ಸರ್ರೆ ತಂಡವನ್ನು 5 ವಿಕೆಟ್’ಗಳಿಂದ ಮಣಿಸಿದ ಲ್ಯಾನ್’ಶೈರ್ ಗೆಲುವಿನ ಕೇಕೆ ಹಾಕುವಲ್ಲಿ ಕೌರ್ ಇನ್ನಿಂಗ್ಸ್ ಪ್ರಮುಖ ಪಾತ್ರವಹಿಸಿತು. ಕೇವಲ 21 ಎಸೆತಗಳಲ್ಲಿ ಮೂರು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 34 ರನ್ ಬಾರಿಸಿ ಅಜೇಯರಾಗುಳಿದರು.
ಲಂಡನ್[ಆ.01]: ಭಾರತ ಮಹಿಳಾ ಟಿ20 ತಂಡದ ನಾಯಕಿ ಹರ್ಮನ್’ಪ್ರೀತ್ ಕೌರ್ ಮತ್ತೊಮ್ಮೆ ಧೋನಿಯಂತೆ ಅದ್ಭುತ ಮ್ಯಾಚ್ ಫಿನಿಶರ್ ಎನ್ನುವುದನ್ನು ಸಾಬೀತು ಮಾಡಿದ್ದಾರೆ. ಕಿಯಾ ಸೂಪರ್ ಲೀಗ್’ನಲ್ಲಿ ಸರ್ರೆ ಸ್ಟಾರ್ಸ್ ವಿರುದ್ಧ ಕೌರ್ ಕೊನೆಯ ಓವರ್’ನಲ್ಲಿ ಭರ್ಜರಿ ಸಿಕ್ಸರ್ ಸಿಡಿಸುವ ಮೂಲಕ ಲ್ಯಾನ್’ಶೈರ್ ತಂಡಕ್ಕೆ ರೋಚಕ ಗೆಲುವು ತಂದಿತ್ತರು.
ಇದನ್ನು ಓದಿ: ಹರ್ಮನ್’ಪ್ರೀತ್ ಬೆಂಬಲಕ್ಕೆ ಪಂಜಾಬ್ ಕ್ರೀಡಾ ಸಚಿವ
ಸರ್ರೆ ತಂಡವನ್ನು 5 ವಿಕೆಟ್’ಗಳಿಂದ ಮಣಿಸಿದ ಲ್ಯಾನ್’ಶೈರ್ ಗೆಲುವಿನ ಕೇಕೆ ಹಾಕುವಲ್ಲಿ ಕೌರ್ ಇನ್ನಿಂಗ್ಸ್ ಪ್ರಮುಖ ಪಾತ್ರವಹಿಸಿತು. ಕೇವಲ 21 ಎಸೆತಗಳಲ್ಲಿ ಮೂರು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 34 ರನ್ ಬಾರಿಸಿ ಅಜೇಯರಾಗುಳಿದರು.
ಹೀಗಿತ್ತು ಆ ಕ್ಷಣ:
ಇದನ್ನು ಓದಿ:ನಕಲಿ ಡಿಗ್ರಿ ಪದವಿ: ಹರ್ಮನ್’ಪ್ರೀತ್ ಕೌರ್’ರಿಂದ ಡಿಎಸ್ಪಿ ಹುದ್ದೆ ಹಿಂಪಡೆದ ಪಂಜಾಬ್ ಸರ್ಕಾರ..!
ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ಸರ್ರೆ ತಂಡ ನಿಗದಿತ 20 ಓವರ್’ಗಳಲ್ಲಿ 5 ವಿಕೆಟ್ ಕಳೆದುಕೊಂಡು 148 ರನ್ ಬಾರಿಸಿತ್ತು. ಇನ್ನು ಲ್ಯಾನ್’ಶೈರ್ ತಂಡಕ್ಕೆ ಕೊನೆಯ ಓವರ್’ನಲ್ಲಿ ಗೆಲ್ಲಲು 11 ರನ್’ಗಳ ಅವಶ್ಯಕತೆಯಿತ್ತು. ಮೊದಲ ಎಸೆತವನ್ನು ಕೌರ್ ಒಂಟಿ ರನ್ ತೆಗೆದುಕೊಂಡರು. ಎರಡನೇ ಎಸೆತದಲ್ಲಿ ಎಲೆನೋರ್ ತ್ರೆಕೆಲ್ಡ್ ರನೌಟ್ ಆಗಿ ಪೆವಿಲಿಯನ್ ಸೇರಿದರು. ಇನ್ನು ಮೂರನೇ ಎಸೆತದಲ್ಲಿ ಒಂದು ರನ್ ಲ್ಯಾನ್’ಶೈರ್ ಪಾಲಾಯಿತು. ಕೊನೆಯ ಮೂರು ಎಸೆತಗಳಲ್ಲಿ 8 ರನ್’ಗಳ ಅವಶ್ಯಕತೆಯಿತ್ತು. ನಾಲ್ಕನೇ ಎಸೆತದಲ್ಲಿ ಬೌಂಡರಿ ಹಾಗೂ 5ನೇ ಎಸೆತದಲ್ಲಿ ಸಿಕ್ಸರ್ ಸಿಡಿಸಿ ತಂಡಕ್ಕೆ ರೋಚಕ ಗೆಲುವು ತಂದಿತ್ತರು.