ಕಳೆದ ವರ್ಷ ಪುಣೆ ತಂಡವನ್ನು ಮಹೇಂದ್ರ ಸಿಂಗ್ ಧೋನಿ ಮುನ್ನೆಡೆಸಿದ್ದರು, ಆದರೆ ಈ ಬಾರಿ ರೈಸಿಂಗ್ ಪುಣೆ ಸೂಪರ್'ಜೈಂಟ್ಸ್ ತಂಡವನ್ನು ಸ್ಟೀವ್ ಸ್ಮಿತ್ ಮುನ್ನೆಡೆಸುತ್ತಿದ್ದಾರೆ.

ಬೆಂಗಳೂರು(ಏ.07): ಮುಂಬೈ ಇಂಡಿಯನ್ಸ್ ವಿರುದ್ಧ ರೋಚಕ ಜಯಭೇರಿ ಸಾಧಿಸಿದ ರೈಸಿಂಗ್ ಪುಣೆ ಸೂಪರ್'ಜೈಂಟ್ಸ್ 10ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.

Add Asianetnews Kannada as a Preferred SourcegooglePreferred

ಕೊನೆಯ ಓವರ್'ನಲ್ಲಿ ಗೆಲ್ಲಲು ಅವಶ್ಯಕವಿದ್ದ 13ರನ್'ಗಳನ್ನು ಇನ್ನೊಂದು ಎಸೆತ ಬಾಕಿಯಿರುವಂತೆಯೇ ಗೆಲುವಿನ ನಗೆ ಬೀರಿದ್ದು ಎಲ್ಲರಿಗೂ ಗೊತ್ತೆ ಇದೆ. ಈಗ ಹೊಸ ವಿಷ್ಯಾ ಏನಪ್ಪಾ ಅಂದ್ರೆ ರೈಸಿಂಗ್ ಪುಣೆ ಸೂಪರ್'ಜೈಂಟ್ಸ್ ತಂಡದ ಸಹಮಾಲಿಕ ಹರ್ಷಾ ಗೊಯೆಂಕಾ ಕ್ರಿಕೆಟ್ ಜಗತ್ತಿನ ಶ್ರೇಷ್ಟ ಫಿನಿಷರ್'ಗಳಲ್ಲಿ ಒಬ್ಬರು ಎಂದೇ ಗುರುತಿಸಿಕೊಂಡಿರುವ ಮಹೇಂದ್ರ ಸಿಂಗ್ ಧೋನಿಯನ್ನು ಅವಮಾನ ಮಾಡಿ ಟ್ವೀಟ್ ಮಾಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್'ಆಗಿ ಹರಿದಾಡುತ್ತಿದೆ.

ಟೀಂ ಇಂಡಿಯಾ ಪರ ಐಸಿಸಿಯ ಮೂರೂ ಟ್ರೋಫಿ ಗೆದ್ದುಕೊಟ್ಟ ಏಕೈಕ ನಾಯಕ ಎಂಬ ಖ್ಯಾತಿಗೆ ಭಾಜನರಾಗಿರುವ ಮಹೇಂದ್ರ ಸಿಂಗ್ ಧೋನಿ ಬಗ್ಗೆ ಹರ್ಷಾ ಗೊಯೆಂಕಾ ಮಾಡಿರುವ ವ್ಯಂಗ್ಯ ಹೇಗಿದೆ ಅಂತ ನೀವೇ ನೋಡಿ...

ಕಳೆದ ವರ್ಷ ಪುಣೆ ತಂಡವನ್ನು ಮಹೇಂದ್ರ ಸಿಂಗ್ ಧೋನಿ ಮುನ್ನೆಡೆಸಿದ್ದರು, ಆದರೆ ಈ ಬಾರಿ ರೈಸಿಂಗ್ ಪುಣೆ ಸೂಪರ್'ಜೈಂಟ್ಸ್ ತಂಡವನ್ನು ಸ್ಟೀವ್ ಸ್ಮಿತ್ ಮುನ್ನೆಡೆಸುತ್ತಿದ್ದಾರೆ.

ಗೊಯೆಂಕಾ ಟ್ವೀಟ್'ಗೆ ವ್ಯಾಪಕ ಟೀಕೆ ವ್ಯಕ್ತವಾದ ಬೆನ್ನಲ್ಲೇ ಆ ಟ್ವೀಟ್'ನ್ನು ಅವರು ಅಳಿಸಿಹಾಕಿದ್ದಾರೆ.