ಮತ್ತೊಬ್ಬ ಬಾಲಿವುಡ್ ನಟಿಯೊಂದಿಗೆ ಹಾರ್ದಿಕ್ ಪಾಂಡ್ಯ ಡೇಟಿಂಗ್

Hardik Pandya dating another Bollywood actress
Highlights

ಬಾಲಿವುಡ್ ನಟಿ ಎಲ್ಲಿ ಅವ್ರಾಮ್ ಜೊತೆ ಡೇಟಿಂಗ್ ನಡೆಸುತ್ತಿದ್ದ ಹಾರ್ದಿಕ್ ಪಾಂಡ್ಯ ಇದೀಗ ಮತ್ತೊಬ್ಬ ಬಾಲಿವುಡ್ ನಟಿಯ ಜೊತೆ ಡೇಟಿಂಗ್ ಶುರು ಮಾಡಿದ್ದಾರೆ. ಹಾಗಾದರೆ ಹಾರ್ದಿಕ್ ಪಾಂಡ್ಯ ಮನಸು ಕದ್ದು ಆ ಬಾಲಿವುಡ್ ನಟಿ ಯಾರು? ಇಲ್ಲಿದೆ ವಿವರ.

ಮುಂಬೈ(ಜೂನ್.6) : ಟೀಮ್ಇಂಡಿಯಾ ಸ್ಟಾರ್ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಹೆಸರು ಹಲವು ಬಾಲಿವುಡ್ ನಟಿಯರೊಂದಿಗೆ ಥಳುಕು ಹಾಕಿಕೊಂಡಿದೆ. ಇತ್ತೀಚೆಗೆ ಬಾಲಿವುಡ್ ನಟಿ ಎಲ್ಲಿ ಅವ್ರಾಮ್ ಜೊತೆ ಹಾರ್ದಿಕ್ ಡೇಟಿಂಗ್ ನಡೆಸುತ್ತಿರೋದಾಗಿ ವರದಿಯಾಗಿತ್ತು. ಆದರೆ ಅವ್ರಾಮ್ ಜೊತೆಗಿನ ಬ್ರೇಕ್‌ಅಪ್ ಬಳಿಕ ಮತ್ತೊಬ್ಬ ಬಾಲಿವುಡ್ ನಟಿಯೊಂದಿಗೆ ಡೇಟಿಂಗ್ ಮಾಡುತ್ತಿರು ಮಾತು ಕೇಳಿಬಂದಿದೆ.

ಸ್ಟೈಲೀಶ್ ಕ್ರಿಕೆಟರ್ ಹಾರ್ದಿಕ್ ಪಾಂಡ್ಯ ಸದ್ಯ ಡೇಟಿಂಗ್ ಮಾಡುತ್ತಿರುವುದು ಬಾಲಿವುಡ್ ನಟಿ ಇಶಾ ಗುಪ್ತಾ. ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ಹಾರ್ದಿಕ್ ಪಾಂಡ್ಯ ಇದೀಗ ಇಷಾ ಗುಪ್ತಾ ಇತ್ತೀಚೆಗೆ ಪಾರ್ಟಿಯೊಂದರಲ್ಲಿ ಭೇಟಿಯಾಗಿದ್ದರು. ಡೇಟಿಂಗ್ ವಿಚಾರವನ್ನ ಗೌಪ್ಯವಾಗಿಡಲು ಇವರಿಬ್ಬರು ನಿರ್ಧರಿಸಿದ್ದಾರೆ ಎನ್ನಲಾಗಿದೆ. 

ಕಳೆದೊಂದು ವರ್ಷ ನಟಿ ಎಲ್ಲಿ ಅವ್ರಾಮ್ ಜೊತೆ ಡೇಟಿಂಗ್ ಮಾಡುತ್ತಿದ್ದ ಹಾರ್ದಿಕ್ ಪಾಂಡ್ಯ ಇದೀಗ ಸದ್ದಿಲ್ಲದೇ ಮತ್ತೊಬ್ಬ ನಟಿಯ ಜೊತೆ ಪಾರ್ಟಿ ಶುರು ಮಾಡಿದ್ದಾರೆ. ಹಾರ್ದಿಕ್ ಪಾಂಡ್ಯ ಸಹೋದರ ಕ್ರುನಾಲ್ ಪಾಂಡ್ಯ ಮದುವೆ ಸಂದರ್ಭದಲ್ಲಿ ಹಾರ್ದಿಕ್ ಪಾಂಡ್ಯ ಹಾಗೂ ಅವ್ರಾಮ್ ಜೊತೆಗಿನ ಡೇಟಿಂಗ್ ಬಹಿರಂಗವಾಗಿತ್ತು. ಬಳಿಕ ಅಂತಾರಾಷ್ಟ್ರೀಯ ಪಂದ್ಯದ ವೇಳೆ ಅವ್ರಾಮ್ ಮೈದಾನದಲ್ಲಿ ಕಾಣಿಸಿಕೊಂಡಿದ್ದರು. ಆದರೆ  ರಿಲೇಶನ್‌ಶಿಪ್ ಕುರಿತು ಇವರಿಬ್ಬರು ಎಲ್ಲೂ ಬಾಯಿ ಬಿಟ್ಟಿರಲಿಲ್ಲ.  ಆದರೆ ಇತ್ತೀಚೆಗೆ ಅವ್ರಾಮ್ ಹಾಗೂ ಹಾರ್ದಿಕ್ ಸಂಬಂಧ ಮುರಿದು ಬಿದ್ದಿದೆ ಎನ್ನಲಾಗುತ್ತಿದೆ. ಹೀಗಾಗಿ ಹಾರ್ದಿಕ್ ಇಷಾ ಗುಪ್ತಾ ಜೊತೆ ಸುತ್ತಾಡಲು ರೆಡಿಯಾಗಿದ್ದಾರೆ ಎಂಬ ಮಾಹಿತಿಗಳು ಹೊರಬಿದ್ದಿದೆ.

loader