ನ್ಯೂಜಿಲೆಂಡ್ ಸರಣಿಗೆ ಪಾಂಡ್ಯ-ಭಾರತ ಎ ತಂಡಕ್ಕೆ ರಾಹುಲ್ ಆಯ್ಕೆ!
ಅಮಾನತು ಶಿಕ್ಷೆ ಹಿಂಪಡೆದ ಬೆನ್ನಲ್ಲೇ, ಹಾರ್ದಿಕ್ ಪಾಂಡ್ಯ ಹಾಗೂ ಕೆ.ಎಲ್.ರಾಹುಲ್ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ. ಆದರೆ ಹಾರ್ದಿಕ್ ನ್ಯೂಜಿಲೆಂಡ್‌ಗೆ ತೆರಳಿದರೆ, ರಾಹುಲ್ ತಿರುವನಂತಪುರಂಲ್ಲಿ ಭಾರತ ಎ ತಂಡವನ್ನ ಕೂಡಿಕೊಳ್ಳಲಿದ್ದಾರೆ.
ಮುಂಬೈ(ಜ.25): ಖಾಸಗಿ ಟೀವಿ ಶೋನಲ್ಲಿ ಮಹಿಳೆಯರ ಕುರಿತು ಅಸಭ್ಯ ಹೇಳಿಕೆಯಿಂದ ಟೀಂ ಇಂಡಿಯಾದಿಂದ ಅಮಾನತಾಗಿದ್ದ ಹಾರ್ದಿಕ್ ಪಾಂಡ್ಯ ಹಾಗೂ ಕೆ.ಎಎಲ್.ರಾಹುಲ ಮೇಲಿನ ಶಿಕ್ಷೆಯನ್ನ ಹಿಂಪಡೆಯಲಾಗಿದೆ. ಬಿಸಿಸಿಐ ಆಡಳಿತ ಸಮಿತಿ(COA)ನಿರ್ಧಾರ ಬೆನ್ನಲ್ಲೇ ಟೀಂ ಇಂಡಿಯಾ ಆಯ್ಕೆ ಸಮಿತಿ ಇಬ್ಬರ ಆಯ್ಕೆ ನಡೆಸಿದೆ.
ಇದನ್ನೂ ಓದಿ: ಬೇಷರತ್ ಕ್ಷಮೆಯಾಚಿಸಿದ ಹಾರ್ದಿಕ್ ಪಾಂಡ್ಯ, ರಾಹುಲ್
ನ್ಯೂಜಿಲೆಂಡ್ ವಿರುದ್ಧದ ಇನ್ನುಳಿದ ಏಕದಿನ ಹಾಗೂ ಟಿ20 ಸರಣಿಗೆ ಆಲ್ರೌಂಡರ್ ಪಾಂಡ್ಯರನ್ನ ಆಯ್ಕೆ ಮಾಡಲಾಗಿದ್ದರೆ, ಇತ್ತರ ಕಳಪೆ ಫಾರ್ಮ್‌ನಲ್ಲಿರುವ ರಾಹುಲ್, ಭಾರತ ಎ ತಂಡಕ್ಕೆ ಆಯ್ಕೆಮಾಡಲಾಗಿದೆ. ಶೀಘ್ರದಲ್ಲೇ ಪಾಂಡ್ಯ ನ್ಯೂಜಿಲೆಂಡ್‌ಗೆ ತೆರಳಲಿದ್ದಾರೆ. ತಿರುವನಂತಪುರಂದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ಲಯನ್ಸ್ ವಿರುದ್ದದ ಇನ್ನುಳಿದ 3 ಏಕದಿನ ಪಂದ್ಯದಲ್ಲಿ ರಾಹುಲ್ ಭಾರತ ಎ ತಂಡವನ್ನ ಪ್ರತಿನಿಧಿಸಲಿದ್ದಾರೆ.
ಇದನ್ನೂ ಓದಿ: ಅಮಾನತುಗೊಂಡಿದ್ದ ಪಾಂಡ್ಯ-ರಾಹುಲ್ ನಿರಾಳ!
ಕಾಫಿ ವಿಥ್ ಕರಣ್ ಖಾಸಗಿ ಟೀವಿ ಕಾರ್ಯಕ್ರಮದಲ್ಲಿ ಹಾರ್ದಿಕ್ ಪಾಂಡ್ಯ ಹಾಗೂ ಕೆ.ಎಲ್.ರಾಹುಲ್ ಮಹಿಳೆಯರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದರು. ಹೀಗಾಗಿ ಇಬ್ಬರಿಗೂ ಅಮಾನತು ಶಿಕ್ಷೆ ನೀಡಲಾಗಿತ್ತು. ಇದೀಗ ಬಿಸಿಸಿಐ ಆಡಳಿತ ಸಮಿತಿ ಇವರ ಮೇಲಿನ ಅಮಾತು ಶಿಕ್ಷೆಯನ್ನು ತನಿಖೆ ಪೂರ್ಣಗೊಳ್ಳುವವರಿಗೆ ಹಿಂಪಡೆದಿದೆ.