ಮುಂಬೈ(ಸೆ.21): ಟೀಮ್ ಇಂಡಿಯಾ ಕ್ರಿಕೆಟ್ ಇತಿಹಾಸದ 500ನೇ ಟೆಸ್ಟ್ ಪಂದ್ಯಕ್ಕೆ ಬಿಸಿಸಿಐ ಭರ್ಜರಿ ಸಿದ್ಧತೆ ನಡೆಸಿದ್ದು, 500ನೇ ಟೆಸ್ಟ್ ಅನ್ನು ಸ್ಮರಣಿಯವಾಗಿಸಲು ಅನೇ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಐತಿಹಾಸಿಕ ಟೆಸ್ಟ್ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ಆಟಗಾರರ ಫೋಟೋ ಶೂಟ್ ನಡೆದಿದ್ದು, ನಿನ್ನೆ ಅಭ್ಯಾಸಕ್ಕೂ ತೆರಳುವ ಮುನ್ನ ಆಟಗಾರರು ವಿವಿಧ ಭಂಗಿಗಳಲ್ಲಿ ಕ್ಯಾಮೆರಕ್ಕೆ ಫೋಸ್ ನೀಡಿದ್ದಾರೆ.
ಇದನ್ನು ಬಿಸಿಸಿಐ ತನ್ನ ಟ್ವೀಟರ್ನಲ್ಲಿ ಪ್ರಕಟಿಸಿದ್ದು, ನಾಯಕ ಕೊಹ್ಲಿ ಸೇರಿದಂತೆ ತಂಡದ ಆಟಗಾರರು 500 ಟೆಸ್ಟ್ ಪಂದ್ಯದ ಜರ್ಸಿ ತೊಟ್ಟು ಪೋಟೋ ಶೂಟ್ ನಲ್ಲಿ ಕಾಣಿಸಿಕೊಂಡಿದ್ದಾರೆ.
