400ಮೀ ಓಟದಲ್ಲಿ ಚಿನ್ನದ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದ ಭಾರತದ ಹಿಮಾ ದಾಸ್, ರಿಲೆಯಲ್ಲೂ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಹಿಮಾ ದಾಸ್ ನೇತೃತ್ವದ ರಿಲೆ ತಂಡ, ನೆದರ್ಲೆಂಡ್‌ನಲ್ಲಿ ನಡೆಯುತ್ತಿರು ಅಂಡರ್ 20 ಅಥ್ಲೆಟಿಕ್ಸ್‌ನಲ್ಲಿ ಬರೆದ ದಾಖಲೆ ಏನು? ಇಲ್ಲಿದೆ ವಿವರ.

ಟ್ಯಾಂಪಿಯರ್(ಜು.15) :  ವಿಶ್ವ ಅಂಡರ್ 20 ಅಥ್ಲೆಟಿಕ್ಸ್ ಕೂಟದ 400 ಮೀಟರ್ ಓಟದಲ್ಲಿ ಚಿನ್ನ ಗೆದ್ದ ಹಿಮಾದಾಸ್ ಇದೀಗ ರಿಲೆಯಲ್ಲೂ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ನೆದರ್ಲೆಂಡ್‌ನ ಟ್ಯಾಂಪಿಯರ್‌ನಲ್ಲಿ ನಡೆಯುತ್ತಿರುವ ನಡೆಯುತ್ತಿರುವ ಅಂಡರ್-20 ವಿಶ್ವ ಅಥ್ಲೆಟಿಕ್ಸ್ ಕೂಟದಲ್ಲಿ ಹಿಮಾ ದಾಸ್ ನೇತೃತ್ವದ ಭಾರತ ಮಹಿಳಾ ತಂಡ 4*400 ಮೀ. ರಿಲೇಯಲ್ಲಿ ನೂತನ ರಾಷ್ಟ್ರೀಯ ದಾಖಲೆ ನಿರ್ಮಿಸಿದೆ. 

ಶುಭಾ, ಜಿಸ್ನಾ ಮ್ಯಾಥ್ಯೂ, ರಿತಿಕಾರನ್ನೊಳಗೊಂಡ ತಂಡ, 2ನೇ ಹೀಟ್‌ನಲ್ಲಿ 3:39:10 ನಿಮಿಷಗಳಲ್ಲಿ ಓಟ ಮುಕ್ತಾಯಗೊಳಿಸಿ 4ನೇ ಸ್ಥಾನ ಗಳಿಸಿತು. ಫೈನಲ್‌ಗೆ ಅರ್ಹತೆ ಪಡೆಯಲು ತಂಡ ವಿಫಲವಾದರೂ, 2002ರಲ್ಲಿ ಬ್ಯಾಂಕಾಕ್‌ನಲ್ಲಿ ದಾಖಲಾಗಿದ್ದ 3:40:50 ನಿಮಿಷಗಳ ರಾಷ್ಟ್ರೀಯ ದಾಖಲೆಯನ್ನು ಮುರಿಯಿತು.

ಮಹಿಳಾ 400 ಮೀ. ಓಟದಲ್ಲಿ ಚೊಚ್ಚಲ ಚಿನ್ನ ಗೆದ್ದಿರುವ ಹಿಮಾ ದಾಸ್, ಮುಂಬರುವ ಏಷ್ಯನ್ ಗೇಮ್ಸ್‌ನ 200 ಮೀ. ಓಟಕ್ಕೂ ಆಯ್ಕೆಯಾಗಿದ್ದಾರೆ. ಭಾರತದ ಭರವಸೆ ಕ್ರೀಡಾಪಟು ಆಗಿರುವ ಹಿಮಾ ದಾಸ್ ಮಂಬರುವ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲೋ ವಿಶ್ವಾಸ ವ್ಯಕ್ತಪಡಿಸಿದ್ದಾರೆ.