ಕ್ರಿಕೆಟ್‌ನಲ್ಲಿ ಕೆಲ ಅಪಖ್ಯಾತಿಗಳು ಎಲ್ಲರನ್ನೂ ಅಚ್ಚರಿಗೊಳಿಸುತ್ತೆ. ಇದೀಗ ಆಸ್ಟ್ರೇಲಿಯಾದ ದೇಸಿ ಕ್ರಿಕೆಟ್‌ನಲ್ಲಿ ಕೇವಲ 10 ರನ್‌ಗೆ ತಂಡ ಆಲೌಟ್ ಆಗಿದೆ. ವಿಶೇಷ ಅಂದರೆ 10 ಆಟಗಾರ್ತಿಯರು ಡಕೌಟ್ ಆಗಿದ್ದಾರೆ. ಇಲ್ಲಿದೆ ಹೈಲೈಟ್ಸ್.
ಸಿಡ್ನಿ(ಫೆ.07): ಆಸ್ಪ್ರೇಲಿಯಾದ ದೇಶೀಯ ಮಹಿಳಾ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಬುಧವಾರ ನಡೆದ ನ್ಯೂ ಸೌತ್ ವೇಲ್ಸ್ ವಿರುದ್ಧದ ಪಂದ್ಯದಲ್ಲಿ ದಕ್ಷಿಣ ಆಸ್ಪ್ರೇಲಿಯಾ ತಂಡ ಕೇವಲ 10 ರನ್‌ಗಳಿಗೆ ಆಲೌಟ್ ಆಗಿದೆ. ದ.ಆಸ್ಪ್ರೇಲಿಯಾದ 10 ಆಟಗಾರ್ತಿಯರು ಡಕೌಟ್ ಆಗಿದ್ದು ಕ್ರಿಕೆಟ್ ಜಗತ್ತಿಗೆ ಅಚ್ಚರಿ ನೀಡಿದೆ.
ಇದನ್ನೂ ಓದಿ: ಸುಲಭ ಗೆಲುವು ಕೈಚೆಲ್ಲಿದ ಭಾರತ ಮಹಿಳಾ ತಂಡ!
ತಂಡ ಗಳಿಸಿದ 10 ರನ್‌ಗಳ ಪೈಕಿ ಆರಂಭಿಕ ಆಟಗಾರ್ತಿ ಫೆಬಿ ಮಾನ್ಸೆಲ್ 4 ರನ್ ಗಳಿಸಿದರು. ಅದೂ ಒಂದು ಬೌಂಡರಿ ಮೂಲಕ. ಇನ್ನುಳಿದ 6 ರನ್ ಇತರೆ ರೂಪದಲ್ಲಿ ದೊರೆಯಿತು. 10.2 ಓವರ್‌ಗಳಲ್ಲಿ 10 ರನ್‌ಗೆ ಸರ್ವಪತನ ಕಂಡಿತು. ನ್ಯೂ ಸೌತ್ ವೇಲ್ಸ್ ವೇಗಿ ರೋಕ್ಸಾನ್ನೆ ವಾನ್ 2 ಓವರ್‌ಗಳಲ್ಲಿ 1 ರನ್‌ಗೆ 5 ವಿಕೆಟ್ ಕಿತ್ತರು.
ಇದನ್ನೂ ಓದಿ: ಮುಂಬೈ ವಾಂಖೆಡೆಯಲ್ಲಿ ಐಪಿಎಲ್ ಪಂದ್ಯ ಡೌಟ್-ಬಿಸಿಸಿಐಗೆ ತಲೆನೋವು!
ದಕ್ಷಿಣ ಆಸ್ಟ್ರೇಲಿಯಾದ 6 ಆಟಗಾರ್ತಿಯರು ಕ್ಲೀನ್ ಬೋಲ್ಡ್ ಆಗಿದ್ದರೆ, ಇನ್ನು ಇಬ್ಬರು LBWಗೆ ಬಲಿಯಾದರು. 11 ರನ್ ಟಾರ್ಗೆಟ್ ಚೇಸ್ ಮಾಡಲು ಕಣಕ್ಕಿಳಿದ ನ್ಯೂ ಸೌಥ್ ವೇಲ್ಸ್ ತಂಡ ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಆತಂಕ ಎದುರಿಸಿತು. 2 ವಿಕೆಟ್ ಕಳೆದುಕೊಂಡ ನ್ಯೂ ಸೌಥ್ ವೇಲ್ಸ್ 15 ಎಸೆತಗಳಲ್ಲಿ 11 ರನ್ ಗುರಿ ತಲುಪಿತು.
