ್ರಮಕ್ಕೆ 10,500 ಹಾಗೂ ನ.28ರ ಕಾರ್ಯಕ್ರಮಕ್ಕೆ 30,000 ಟಿಕೆಟ್‌ಗಳು ಮಾರಾಟಕ್ಕಿವೆ ಎನ್ನಲಾಗಿದೆ.

ಪುರುಷರ ಹಾಕಿ ವಿಶ್ವಕಪ್ ಟೂರ್ನಿ ನವೆಂಬರ್ 28 ರಿಂದ ಡಿಸೆಂಬರ್ 16ರ ವರೆಗೆ ನಡೆಯಲಿದೆ. ಆತಿಥೇಯ ಭಾರತ ಸೇರಿದಂತೆ 16 ತಂಡಗಳು ಪಾಲ್ಗೊಳ್ಳುತ್ತಿದೆ. ಒಟ್ಟು 5 ಗುಂಪುಗಳಾಗಿ ವಿಂಗಡಿಸಲಾಗಿದೆ.