38 ಚಿನ್ನದೊಂದಿಗೆ ಒಟ್ಟು 10 ಪದಕ ಗೆದ್ದ ಹರ್ಯಾಣ ಕ್ರೀಡಾಕೂಟದ ಚಾಂಪಿಯನ್ ಆಗಿ ಹೊರಹೊಮ್ಮಿದರೆ, ಮಹಾರಾಷ್ಟ್ರ ಹಾಗೂ ದೆಹಲಿ ತಂಡಗಳು ಕ್ರಮವಾಗಿ 2 ಹಾಗೂ 3ನೇ ಸ್ಥಾನ ಪಡೆದುಕೊಂಡವು.

ನವದೆಹಲಿ(ಫೆ.08): ಖೇಲೋ ಇಂಡಿಯಾ ಅಂಡರ್-17 ಶಾಲಾ ಕ್ರೀಡಾಕೂಟ ಮುಕ್ತಾಯಗೊಂಡಿದ್ದು, ಕರ್ನಾಟಕ 16 ಚಿನ್ನ, 11 ಬೆಳ್ಳಿ ಹಾಗೂ 17 ಕಂಚಿನೊಂದಿಗೆ ಒಟ್ಟು 44ಪದಕಗಳನ್ನು ಗೆದ್ದುಕೊಂಡಿದೆ. ಈ ಮೂಲಕ ಕ್ರೀಡಾಕೂಟದಲ್ಲಿ ಪದಕ ಪಟ್ಟಿಯಲ್ಲಿ 4ನೇ ಸ್ಥಾನದೊಂದಿಗೆ ಅಭಿಯಾನ ಮುಗಿಸಿದೆ.

ಇನ್ನು 38 ಚಿನ್ನದೊಂದಿಗೆ ಒಟ್ಟು 10 ಪದಕ ಗೆದ್ದ ಹರ್ಯಾಣ ಕ್ರೀಡಾಕೂಟದ ಚಾಂಪಿಯನ್ ಆಗಿ ಹೊರಹೊಮ್ಮಿದರೆ, ಮಹಾರಾಷ್ಟ್ರ ಹಾಗೂ ದೆಹಲಿ ತಂಡಗಳು ಕ್ರಮವಾಗಿ 2 ಹಾಗೂ 3ನೇ ಸ್ಥಾನ ಪಡೆದುಕೊಂಡವು.

ಕ್ರೀಡಾಕೂಟದ ಕೊನೆಯ ದಿನವಾದ ಗುರುವಾರ ಬ್ಯಾಡ್ಮಿಂಟನ್‌ನಲ್ಲಿ ಕರ್ನಾಟಕಕ್ಕೆ ಒಂದು ಚಿನ್ನ ಸೇರಿ 3 ಪದಕ ದೊರೆಯಿತು.

Scroll to load tweet…
Scroll to load tweet…

ಪದಕ ಪಟ್ಟಿ

ರಾಜ್ಯ ಚಿನ್ನ ಬೆಳ್ಳಿ ಕಂಚುಒಟ್ಟು

ಹರ್ಯಾಣ 38 26 38 102

ಮಹಾರಾಷ್ಟ್ರ 36 32 43 111

ದೆಹಲಿ 25 29 40 90

ಕರ್ನಾಟಕ 16 11 17 44

ಮಣಿಪುರ  13 13 08 34