ಇಲ್ಲಿಯವರೆಗೂ ಕಾಶ್ಮೀರ ಸಮಸ್ಯೆ ಇತ್ಯರ್ಥವಾಗಿಲ್ಲದೇ ಇರುವುದು ಅತೀವ ಬೇಸರ ತರಿಸಿದೆ ಎಂದು ಅಫ್ರಿದಿ ಟ್ವಿಟರ್‌ನಲ್ಲಿ ಹೇಳಿದ್ದಾರೆ.
ಕರಾಚಿ(ಫೆ.06): ಕಳೆದ ಕೆಲ ವರ್ಷಗಳಿಂದ ಬಗೆಹರಿಯದೇ ಉಳಿದಿರುವ ಕಾಶ್ಮೀರ ಸಮಸ್ಯೆಯಿಂದಾಗಿ ಅಪಾರ ಹಾನಿ ಉಂಟಾಗಿದೆ ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಶಾಹೀದ್ ಅಫ್ರಿದಿ ಸಾಮಾಜಿಕ ಜಾಲತಾಣವಾದ ಟ್ವಿಟರ್ನಲ್ಲಿ ಹತಾಶೆ ವ್ಯಕ್ತಪಡಿಸಿದ್ದಾರೆ.
ಕಾಶ್ಮೀರ ಪ್ರದೇಶವನ್ನು ಸ್ವತಂತ್ರವಾಗಿ ಪಡೆಯುವುದಕ್ಕಾಗಿ ಉಭಯ ರಾಷ್ಟ್ರಗಳಾದ ಭಾರತ ಮತ್ತು ಪಾಕಿಸ್ತಾನ ಆಗಿಂದಾಗ್ಗೆ ಯುದ್ಧ ನಡೆಸುತ್ತಿವೆ. 1965, 1971 ಹಾಗೂ 1999ರಲ್ಲಿ ಎರಡು ದೇಶಗಳು ಯುದ್ಧ ನಡೆಸಿವೆ.\
ಈ ಭಾಗದಲ್ಲಿ ನಡೆಯುವ ಉಗ್ರ ಚಟುವಟಿಕೆಯಿಂದಾಗಿ ಸಾಕಷ್ಟು ನಷ್ಟ ಉಂಟಾಗಿದೆ. ಹಾಗೆ ಇಲ್ಲಿಯವರೆಗೂ ಕಾಶ್ಮೀರ ಸಮಸ್ಯೆ ಇತ್ಯರ್ಥವಾಗಿಲ್ಲದೇ ಇರುವುದು ಅತೀವ ಬೇಸರ ತರಿಸಿದೆ ಎಂದು ಅಫ್ರಿದಿ ಟ್ವಿಟರ್ನಲ್ಲಿ ಹೇಳಿದ್ದಾರೆ.
