ಇದಕ್ಕೂ ಮೊದಲು ಕರ್ನಾಟಕದ ಮನೀಶ್ ಪಾಂಡೆ ಐಪಿಎಲ್ 10ನೇ ಆವೃತ್ತಿಯಲ್ಲಿ ಆಡಿದ ಮೊದಲ ಇನ್ನಿಂಗ್ಸ್‌ನಲ್ಲೇ ಸ್ಫೋಟಕ ಬ್ಯಾಟಿಂಗ್ ನಡೆಸಿ ಆತಿಥೇಯ ಮುಂಬೈ ಇಂಡಿಯನ್ಸ್ ಪಾಳೆಯದಲ್ಲಿ ನಡುಕ ಹುಟ್ಟಿಸಿದರು.

ಮುಂಬೈ(ಏ.09): ಕೋಲ್ಕತ್ತಾ ಹಾಗೂ ಮುಂಬೈ ತಂಡಗಳ ನಡುವೆ ನಡೆದ ರೋಚಕ ಪಂದ್ಯದಲ್ಲಿ ಮುಂಬೈ 4 ವಿಕೇಟ್'ಗಳ ಗೆಲುವು ಸಾಧಿಸಿದೆ.

ಜಯ ಕೊನೆಯ ಓವರ್ ವರೆಗೂ 2 ತಂಡಗಳ ಕಡೆಯಿತ್ತು. ನಿತೀಶ್ ರಣ(50: 29 ಎಸತ, 3ಸಿಕ್ಸ್'ರ್, 5 ಬೌಂಡರಿ) ಮತ್ತು ಆಲ್'ರೌಂಡರ್ ಹಾರ್ದಿಕ್ ಪಾಂಡ್ಯ(29: 11 ಎಸೆತ, 2 ಸಿಕ್ಸ್'ರ್, 3 ಬೌಂಡರಿ) ಅವರ ಸ್ಫೋಟಕ ಬ್ಯಾಟಿಂಗ್' ಹಾಗೂ ಕಳಪೆ ಕ್ಷೇತ್ರರಕ್ಷಣೆಯ ಪರಿಣಾಮ ಮುಂಬೈ ಇಂಡಿಯನ್ಸ್ ಗೆಲುವನ್ನು ತನ್ನದಾಗಿಸಿಕೊಂಡಿತು.

ಪಾರ್ಥೀವ್ ಪಟೇಲ್ ಹಾಗೂ ಬಟ್ಲರ್ ಕೂಡ ಗೆಲುವಿಗೆ ಆರಂಭಿಕ ಮುನ್ನಡಿ ಬರೆದಿದ್ದರು. ಕೋಲ್ಕತ್ತಾದ ರಜಪೂತ್ 3 ವಿಕೇಟ್ ಪಡೆದರೂ ಯಾವುದೇ ಪ್ರಯೋಜನವಾಗಲಿಲ್ಲ.

ನಡುಕ ಹುಟ್ಟಿಸಿದ ಕನ್ನಡಿಕ ಪಾಂಡೆ

ಇದಕ್ಕೂ ಮೊದಲು ಕರ್ನಾಟಕದ ಮನೀಶ್ ಪಾಂಡೆ ಐಪಿಎಲ್ 10ನೇ ಆವೃತ್ತಿಯಲ್ಲಿ ಆಡಿದ ಮೊದಲ ಇನ್ನಿಂಗ್ಸ್‌ನಲ್ಲೇ ಸ್ಫೋಟಕ ಬ್ಯಾಟಿಂಗ್ ನಡೆಸಿ ಆತಿಥೇಯ ಮುಂಬೈ ಇಂಡಿಯನ್ಸ್ ಪಾಳೆಯದಲ್ಲಿ ನಡುಕ ಹುಟ್ಟಿಸಿದರು.

ಭಾನುವಾರ ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯಾವಳಿಯ ಏಳನೇ ಪಂದ್ಯದಲ್ಲಿ ಪಾಂಡೆ (81: 47 ಎಸೆತ, 5 ಬೌಂಡರಿ, 5 ಸಿಕ್ಸರ್) ಬಿಡುಬೀಸಿನ ಅಜೇಯ ಆಟವಾಡಿ ಕೋಲ್ಕತಾ ನೈಟ್ ರೈಡರ್ಸ್‌ (ಕೆಕೆಆರ್) ತಂಡಕ್ಕೆ ಆಸರೆಯಾದರು.

87 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡಿದ್ದ ವೇಳೆ ಎಚ್ಚರಿಕೆಯಿಂದ ಇನ್ನಿಂಗ್ಸ್ ಕಟ್ಟಿದ ಅವರು ತಾವೆದುರಿಸಿದ ಮೊದಲ 30 ಎಸೆತಗಳಲ್ಲಿ 35 ರನ್ ಗಳಿಸಿ ಕ್ರೀಸ್‌ನಲ್ಲಿ ಗಟ್ಟಿಯಾಗಿ ನೆಲೆಯೂರಿದರು.

ಆನಂತರ ಕೊನೆಯ 17 ಎಸೆತಗಳಲ್ಲಿ 46 ರನ್ ಚಚ್ಚಿದ ಪಾಂಡೆ ತಂಡ ಗೌರವದಾಯಕ ಮೊತ್ತ ಕಲೆಹಾಕಲು ನೆರವಾದರು. ಅಂದಹಾಗೆ ಐಪಿಎಲ್‌ನಲ್ಲಿ ಇದು ಅವರ 8ನೇ ಅರ್ಧಶತಕ. ಐಪಿಎಲ್ ವೃತ್ತಿಬದುಕಿನ ಕೊನೆಯ ನಾಲ್ಕು ಓವರ್‌ಗಳಲ್ಲಿ 172.77ರ ಸ್ಟ್ರೈಕ್‌ರೇಟ್ ಹೊಂದಿರುವ ಪಾಂಡೆ ತನ್ನೀ ಬಿರುಸಿನ ಮನೋಭಾವಕ್ಕೆ ತಕ್ಕ ಆಟವಾಡಿದರು. 20ನೇ ಓವರ್‌ನಲ್ಲಿ ಮಿಚೆಲ್ ಮೆಕ್ಲನಘನ್ ವಿರುದ್ಧ ಪಾಂಡೆ ತೋರಿದ ಆಟ ಅಭಿಮಾನಿಗಳ ಮನಸೆಳೆಯಿತು. ನ್ಯೂಜಿಲೆಂಡ್ ವೇಗಿಯನ್ನು ಗೊಂದಲಕ್ಕೆ ಸಿಲುಕಿಸಿದ ಪಾಂಡೆ 2 ಸಿಕ್ಸರ್ ಹಾಗೂ 1 ಬೌಂಡರಿಯೊಂದಿಗೆ ವಿಜೃಂಭಿಸಿದರು. ಹೀಗಾಗಿ ಅಂತಿಮ ಓವರ್‌ನಲ್ಲಿ ಕೋಲ್ಕತಾ 23 ರನ್‌ಗಳನ್ನು ಕಲೆಹಾಕಿತು.

ಸ್ಕೋರ್ ಬೋರ್ಡ್

ಕೋಲ್ಕತಾ ನೈಟ್ ರೈಡರ್ಸ್‌ :20 ಓವರ್‌ಗಳಲ್ಲಿ 178/7

ಮುಂಬೈ ಇಂಡಿಯನ್ಸ್: 19.5 ಓವರ್'ಗಳಲ್ಲಿ 180/6

ಪಂದ್ಯ ಶ್ರೇಷ್ಠ: ಹರ್ಧಿಕ್ ಪಾಂಡ್ಯ

--