ಚೊಚ್ಚಲ ಅಂತಾರಾಷ್ಟ್ರೀಯ ಏಕದಿನ ಪಂದ್ಯದಲ್ಲೇ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದ ಗುಜರಾತ್‌ನ ಪ್ರತಿಭೆ ಹಾರ್ದಿಕ್ ಪಾಂಡ್ಯ, ಭಾರತದ ಪರ ಈ ಸಾಧನೆ ಮಾಡಿದ ನಾಲ್ಕನೇ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ನವದೆಹಲಿ(ಅ.17): ತಮ್ಮ ಚೊಚ್ಚಲ ಅಂತಾರಾಷ್ಟ್ರೀಯ ಏಕದಿನ ಪಂದ್ಯದಲ್ಲೇ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದ ಗುಜರಾತ್‌ನ ಪ್ರತಿಭೆ ಹಾರ್ದಿಕ್ ಪಾಂಡ್ಯ, ಭಾರತದ ಪರ ಈ ಸಾಧನೆ ಮಾಡಿದ ನಾಲ್ಕನೇ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಧರ್ಮಾಶಾಲಾದಲ್ಲಿ ಭಾನುವಾರ ನಡೆದ ನ್ಯೂಜಿಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ ಪಾಂಡ್ಯ ಮೂರು ವಿಕೆಟ್ ಗಳಿಸಿದ್ದರು. ನಾಯಕ ಧೋನಿಯ ನಿರ್ಣಯದಂತೆ ಮತ್ತೊಬ್ಬ ವೇಗಿ ಉಮೇಶ್ ಯಾದವ್ ಜತೆಯಲ್ಲಿ ಭಾರತದ ಬೌಲಿಂಗ್ ದಾಳಿ ಆರಂಭಿಸಿದ್ದ ಪಾಂಡ್ಯ, ಕಿವೀಸ್ ಪಡೆಯ ಪ್ರಮುಖ ಬ್ಯಾಟ್ಸ್‌ಮನ್‌ಗಳಾದ ಆರಂಭಿಕ ಮಾರ್ಟಿನ್ ಗುಪ್ಟಿಲ್, ಲೂಕ್ ರೊಂಚಿ ಹಾಗೂ ಕೋರೆ ಆ್ಯಂಡರ್ಸನ್ ವಿಕೆಟ್ ಪಡೆದು ಟೀಂ ಇಂಡಿಯಾದಲ್ಲಿ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಭಾರತ ಪರ ಪಾದರ್ಪಣೆ ಪಂದ್ಯದಲ್ಲೇ ಪಂದ್ಯ ಪುರುಷೋತ್ತಮ ಪ್ರಶಸ್ತಿ ಗಳಿಸಿದವರೆಂದರೆ...

1980 ಸಂದೀಪ್ ಪಾಟೀಲ್ ಆಸ್ಟ್ರೇಲಿಯಾದ ಎದುರು

2013 ಮೋಹಿತ್ ಶರ್ಮಾ ಜಿಂಬಾಬ್ವೆ ಎದುರು

2016 ಕೆ.ಎಲ್ ರಾಹುಲ್ ಜಿಂಬಾಬ್ವೆ ಎದುರು