ಭಾರತದ ವನಿತೆಯರ ತಂಡ ಗೆಲ್ಲಲು 6 ಎಸೆತಗಳಲ್ಲಿ 9 ರನ್'ಗಳ ಅವಶ್ಯಕತೆಯಿತ್ತು.

ನವದೆಹಲಿ(ಫೆ.22): ದಕ್ಷಿಣ ಆಫ್ರಿಕಾ ವಿರುದ್ಧದ ಮಹಿಳಾ ವಿಶ್ವಕಪ್ ಅರ್ಹತಾ ಸುತ್ತಿನ ಫೈನಲ್ ಪಂದ್ಯದಲ್ಲಿ ಭಾರತದ ವನಿತೆಯರು ಅಜೇಯವಾಗಿ ಪ್ರಶಸ್ತಿ ಜಯಿಸುವುದರೊಂದಿಗೆ ವಿಶ್ವಕಪ್'ಗೂ ಅರ್ಹತೆಗಿಟ್ಟಿಸಿಕೊಂಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅದರಲ್ಲೂ ಕೊನೆಯ ಓವರ್ ಅಂತೂ ಸಾಕಷ್ಟು ಕುತೂಹಲಕ್ಕೆ ಎಡೆಮಾಡಿಕೊಟ್ಟಿತ್ತು. ಭಾರತದ ವನಿತೆಯರ ತಂಡ ಗೆಲ್ಲಲು 6 ಎಸೆತಗಳಲ್ಲಿ 9 ರನ್'ಗಳ ಅವಶ್ಯಕತೆಯಿತ್ತು. ಆಫ್ರಿಕಾ ಪರ ಮಾರ್ಷಾ ಲೆಟ್ಸಾಲೋ ಶಿಸ್ತುಬದ್ಧ ದಾಳಿ ನಡೆಸುತ್ತ ಹರಿಣಗಳ ಪಡೆಗೆ ಗೆಲುವಿನ ಆಸೆ ಮೂಡಿಸಿದ್ದರು.

ಆದರೆ ಭಾರತದ ಪರ ಬ್ಯಾಟಿಂಗ್ ಮಾಡುತ್ತಿದ್ದುದು ಹರ್ಮನ್'ಪ್ರೀತ್ ಸಿಂಗ್ ಕೌರ್... ಮುಂದೇನಾಯ್ತು... ನೀವೇ ನೋಡಿ ಮತ್ತೊಮ್ಮೆ ಎಂಜಾಯ್ ಮಾಡಿ