Asianet Suvarna News Asianet Suvarna News

ಕ್ರುನಾಲ್ ಪಾಂಡ್ಯ ದುಬಾರಿ ಓವರ್- ಹಾರ್ಧಿಕ್ ಪಾಂಡ್ಯಾಗೆ ನಗು!

ಟೀಂ ಇಂಡಿಯಾದ ಬ್ರದರ್ಸ್ ಹಾರ್ದಿಕ್ ಪಾಂಡ್ಯ ಹಾಗೂ ಕ್ರುನಾಲ್ ಪಾಂಡ್ಯ ಆತ್ಮೀಯತೆ ಎಲ್ಲರಿಗೂ ತಿಳಿದೆ ಇದೆ. ಇದೀಗ ಇವರಿಬ್ಬರ ನಡುವಿನ ಸಂಭಾಷಣೆಯನ್ನ ಸ್ವತಃ ಕ್ರುನಾಲ್ ಬಹಿರಂಗ ಪಡಿಸಿದ್ದಾರೆ.

Hardik pandya laughed and joked for Krunal pandya expensive over in t20 cricket
Author
Bengaluru, First Published Nov 26, 2018, 7:17 PM IST

ಸಿಡ್ನಿ(ನ.26): ಸಿಕ್ಕಿದ್ದೇ ಚಾನ್ಸ್ ಎಂದು ಅಣ್ಣ ಕ್ರುನಾಲ್ ಪಾಂಡ್ಯ ಎಸೆದ ದುಬಾರಿ ಓವರ್‌ಗೆ ತಮ್ಮ ಹಾರ್ದಿಕ್ ಪಾಂಡ್ಯ ಕಾಲೆಳೆದಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಕ್ರುನಾಲ್ ಪಾಂಡ್ಯ ದುಬಾರಿಯಾಗಿದ್ದರು. 4 ಓವರ್‌ನಲ್ಲಿ ಬರೋಬ್ಬರಿ 55 ರನ್ ನೀಡಿ ನಿರಾಸೆ ಅನುಭವಿಸಿದ್ದರು.

ಕ್ರುನಾಲ್ ಪಾಂಡ್ಯ ದುಬಾರಿ ಪ್ರದರ್ಶನಕ್ಕೆ ಹಾರ್ದಿಕ್ ಪಾಂಡ್ಯ ಕಾಲೆಳೆದಿದ್ದರು. ಗರಿಷ್ಠ ರನ್ ನೀಡಿರುವುದು ಹಾರ್ದಿಕ್‌ಗೆ ನಗು ತರಿಸಿತ್ತು. ಇಷ್ಟೇ ಅಲ್ಲ ಪರ್ಫಾಮೆನ್ಸ್ ಕುರಿತು ಹಾಸ್ಯ ಚಟಾಕಿ ಸಿಡಿಸಿದ್ದ ಎಂದು ಕ್ರುನಾಲ್ ಪಾಂಡ್ಯ ಹೇಳಿದ್ದಾರೆ.

ಕ್ರಿಕೆಟ್ ಕುರಿತು ನಾವು ಹೆಚ್ಚಾಗಿ ಮಾತನಾಡುವುದಿಲ್ಲ. ಹಾರ್ದಿಕ್ ಕೆಟ್ಟ ಪ್ರದರ್ಶನ ನೀಡಿದಾಗ ನಾನು ಕೂಡ ತಮಾಷೆ ಮಾಡಿದ್ದೇನೆ. ಇದೀಗ ಸಿಕ್ಕಿದ ಅವಕಾಶವನ್ನ ಉಪಯೋಗಿಸಿಕೊಂಡು ನನಗೆ ತಮಾಷೆ ಮಾಡಿದ್ದಾನೆ ಎಂದು ಕ್ರುನಾಲ್ ಹೇಳಿದರು.

ಮೊದಲು ಟಿ20 ಪಂದ್ಯದಲ್ಲಿ ದುಬಾರಿಯಾದ ಕ್ರುನಾಲ್, 3ನೇ ಟಿ20 ಪಂದ್ಯದಲ್ಲಿ 4 ವಿಕೆಟ್ ಕಬಳಿಸಿ ಪಂದ್ಯದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಈ ಮೂಲಕ  ಭರ್ಜರಿ ಕಮ್‌ಬ್ಯಾಕ್ ಮಾಡಿದ್ದರು.

Follow Us:
Download App:
  • android
  • ios