ರಾಷ್ಟ್ರೀಯ ಪುರುಷರ ಹಾಕಿ: ಕ್ವಾರ್ಟರ್‌ನಲ್ಲಿಂದು ಕರ್ನಾಟಕ-ರೈಲ್ವೇಸ್‌ ಪಂದ್ಯ

9ನೇ ರಾಷ್ಟ್ರೀಯ ಪುರುಷರ ಡಿವಿಜನ್ ಹಾಕಿ ಟೂರ್ನಿಯಲ್ಲಿ ಕರ್ನಾಟಕ ಅತ್ಯುತ್ತಮ ಪ್ರದರ್ಶನದ ಮೂಲಕ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. ಎಸ್.ವಿ.ಸುನಿಲ್ ನೇತೃತ್ವದ ಕರ್ನಾಟಕ ರಾಜ್ಯ ತಂಡ ಇದೀಗ ರೈಲ್ವೇಸ್ ವಿರುದ್ದ ಹೋರಾಟ ನಡೆಸಲಿದೆ.

Hockey National Championship 2019 Karnataka will face Railways in the quarterfinal

ಗ್ವಾಲಿಯರ್‌(ಫೆ.07): ಇಲ್ಲಿ ನಡೆಯುತ್ತಿರುವ 9ನೇ ರಾಷ್ಟ್ರೀಯ ಪುರುಷರ ‘ಎ’ ಡಿವಿಜನ್‌ ಹಾಕಿ ಚಾಂಪಿಯನ್‌ಶಿಪ್‌ನಲ್ಲಿ ಗುರುವಾರದಿಂದ ನಾಕೌಟ್‌ ಹಂತ ಆರಂಭಗೊಳ್ಳಲಿದೆ. ‘ಡಿ ಗುಂಪಿನಿಂದ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿರುವ ಕರ್ನಾಟಕ, ಸೆಮಿಫೈನಲ್‌ಗೇರಲು ಭಾರತೀಯ ರೈಲ್ವೇಸ್‌ ವಿರುದ್ಧ ಸೆಣಸಲಿದೆ. 

ಇದನ್ನೂ ಓದಿ: 10 ಮಂದಿ ಡಕೌಟ್‌ - ತಂಡ 10ಕ್ಕೆ ಆಲೌಟ್‌!

 

 

ಗುಂಪು ಹಂತದಲ್ಲಿ ಕರ್ನಾಟಕ, ಆಡಿದ 4 ಪಂದ್ಯಗಳಲ್ಲಿ 3ರಲ್ಲಿ ಜಯ ಸಾಧಿಸಿತು. ಮೊದಲ ಪಂದ್ಯದಲ್ಲಿ ಏರ್‌ ಇಂಡಿಯಾ ವಿರುದ್ಧ 1-6 ಗೋಲುಗಳಲ್ಲಿ ಸೋಲುಂಡು ಆಘಾತಕ್ಕೊಳಗಾಗಿದ್ದ ತಂಡ, ಬಳಿಕ ಸತತ 3 ಪಂದ್ಯಗಳಲ್ಲಿ ಗೆದ್ದು ನಾಕೌಟ್‌ ಪ್ರವೇಶಿಸಿತು. 4 ಪಂದ್ಯಗಳಿಂದ ವಿ. ಆರ್‌. ರಘುನಾಥ್‌ 5 ಗೋಲು ಗಳಿಸಿದ್ದು ಉತ್ತಮ ಲಯದಲ್ಲಿದ್ದಾರೆ. ಟೂರ್ನಿಯಲ್ಲಿ ಎಸ್‌.ವಿ.ಸುನಿಲ್‌ ರಾಜ್ಯ ತಂಡವನ್ನು ಮುನ್ನಡೆಸುತ್ತಿದ್ದಾರೆ.

 

 

Latest Videos
Follow Us:
Download App:
  • android
  • ios